ಬಳ್ಳಾರಿ

ಮಲ್ಲಿಗೆಗೆ ರಾಷ್ಟ್ರೀಯ ಮಾನ್ಯತೆ: ಬೆಳೆಗಾರರಿಗಿಲ್ಲ ಆದ್ಯತೆ

Published On :

ಹೂವಿನಹಡಗಲಿ: ಹೂವಿನಹಡಗಲಿ ತಾಲೂಕಿನಲ್ಲಿ ಬೆಳೆಯುತ್ತಿರುವ ಪರಿಮಳಯುಕ್ತ ಮಲ್ಲಿಗೆಗೆ ಭಾರತ ಸರ್ಕಾರ ರಾಷ್ಟ್ರೀಯ ಮಾನ್ಯತೆ ನೀಡಿದೆ. ಆದರೂ ಮಲ್ಲಿಗೆ ಬೆಳೆಗಾರರಿಗೆ ಮಾತ್ರ ಯಾವುದೇ ಆದ್ಯತೆ ಸಿಗುತ್ತಿಲ್ಲ. ಈ ಕುರಿತು ತೋಟಗಾರಿಕೆ ಇಲಾಖೆ ರಾಜ್ಯದಲ್ಲಿ ಬೆಳೆಯುತ್ತಿರುವ ವಿವಿಧ ಬಗೆಯ 7 ಬೆಳೆಗಳಿಗೆ ಭೌಗೋಳಿಕ ನೋಂದಣಿಗಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಇದರನ್ವಯ ಭಾರತ ಸರ್ಕಾರ ಹೂವಿನಹಡಗಲಿ ಮಲ್ಲಿಗೆ ಸೇರಿದಂತೆ 7 ಬೆಳೆಗಳಿಗೆ ರಾಷ್ಟ್ರೀಯ ಮಾನ್ಯತೆ ನೀಡಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕ ಡಾ. ಡಿ.ಬಿ. ಯೋಗಾನಂದ ಮಾಹಿತಿ ನೀಡಿದ್ದಾರೆ.
ಉದ್ದೇಶ: ಮಲ್ಲಿಗೆ ಬೆಳೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿರುವುದರಿಂದ ಹೂವಿನಹಡಗಲಿ ಮಲ್ಲಿಗೆ ಬೆಳೆಯನು ಯಾರೂ ನಕಲು ಮಾಡುವಂತಿಲ್ಲ. ಈ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಶಿಫಾರಸಿನಂತೆ ಬೆಂಗಳೂರಿನ ಹುಳಿಮಾವು ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ನೋಂದಣಿ ಮಾಡಲಾಗಿದೆ. ಹೂವಿನಹಡಗಲಿ ಮಲ್ಲಿಗೆಯ ಘಮ ಘಮ ಸುವಾಸನೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ವ್ಯಾಪಿಸಿದ್ದು, ಉದ್ದೇಶಿತ ದಾವಣಗೆರೆ ಇಂಟರ್‌ನ್ಯಾಷನಲ್ ಪ್ಲವರ್ ಆ್ಯಕ್ಷನ್ ಸೆಂಟರ್ ಮೂಲಕ ಬೆಳೆಗಾರನಿಂದ ನೇರವಾಗಿ ಖರೀದಿದಾರನಿಗೆ ಮಲ್ಲಿಗೆ ಪೂರೈಸುವ ವ್ಯವಸ್ಥೆ ಜಾರಿಗೆ ಮಾಡುವ ಉದ್ದೇಶವಿದೆ. ಇದರಿಂದ ಮಲ್ಲಿಗೆ ಬೆಳೆಗಾರರು ಮಧ್ಯವರ್ತಿಗಳ ಹಾವಳಿಯಿಂದ ಬಚಾವಾಗಿ ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗಲಿದೆ ಎನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.