ಬಳ್ಳಾರಿ

ಇಂದು ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ

Published On :

ಬಳ್ಳಾರಿ: ದಕ್ಷಿಣ ಭಾರತದ 2ನೇ ಅತಿ ದೊಡ್ಡ ಮತ್ತು ಏಕಶಿಲಾ ಮೂರ್ತಿ ಕುರುಗೋಡು ಶ್ರೀ ದೊಡ್ಡಬಸವೇಶ್ವರ(ನಂದಿ)ಸ್ವಾಮಿ ರಥೋತ್ಸವ ಮಾ. 27 ಬುಧವಾರ ಸಂಜೆ ಜರುಗಲಿದೆ.
ಪ್ರತಿ ವರ್ಷ ಫಾಲ್ಗುಣ ಶುದ್ಧ ಹೋಳಿ ಹುಣ್ಣಿಮೆ ದಿನ ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ನಡೆಯುತ್ತದೆ. ಮಹಾಭಾರತದ ಕಾಲದಲ್ಲಿ ಕುಂತಳ ರಾಜ್ಯದ ರಾಜಧಾನಿಯಾಗಿದ್ದ ಕುರುಗೋಡು ಅಂದಿನ ಅರಸ ಚಂದ್ರಹಾಸ ರಾಜ್ಯಭಾರ ಮಾಡುತ್ತಿದ್ದನೆಂದು ಪ್ರತೀತಿ ಇದೆ. ಹಂಪಿ ವಿರೂಪಾಕ್ಷೇಶ್ವರನಿಗೆ ಅಭಿಮುಖವಾಗಿ, ಎದುರು ಬಸವಣ್ಣನ ಸಂಕೇತವಾಗಿ 13 ಅಡಿ ಎತ್ತರದ ನಂದಿಯ ಬೃಹದಾಕಾರದ ಏಕಶಿಲಾಮೂರ್ತಿಯನ್ನು ವಿಜಯನಗರ ಸಾಮ್ರಾಜ್ಯದಲ್ಲಿ ವಿಲೀನವಾಗಿದ್ದ ಕುರುಗೋಡಿನಲ್ಲಿ ನಿರ್ಮಿಸಲಾಗಿದೆ.
ದೃಶ್ಯವೇ ಸೋಜಿಗ: ಪ್ರತಿ ಯುಗಾದಿ ದಿನ ಸೂರ್ಯೋದಯಕ್ಕೆ ಹಂಪಿ ವಿರೂಪಾಕ್ಷೇಶ್ವರ ಮೂರ್ತಿಗೆ ಮತ್ತು ಅದೇ ದಿನ ಸೂರ್ಯಾಸ್ತಕ್ಕೆ ಕುರುಗೋಡು ದೊಡ್ಡಬಸವೇಶ್ವರ ಮೂರ್ತಿಗೆ ಸೂರ್ಯ ಕಿರಣಗಳು ಬೀಳುತ್ತವೆ. ಈ ಅಭೂತಪೂರ್ವ ದೃಶ್ಯ ನೋಡಲು ಅನೇಕ ಭಕ್ತರು ಯುಗಾದಿ ಹಬ್ಬದ ದಿನ ಕುರುಗೋಡು ಮತ್ತು ಹಂಪಿಗೆ ತೆರಳಿ ಪುನೀತರಾಗುತ್ತಾರೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಿತವಾಗಿರಬಹುದೆಂದು ಹೇಳಲಾಗುತ್ತಿರುವ ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನ ಪಶ್ಚಿಮಾಭಿಮುಖವಾಗಿದ್ದು, ವಿಜಯನಗರ ಕಾಲದಲ್ಲಿ ನಿರ್ಮಿತವಾಗಿರುವ ದೇವಾಲಯಗಳ ಶಿಲ್ಪಕಲಾ ಮಾದರಿಯಲ್ಲಿದೆ. ಕುರುಗೋಡು ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಹಂಪಿ ಜೊತೆಗೆ ತಳಕು ಹಾಕಿಕೊಂಡಿರುವುದರಿಂದ ಕುರುಗೋಡು ಸಹಿತ ಹಂಪಿ ರೀತಿಯಲ್ಲಿಯೆ ದಕ್ಷಿಣ ಕಾಶಿ ಎಂದು ಹೆಸರು ಪಡೆದಿದೆ.
18ನೇ ಶತಮಾನದ ಉತ್ತರಾರ್ಧದಲ್ಲಿ ಸಿಂದಿಗೇರಿ ಗ್ರಾಮದಿಂದ ಬಂದ ಶಿವಶರಣೆ ನೀಲಮ್ಮ ಕುರುಗೋಡು ಕೆಳಗಿನ ಪೇಟೆಯ ಮಠದಲ್ಲಿ ನೆಲೆಸಿದ್ದಾಳೆ. ಇದನ್ನು ಶಿವಶರಣೆ ನೀಲಮ್ಮ ಮಠವೆಂದು ಕರೆಯಲಾಗುತ್ತಿದೆ. ಶಿವಶರಣೆ ನೀಲಮ್ಮ ಅನೇಕ ಪವಾಡಗಳನ್ನು ಮಾಡಿರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಕುರುಗೋಡು ದೊಡ್ಡಬಸವೇಶ್ವರ ಮತ್ತು ಶಿವಶರಣೆ ನೀಲಮ್ಮನವರ ವಿಶೇಷ ಉತ್ಸವಗಳನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ರಥೋತ್ಸವದಲ್ಲಿ ಪಾಲ್ಗೊಳ್ಳುವವರಿಗಾಗಿ ಕಂಪ್ಲಿ, ಬಳ್ಳಾರಿ, ಸಿರುಗುಪ್ಪ, ಕುಡುತಿನಿ ಭಾಗಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.