ಬಳ್ಳಾರಿ

ವಿಮ್ಸ್ ಸಿಬ್ಬಂದಿ ಅಚಾತುರ್ಯ:ಮಕ್ಕಳು ಅದಲು ಬದಲು

Published On :

ಬಳ್ಳಾರಿ: ಒಂದೇ ದಿನ ಐದತ್ತು ನಿಮಿಷದ ವ್ಯತ್ಯಾಸದಲ್ಲಿ ಹುಟ್ಟಿದ ಎರಡು ಮಕ್ಕಳನ್ನು ಪೋಷಕರಿಗೆ ವಿಮ್ಸ್‌ನ ಸಿಬ್ಬಂದಿ ಅಚಾತುರ್ಯದಿಂದ ಅದಲು ಬದಲಾಗಿ ನೀಡಿರುವ ಘಟನೆ ವಿಮ್ಸ್‌ನಲ್ಲಿ ನಡೆದಿದೆ.
ಗಂಡು ಮಗುವಿಗೆ ಜನ್ಮ ನೀಡಿದ ತಾಯಿಗೆ ಹೆಣ್ಣು ಮಗುವನ್ನು, ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಗೆ ಗಂಡು ಮಗುವನ್ನು ವಿಮ್ಸ್ ಸಿಬ್ಬಂದಿ ಹಸ್ತಾಂತರಿಸಿದ್ದು, ಗೊಂದಲಕ್ಕೆ ಕಾರಣವಾಗಿತ್ತು. ಹೆರಿಗೆಗೆಂದು ಕೆಲ ದಿನಗಳ ಹಿಂದೆ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಾ ಮತ್ತು ವಿಶಾಲಾಕ್ಷಿ ಎನ್ನುವವವರು ಆ. 31ರಂದು ಶನಿವಾರ ಬೆಳಗ್ಗೆ ಐದತ್ತು ನಿಮಿಷಗಳ ವ್ಯತ್ಯಾಸದಲ್ಲಿ ಒಬ್ಬರು ಗಂಡು, ಇನ್ನೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಹಸ್ತಾಂತರಿಸುವುದಕ್ಕಾಗಿ ಸಿಬ್ಬಂದಿಯು ಆಯಾ ಪೋಷಕರನ್ನು ಕರೆದಾಗ ಮಗುವನ್ನು ಹಸ್ತಾಂತರಿಸುವಾಗ ಗೊಂದಲ ಉಂಟಾಗಿ, ಅದಲು ಬದಲಾಗಿ ಪೋಷಕರಿಗೆ ಮಕ್ಕಳನ್ನು ನೀಡಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿತ್ತು. ಇದರಿಂದಾಗಿ ಎಚ್ಚೆತ್ತುಕೊಂಡ ವಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ, ಎರಡು ಮಕ್ಕಳು ಹಾಗೂ ತಾಯಂದಿರ ರಕ್ತ ಪರೀಕ್ಷೆ ಮಾಡಿ, ಬಳಿಕ ವಿಶಾಲಾಕ್ಷಿ ಹೆತ್ತಿದ್ದು ಗಂಡು, ಪದ್ಮಾ ಹೆತ್ತಿದ್ದು ಹೆಣ್ಣು ಮಗು ಎಂದು ಖಚಿತ ಪಡಿಸಿದ್ದಾರೆ. ಇಷ್ಟಕ್ಕೂ ಸಮಾಧಾನವಾಗದ ಪದ್ಮಾ ಪೋಷಕರು, ಸೋಮವಾರ ವಿಮ್ಸ್ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ರಕ್ತ ಪರೀಕ್ಷೆಯಲ್ಲಿ ಮಗುವು ಯಾರದು ಎಂದು ಖಚಿತಪಡಿಸಿದರು, ಪೋಷಕರು ಒಪ್ಪದ ಕಾರಣದ ಹಿನ್ನೆಲೆಯಲ್ಲಿ ದೂರು ದಾಖಲಿಸಿ, ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ವಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.