ಬಳ್ಳಾರಿ

ಮತ ಕುತೂಹಲಕ್ಕೆ ನಾಳೆ ತೆರೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 9
ಮಾ. 11ರಂದು ನಡೆಯುವ ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಲಾಗಿದೆ.
33 ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದ್ದು, 261 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ, ಸಿರುಗುಪ್ಪ ಪುರಸಭೆ ಹಾಗೂ ತೆಕ್ಕಲಕೋಟೆ ಪಪಂ ಚುನಾವಣೆಯ ಮತ ಎಣಿಕೆ ಸಿರುಗುಪ್ಪ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ, ಸಂಡೂರು ಪುರಸಭೆಯ ಮತ ಎಣಿಕೆ ಸಂಡೂರು ತಾಲೂಕು ಕಚೇರಿ, ಹೊಸಪೇಟೆ ನಗರಸಭೆ, ಕಮಲಾಪುರ ಪಪಂ ಹಾಗೂ ಕಂಪ್ಲಿ ಪುರಸಭೆ ಮತ ಎಣಿಕೆ ಹೊಸಪೇಟೆಯ ಲಿಟಲ್ ಫ್ಲವರ್ ಸ್ಕೂಲ್ನಲ್ಲಿ, ಹಡಗಲಿ ಪುರಸಭೆ ಚುನಾವಣೆಯ ಮತ ಎಣಿಕೆ ಹಡಗಲಿ ತಾಲೂಕು ಕಚೇರಿ ಹಾಗೂ ಕೊಟ್ಟೂರು ಮತ್ತು ಕೂಡ್ಲಿಗಿ ಪಪಂ ಚುನಾವಣೆಯ ಮತ ಎಣಿಕೆ ಕೂಡ್ಲಿಗಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
33 ಚುನಾವಣಾಧಿಕಾರಿಗಳ ನೇಮಕ: ಮತ ಎಣಿಕೆಗಾಗಿ ಒಟ್ಟು 33 ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. 74 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಮತ ಎಣಿಕೆಗಾಗಿ 7 ಚುನಾವಣಾಧಿಕಾರಿಗಳು ಹಾಗೂ 42 ಟೇಬಲ್ಗಳ, ಹೊಸಪೇಟೆ ನಗರಸಭೆಯ ಮತ ಎಣಿಕೆಗಾಗಿ 6 ಚುನಾವಣಾಧಿಕಾರಿಗಳು ಹಾಗೂ 12 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಸಿರುಗುಪ್ಪ, ಸಂಡೂರು, ಕಂಪ್ಲಿ ಮತ್ತು ಹಡಗಲಿ ಪುರಸಭೆಗಳಿಗಾಗಿ ತಲಾ 3 ಚುನಾವಣಾಧಿಕಾರಿಗಳು ಹಾಗೂ ತಲಾ 3 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ತೆಕ್ಕಲಕೋಟೆ, ಕಮಲಾಪುರ, ಕೂಡ್ಲಿಗಿ ಹಾಗೂ ಕೊಟ್ಟೂರು ಪಪಂ ಮತ ಎಣಿಕೆಗಾಗಿ ತಲಾ ಇಬ್ಬರು ಚುನಾವಣಾಧಿಕಾರಿಗಳು ಹಾಗೂ 2 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ.
261 ಸಿಬ್ಬಂದಿಗಳ ನಿಯೋಜನೆ: ಮತ ಎಣಿಕೆಗಾಗಿ 76 ಎಣಿಕೆ ಮೇಲ್ವಿಚಾರಕರು, 109 ಎಣಿಕೆ ಸಹಾಯಕರು ಹಾಗೂ 76 ಗ್ರ್ರೂಪ್ ಡಿ ಸಿಬ್ಬಂದಿ ಸೇರಿ ಒಟ್ಟು 261 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಳ್ಳಾರಿ - 42 ಮೇಲ್ವಿಚಾರಕರು, 42 ಎಣಿಕೆ ಸಹಾಯಕರು ಹಾಗೂ 42 ಗ್ರುಪ್ ಡಿ ಸಿಬ್ಬಂದಿ ನಿಯೋಜಿಸಲಾಗಿದೆ.  ಸಿರುಗುಪ್ಪ - 5 ಮೇಲ್ವಿಚಾರಕರು, 10 ಸಹಾಯಕರು ಹಾಗೂ 5 ಗ್ರುಪ್ ಡಿ, ಸಂಡೂರು - 3 ಮೇಲ್ವಿಚಾರಕರು, 6 ಸಹಾಯಕರು ಹಾಗೂ 3 ಗ್ರೂಪ್ ಡಿ, ಹೊಸಪೇಟೆ - 19 ಮೇಲ್ವಿಚಾರಕರು, 37 ಸಹಾಯಕರು ಹಾಗೂ 19 ಗ್ರೂಪ್ ಡಿ, ಕೂಡ್ಲಿಗಿ - 4 ಮೇಲ್ವಿಚಾರಕರು, 8 ಸಹಾಯಕರು ಹಾಗೂ 4 ಗ್ರೂಪ್ ಡಿ, ಹಡಗಲಿ - 3 ಎಣಿಕೆ ಮೇಲ್ವಿಚಾರಕರು, 6 ಎಣಿಕೆ ಸಹಾಯಕರು ಹಾಗೂ 3 ಗ್ರೂಪ್ ಡಿ ಸಿಬ್ಬಂದಿ ನಿಯೋಜಿಸಲಾಗಿದೆ.
ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ: ಮತ ಎಣಿಕೆ ಕೇಂದ್ರಗಳ ಸೂಕ್ತ ಬಂದೋಬಸ್ತ್ಗಾಗಿ 6 ಡಿಎಸ್ಪಿ, 10 ಸಿಪಿಐ, 21 ಎಸ್ಐ, 24 ಎಎಸ್ಐ, 162 ಎಚ್ಸಿ, 162 ಪಿಸಿ, ಡಿಎಆರ್ 6 ಪಾರ್ಟಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 5,19,395 ಮತದಾರರಿದ್ದು, ಅವರಲ್ಲಿ 3,60,992 (ಶೇ. 70) ಮತದಾರರು ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ. ಮಹಾನಗರ ಪಾಲಿಕೆಯ ಮತ ಎಣಿಕೆಯನ್ನು ಒಟ್ಟು ಐದು ಸುತ್ತಿನಲ್ಲಿ ನಡೆಸಲಾಗುವುದು. ಪ್ರತಿ ಸುತ್ತಿಗೆ ಅಂದಾಜು ಅರ್ಧ ಗಂಟೆ ಸಮಯ ತೆಗೆದುಕೊಳ್ಳಲಾಗುವುದು. ಮೊದಲನೇ ಸುತ್ತಿನಲ್ಲಿ ವಾರ್ಡ್ 1, 6, 11, 16, 21, 26, 31. ಎರಡು ಮತ್ತು ಮೂರನೇ ಸುತ್ತಿನಲ್ಲಿ ವಾರ್ಡ್ ಸಂಖ್ಯೆ 2, 3, 7, 8, 12, 13, 17, 18, 22, 27, 28, 32, 33, ನಾಲ್ಕನೇ ಸುತ್ತಿನಲ್ಲಿ 4, 9, 14, 19, 24, 34 ಹಾಗೂ ಐದನೇ ಸುತ್ತಿನಲ್ಲಿ ವಾರ್ಡ್ ಸಂಖ್ಯೆ 5, 10, 15, 20, 25, 30ರ ಮತ ಎಣಿಕೆ ನಡೆಸಲಾಗುವುದು ಎಂದರು.
ಪ್ರತಿ ಎಣಿಕೆ ಟೇಬಲ್ಗೆ ಪ್ರತಿ ಅಭ್ಯರ್ಥಿಯ ಎಣಿಕೆ ಟೇಬಲ್ ಏಜೆಂಟರನ್ನು ನೇಮಿಸಬಹುದಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಸ್ಪರ್ಧಿಸಿದ ಅಭ್ಯರ್ಥಿಯಾಗಲಿ ಅಥವಾ ಆತನ ಚುನಾವಣಾ ಏಜೆಂಟನಾಗಲೀ ಅರ್ಹರು. ಆದರೆ  ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯಾಗಲಿ ಅಥವಾ ಆತನ ಚುನಾವಣಾ ಏಜೆಂಟನಾಗಲೀ ಯಾರಾದರೂ ಒಬ್ಬರು ಮಾತ್ರ ಮತ ಎಣಿಕೆ ಕೊಠಡಿಯೊಳಗೆ ಪ್ರವೇಶಿಸಬಹುದು.
ಎಣಿಕೆ ಟೇಬಲ್ಗೆ ನಿಯೋಜಿತ ಏಜೆಂಟರು ನಿಗದಿಪಡಿಸಿದ ಟೇಬಲ್ಗೆ ಹಾಜರಿರಬೇಕು. ಜನ ಪ್ರಜಾ ಪ್ರತಿನಿಧಿಗಳಾದ ಎಂಎಲ್ಎ, ಎಂಪಿ, ಎಂಎಲ್ಸಿ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ರಕ್ಷಣೆ ಹೊಂದಿದವರು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.