ಬಳ್ಳಾರಿ

ತೋಟಗಾರಿಕೆ ಕಾಲೇಜು ಪ್ರವೇಶಾತಿಗೂ ಸಿಇಟಿ

Published On :

ಕ.ಪ್ರ. ವಾರ್ತೆ ಮುನಿರಾಬಾದ್ ಮಾ.23
ಇನ್ನು ಮುಂದೆ ತೋಟಗಾರಿಕೆ ಕಾಲೇಜಿನಲ್ಲಿ ಸೀಟು ಪಡೆಯಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಸಿಇಟಿ ಬರೆಯಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.
ರಾಜ್ಯದ 7 ತೋಟಗಾರಿಕೆ ಕಾಲೇಜುಗಳಲ್ಲಿ 500 ಸೀಟ್‌ಗಳು ಲಭ್ಯವಿದ್ದು, ರೈತರ ಮಕ್ಕಳಿಗಾಗಿ ಶೇ.24 ಸೀಟುಗಳನ್ನು ಗದಿಪಡಿಸಲಾಗಿದೆ. ಉಳಿದ 370 ಸೀಟುಗಳನ್ನು ಸಿಇಟಿ ಮೂಲಕ ಭರ್ತಿ ಮಾಡಲಾಗುವುದು ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ.
ವಿದ್ಯಾರ್ಥಿಗಳ ಸಮೂಹದಲ್ಲಿ ತೋಟಗಾರಿಕೆ ಕೋರ್ಸ್ ಜನಪ್ರಿಯತೆ ಪಡೆದಿರುವ ಹಿನ್ನೆಲೆಯಲ್ಲಿ ಸಿಇಟಿ ನಡೆಸಲು ತೋಟಗಾರಿಕೆ ವಿವಿ ನಿರ್ಧರಿಸಿದೆ ಎನ್ನಲಾಗಿದೆ. ರಾಜ್ಯದ 7 ತೋಟಗಾರಿಕೆ ಕಾಲೇಜುಗಳನ್ನು ಸರ್ಕಾರವೇ ನಡೆಸುತ್ತಿದ್ದು, ವಿದ್ಯಾರ್ಥಿಗಳು ಡೊನೇಷನ್ ನೀಡಬೇಕಾಗಿಲ್ಲ. ಮೆರಿಟ್ ಆಧಾರದಲ್ಲೇ ಆಯ್ಕೆ ನಡೆಯುತ್ತದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮಾತ್ರ ತೋಟಗಾರಿಕೆ ವಿವಿಗಳಿವೆ. ಆದರೆ, ಪ್ರಸಕ್ತ ವರ್ಷದಿಂದ ಸಿಇಟಿ ನಡೆದರೆ, ತೋಟಗಾರಿಕೆ ಕಾಲೇಜುಗಳಿಗೆ ಸಿಇಟಿ ಪರೀಕ್ಷೆ ನಡೆಸುವ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.