ಇಂದು ಇಫ್ತಿಯಾರ್ ಕೂಟ
ಬಳ್ಳಾರಿ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಳ್ಳಾರಿಯ ಶ್ರೀ ಶರಣಂ ಅನ್ನದಾನ ಕೇಂದ್ರದ ವತಿಯಿಂದ ಮುಸ್ಲಿಂ ಬಾಂಧವರಿಗಾಗಿ 18ನೇ ವರ್ಷದ ಇಫ್ತಿಯಾರ್ ಕೂಟವನ್ನು ಜು. 31ರಂದು ಸಂಜೆ 6.30ಕ್ಕೆ ನಗರದ ಬ್ರೂಸ್‌ಪೇಟೆ ಮತ್ತು ಕೌಲ್‌ಬಜಾರ್ ಪ್ರದೇಶದ ಮಸೀದಿಗಳಲ್ಲಿ ಏರ್ಪಡಿಸಲಾಗಿದೆ. ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶರಣಂ ಅನ್ನದಾನ ಕೇಂದ್ರದ ವ್ಯವಸ್ಥಾಪಕ ಎನ್. ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 13ರಂದು ಕರಿಮಾರೆಮ್ಮ ಜಾತ್ರೆ
ಬಳ್ಳಾರಿ: ನಗರದ ಶ್ರೀ ಕರಿಮಾರೆಮ್ಮ ದೇವಸ್ಥಾನದ ವಾರ್ಷಿಕ ಜಾತ್ರೆಯು ಆ. 13ರಂದು ಜರುಗಲಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್. ರವೀಂದ್ರ ತಿಳಿಸಿದ್ದಾರೆ. ಜಾತ್ರೆ ಅಂಗವಾಗಿ ಅಂದು ಬೆಳಗ್ಗೆ 8.30 ಗಂಟೆಗೆ ನಗರದ ಕೌಲ್‌ಬಜಾರ್ ಮುಖ್ಯ ರಸ್ತೆಯಿಂದ ಪ್ರತಿ ವರ್ಷ ಪದ್ಧತಿ ಪ್ರಕಾರ ಶ್ರೀ ಕರೆಮಾರೆಮ್ಮ ದೇವಿಯ ಉತ್ಸವ ಪ್ರಾರಂಭಗೊಂಡು ಮಧ್ಯಾಹ್ನ ದೇವಸ್ಥಾನ ತಲುಪಲಿದೆ. ಸಂಜೆ 4 ಗಂಟೆ ನಂತರ ಮಹಾಕುಂಭ ಜಲ ಉತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಡೊಳ್ಳು ಕುಣಿತ ಮತ್ತು ತಾಷಾರಮ್ ಡೋಲ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.
ಶೀಲ ಶಂಕೆ: ಪತ್ನಿ ಕೊಲೆ
ಬಳ್ಳಾರಿ: ಪತ್ನಿ ಶೀಲ ಶಂಕಿಸಿ ಪತಿಯೋರ್ವ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕುರುಗೊಡು ಪೊಲೀಸ್ ಠಾಣೆ ವ್ಯಾಪ್ತಿಯ ಎಚ್. ವೀರಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕೊಲೆಯಾದವಳನ್ನು ಗ್ರಾಮದ ಮಹಾಲಿಂಗಮ್ಮ (32) ಎಂದು ಗುರುತಿಸಲಾಗಿದೆ. ಪತ್ನಿಯ ಶೀಲದ ಕುರಿತು ಅನುಮಾನಗೊಂಡಿದ್ದ ದೊಡ್ಡಬಸಪ್ಪ ಎಂಬುವವ ಮಂಗಳವಾರ ಮಧ್ಯಾಹ್ನ ಮನೆಯಲ್ಲಿದ್ದ ಮಹಾಲಿಂಗಮ್ಮಳ ಕತ್ತು ಹಿಸುಕಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

