ಬಳ್ಳಾರಿ

ಶಿಕ್ಷಕರಿಗೆ ಪತ್ತಿನ ಸಹಕಾರ ಸಂಘದಿಂದ ಅನುಕೂಲ

Published On :

ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಸೆ. 23
ತುರ್ತು ಪರಿಸ್ಥಿತಿಯಲ್ಲಿ ಸಾಲ ಪಡೆಯಲು ಶಿಕ್ಷಕರಿಗೆ ಶಿಕ್ಷಕರ ಪತ್ತಿನ ಸಹಕಾರ ಸಂಘ ಅನುಕೂಲವಾಗಿದೆ ಎಂದು ತಾಲೂಕು ದೈಹಿಕ ಪರಿವೀಕ್ಷಕ ದೊಡ್ಡನಗೌಡ ಗೌಡರ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 3ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಿಗೆ ತಮ್ಮ ತುರ್ತು ಪರಿಸ್ಥಿತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಸೌಲಭ್ಯ ಸಿಗದ ವೇಳೆಯಲ್ಲಿ ಶಿಕ್ಷಕರೇ ಮಾಡಿಕೊಂಡ ಪತ್ತಿನ ಸಹಕಾರ ಸಂಘದಿಂದ ಸಕಾಲಕ್ಕೆ ಸಾಲ ಸೌಲಭ್ಯವನ್ನು ದೊರೆಯುವ ಮೂಲಕ ಆರ್ಥಿಕ ನೆರವಿಗೆ ಸಹಾಯವಾಗಿದೆ ಎಂದರು.
ಶಿಕ್ಷಕರು ಅಗತ್ಯಬಿದ್ದಾಗ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆಯುವದರ ಜತೆಯಲ್ಲಿ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಅಗತ್ಯವಿದೆ. ಇದರಿಂದ ಬ್ಯಾಂಕಿನ ಅಭಿವೃದ್ಧಿಗೆ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.
ಬ್ಯಾಂಕಿನ ಅಧ್ಯಕ್ಷ ಹನುಮಂತನಗೌಡ ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು 497 ಸದಸ್ಯರಾಗಿದ್ದು 72 ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸದಸ್ಯರಿಂದ ರು. 6,63,590 ಷೇರು ಹಣ ಹೊಂದಿದ್ದು, ರು. 23.75.000ಗಳನ್ನು ಸದಸ್ಯರಿಗೆ ಸಾಲವಾಗಿ ನೀಡಿರುತ್ತೇವೆ. ಈ ಪೈಕಿ ರು. 15,61,548 ಮರುಪಾವತಿಯಾಗಿದೆ. ಮಾರ್ಚ್ ಅಂತ್ಯಕ್ಕೆ ರು. 22.52.972 ಇನ್ನು ಬಾಕಿ ಬರಬೇಕಾಗಿದೆ. ಬ್ಯಾಂಕ್ ರು. 1,61,734 ಲಾಭ ಗಳಿಸಿದೆ. ಬ್ಯಾಂಕ್‌ಗೆ ಪಿ.ದಾದಸಾಬ್ ರು. 10 ಲಕ್ಷ ಠೇವಣಿಯಾಗಿಟ್ಟಿದ್ದಾರೆ. ಇದೇ ರೀತಿ ಸಾಲಾ ಪಡೆಯುವುದರೊಂದಿಗೆ ಶಿಕ್ಷಕರು ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದರೆ ಶೇ.11 ಬಡ್ಡಿಯನ್ನು ಠೇವಣಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷಈರಣ್ಣ, ಚಂದ್ರಮೌಳಿ ಬಿ. ದಿವಾಕರ್‌ರಾವ್, ಬಿ. ಬಸವನಗೌಡ, ನಟರಾಜ ಸ್ವಾಮಿ, ಮಂಜುನಾಥಗೌಡ, ದಿವಾಕರ್ ನಾರಾಯಣ್, ರವಿಕುಮಾರ್, ಖಾದರ್ ಬೀ, ಮರಿಸ್ವಾಮಿ, ಬಿ.ಪಿ. ಮಹಾದೇವಪ್ಪ, ಕೃಷ್ಣ, ಯರ್ರಿಸ್ವಾಮಿ ಸೇರಿದಂತೆ ಇತರೆ ಶಿಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.