ಘನತೆ ಬದುಕು ರೂಪಿಸಿ
ಹೊಸಪೇಟೆ: ಸ್ಲಂ ಜನರಿಗೆ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದು ಕರ್ನಾಟಕ ಸ್ಲಂ ಜನಾಂದೋಲನ ರಾಜ್ಯ ಕಾರ್ಯದರ್ಶಿ ಎ. ನರಸಿಂಹಮೂರ್ತಿ ಹೇಳಿದರು.
ನಗರದಲ್ಲಿ ಬುಧವಾರ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಗರ ಭೂಮಿಯಲ್ಲಿ ಸ್ಲಂ ಜನರಿಗೆ ಪಾಲು, ಹೊಸ ಸ್ಲಂಗಳ ಘೋಷಣೆ ಹಾಗೂ ಆಧಾರ್ ಕಾರ್ಡ್ ಹಿಂಪಡೆಯಬೇಕು, ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿ ಕರದಲ್ಲಿ ಶೇ. 25ರಷ್ಟು ಹಣವನ್ನು ಸ್ಲಂ ಬೆಳವಣಿಗೆಗೆ ವಿನಿಯೋಗಿಸಬೇಕೆಂಬ ಬೇಡಿಕೆಗಳೊಂದಿಗೆ ಅ. 28ರಂದು ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಅಂಬೇಡ್ಕರ್ ಸಮಾನತೆ ಆಶಯವನ್ನು ನನಸುಗೊಳಿಸುವ ದಿಶೆಯಲ್ಲಿ ಸ್ಲಂ ಜನಾಂದೋಲನ ಸಮಿತಿ ರೂಪಗೊಂಡಿದ್ದು, ಇದರ ಆಶಯವನ್ನು ಅರ್ಥ ಮಾಡಿಕೊಂಡು ತಾರತಮ್ಯ ನಿವಾರಣೆಗೆ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದರು.
ಕರ್ನಾಟಕ ಸ್ಲಂ ಜನಾಂದೋಲನ ಮುಖಂಡ ಚಿತ್ರದುರ್ಗದ ಪಾಪಣ್ಣ ಮಾತನಾಡಿ, ಸಂಘಟನೆ, ಹೋರಾಟ ಬಹಳ ಮುಖ್ಯ. ಸಂಘಟಿತ ಪ್ರಯತ್ನ ನಡೆಸಿದರೆ ಮಾತ್ರ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದು ಹೇಳಿದರು.
ಸ್ಲಂ ಜನ ಜಾಗೃತಿ ಅಂದೋಲನ ಸಮಿತಿ ಕಾನೂನು ಸಲಹೆಗಾರ್ತಿ ಸುನಂದಾ ಮಾತನಾಡಿ, ಕಾನೂನು ನೆರವು ಪಡೆದು ಹೋರಾಟ ರೂಪಿಸಬೇಕು. ಕಾನೂನು ನೆರವು ಪಡೆಯುವ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.
ಸ್ಲಂ ಜನಜಾಗೃತಿ ಆಂದೋಲನ ಸಮಿತಿ ರಾಜ್ಯ ಸಂಚಾಲಕ ರಾಮಚಂದ್ರ, ಸ್ಲಂ ಜನಜಾಗೃತಿ ಅಂದೋಲನ ಸಮಿತಿ ಸಂಚಾಲಕಿ ಹುಲಿಗೆಮ್ಮ, ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಅಧ್ಯಕ್ಷ ಪಿ. ಸುನೀಲ್, ಮಹಿಳಾ ಘಟಕ ಅಧ್ಯಕ್ಷೆ ಮೈಮುನ್ನೀಸ, ಗೌರವಾಧ್ಯಕ್ಷ ಹುಸೇನ್ಸಾಬ್, ವಕೀಲ ಸಂಪತ್ಬಾಯಿ, ವಿರೂಪಾಕ್ಷ, ಸಮಿತಿ ಸಂಚಾಲಕ ಎಂ. ಹನುಮಂತರಾಯ್ ಮತ್ತು ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

