ಸಂಭಾಜಿ ಪಾಟೀಲ್ ಗಡಿಪಾರು ಮಾಡಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 27
ಎಂಇಎಸ್ ಮುಖಂಡ ಹಾಗೂ ಶಾಸಕ ಸಂಭಾಜಿ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ತಾರೀಹಳ್ಳಿ ಹನುಮಂತಪ್ಪ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ಮುಖಂಡ ಹಾಗೂ ಶಾಸಕ ಸಂಭಾಜಿ ಪಾಟೀಲ್ ಮರಾಠಿಯಲ್ಲಿ ಭಾಷಣ ಮಾಡಿ, ಸರ್ಕಾರಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಈ ಮೂಲಕ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದ್ದಾರೆ. ತಕ್ಷಣವೇ ಎಂಇಎಸ್ ಮುಖಂಡ ಹಾಗೂ ಶಾಸಕ ಸಂಭಾಜಿ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ಅಮಾನತ್ತುಗೊಳಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕನ್ನಡಪರ ಹೋರಾಟಗಾರ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರಿಗೆ ಗೂಂಡಾ ಎಂಬ ಪದವನ್ನು ಬಳಸಿದ್ದಾರೆ. ಮರಾಠಿಗರು ಮತ್ತು ಕನ್ನಡಿಗರ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿರುವ ಶಾಸಕ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ಅಮಾನತ್ತು ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಸೀಲ್ದಾರ್ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಆರ್ಮುಗಂ, ಬಾಲೇಸಾಬ್, ಜೆ.ಎಸ್. ಸಲೀಂ, ಎಸ್.ಎಂ. ಜಾಫರ್, ರಾಮಚಂದ್ರಪ್ಪ, ನಗರ ಘಟಕದ ಜಿ.ಎಸ್. ಆಂಜಿನೇಯಲು, ರಾಮು, ಶಿವು, ನಜೀರ್, ಭೀಮಣ್ಣ, ಮರಿಯಮ್ಮನಹಳ್ಳಿ ಘಟಕದ ಬ್ಯಾಲಕುಂದಿ ರಮೇಶ್ ಜಿ. ಶ್ರೀನಿವಾಸ್, ಕೆ. ಸಿದ್ದೇಶ್, ಕೆ. ವಿಜಯಕುಮಾರ್, ಗಾದಿಗನೂರು ಘಟಕದಿಂದ ಎಂ. ದುರುಗಪ್ಪ, ರತ್ನಮ್ಮ, ಭಾರತಿ, ಕೊಟ್ರಮ್ಮ, ಶೇಖನಬಿ, ಮಹಿಳಾ ಘಟಕದ ಎಚ್.ಎಸ್. ಹೇಮಾವತಿ, ಲತಾ, ಸುಮಾ, ಲಕ್ಷ್ಮೀದೇವಿ, ಸುವರ್ಣಾ, ಶೈಲಜಾ, ವೀಣಾ, ವಿಜಯಲಕ್ಷ್ಮಿ, ಫಾತೀಮಾ, ಸಾವಿತ್ರಿ, ಗಂಗಮ್ಮ, ಓಬಳಮ್ಮ, ನಿಂಗಮ್ಮ, ಸರೋಜಾ, ಗೀತಾ, ಲಕ್ಷ್ಮಮ್ಮ, ಶ್ರೀಲತಾ, ಲಕ್ಷ್ಮೀ, ಚಿನ್ನಿ, ಎಚ್. ಲಕ್ಷ್ಮೀ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

