ಬಳ್ಳಾರಿ

ಪುಟ್ಟರಾಜರ ಸಂಗೀತ ಸೇವೆ ಮಾದರಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 26
ಪ್ರತಿಯೊಬ್ಬರಿಗೂ ಸಂಗೀತ ಮನಸ್ಸಿಗೆ ಇಂಪು ಮತ್ತು ತಿಳಿವಳಿಕೆ ನೀಡುವ ಜತೆಗೆ ಉಲ್ಲಾಸ ನೀಡುತ್ತಿದೆ. ಸಮಾಜದಲ್ಲಿ ಸಾಕಷ್ಟು ಸಂಗೀತ ಕಲಾವಿದರಾಗಿ ಬೆಳೆಯಲು ಪುಟ್ಟರಾಜ ಗವಾಯಿಗಳು ಕೈಗೊಂಡ ಸಂಗೀತ ಸೇವೆ ಮಾದರಿಯಾಗಿದೆ ಎಂದು ಮಲ್ಲಿಗೆ ಹೆಲ್ತ್‌ಕೇರ್ ಸೆಂಟರ್‌ನ ಡಾ. ಪಿ.ಡಿ. ವಿನಾಯಕ್ ಹೇಳಿದರು.
ನಗರದ ಚಿತ್ತವಾಡ್ಗಿಯ ಕಲ್ಮಠೇಶ್ವರ ದೇವಸ್ಥಾನದಲ್ಲಿ ಮಾನವತ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳ 3ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ವಿದೇಶಗಳಲ್ಲಿ ಕೆಲ ರೋಗಗಳಿಗೆ ಸಂಗೀತದಿಂದಲೇ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಸಂಗೀತ ಆರಾಧಕರಾಗಬೇಕು ಎನ್ನುವವರಿಗೆ ಗದಗಿನ ಪುಟ್ಟರಾಜ ಗವಾಯಿಗಳ ಸಂಗೀತ ಪಾಠ ಶಾಲೆ ಮೂಲವಾಗಿದೆ. ಲಕ್ಷಾಂತರ ಸಂಗೀತ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಸಲ್ಲುತ್ತದೆ. ಅದರಲ್ಲಿ ವಿಶೇಷವಾಗಿ ಅನಾಥರಿಗೆ ಮತ್ತು ಅಂಧರಿಗೆ ಸಂಗೀತ ಕಲಿಸಿಕೊಟ್ಟು ಅವರ ಬದುಕಿಗೆ ಬೆಳಕಾಗಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಿಸಿದರು.
ಜವಳಿ ರುದ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನೇತ್ರ ತಜ್ಞ ಡಾ. ದೇಶಪಾಂಡೆ, ನಿವೃತ್ತ ಪಿಎಸ್‌ಐ ಕುಮಾರಸ್ವಾಮಿ, ಹಗರಿಬೊಮ್ಮನಹಳ್ಳಿಯ ರಾಜಾರಾವ್, ಪಂ. ಇಟಗಿ ವಿರೂಪಾಕ್ಷಪ್ಪ, ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗರತ್ನಮ್ಮ, ರವಿಕಾಂತ್, ಸಂಗೀತ ಭಾರತಿ ಅಧ್ಯಕ್ಷ ಎಚ್.ಪಿ. ಕಲ್ಲಂಭಟ್ ಇತರರು ಭಾಗವಹಿಸಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಪ್ರಾಧ್ಯಾಪಕ ಇಟಗಿ ವಿರೂಪಾಕ್ಷಪ್ಪ, ಪುಷ್ಪಾವತಿ, ಶರಣಬಸವ ವಠಾರ, ಟಿ. ರಾಜರಾವ್, ಅಕ್ಷತಾ, ಅನುರಾಧಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊಟ್ರೇಶ್, ಕಾಶೀನಾಥಪ್ಪ ಹಾರ್ಮೋನಿಯಂ, ಮಲ್ಲಿಕಾರ್ಜುನ ಬಡಿಗೇರ, ಹನುಮಂತಪ್ಪ, ಕರುಣಾನಿಧಿ ತಬಲಾ ಸಾಥ್ ನೀಡಿದರು. ಮಾನವತ ಸೇವಾ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ಭಂಡಾರದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ವಂದಿಸಿದರು. ಎಚ್.ಪಿ. ಕಲ್ಲಂಭಟ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.