ಬಳ್ಳಾರಿ

ಮಕ್ಕಳ ಲವಲವಿಕೆಗೆ ಸಾಕ್ಷಿಯಾದ ಕಾರ್ಯಕ್ರಮ

Published On :

ಕೂಡ್ಲಿಗಿ: ಸರ್ಕಾರಿ ಶಾಲೆ ಮಕ್ಕಳ ವಿವಿಧ ಸಾಂಸ್ಕೃತಿಕ ನೃತ್ಯ, ನಾಟಕಗಳು, ಭರತ ನಾಟ್ಯ, ಏಕಪಾತ್ರಾಭಿನಯ, ಯೋಗಾಸನ ಈಗೆ ಹತ್ತು ಹಲವು ಕಾರ್ಯಕ್ರಮಗಳು ಸಂಜೆಯಿಂದ ಮಧ್ಯರಾತ್ರಿವರೆಗೆ ನೋಡುಗರ ಗಮನ ಸೆಳೆದವು.
ಈ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿದ್ದು ತಾಲೂಕಿನ ಹೊಸಹಳ್ಳಿ ಹೋಬಳಿ ಕುಲುಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಅಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಖಾಸಗಿ ಶಾಲೆಗಳ ಕಾರ್ಯಕ್ರಮಗಳನ್ನೂ ನಾಚಿಸುವಂತಿದ್ದವು. ಇವು ಬಡ, ಮಧ್ಯಮ ವರ್ಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ಪ್ರೋತ್ಸಾಹದಂತಿದ್ದವು. ಸಂಜೆ 7 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಗ್ಧ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪೋಷಕರು ಕಣ್ತುಂಬಿಕೊಂಡರು.
ಆರಂಭದಲ್ಲಿ ಗಾಂಧೀಜಿಗೆ ನಮಿಸುವ ತಟ್ಟು ಚಪ್ಪಾಳೆ ಪುಟ್ಟ ಮಗು ಎನ್ನುವ ಹಾಡಿಗೆ ನೃತ್ಯ ಮನಮೋಹಕವಾಗಿತ್ತು. ಅಲ್ಲದೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಗೀತೆಗೆ ಮನೋಜ್ಞವಾಗಿ ಅಭಿನಯಿಸುವ ಮೂಲಕ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ, ಪ್ರಕೃತಿ ಸೌಂದರ್ಯವನ್ನು ಬಿಂಬಿಸಿದರು.
ಹರಿಹರದ ಸಹನಾ ಮೊಲೋಡಿ ಆರ್ಕೆಸ್ಟ್ರಾ ಅವರಿಂದ ನಡೆದ ರಸಸಂಜೆ ಕಾರ್ಯಕ್ರಮ ಜನಮನಸೂರೆಗೊಂಡಿತು. ಶೈಕ್ಷಣಿಕ ಪ್ರಗತಿಯಿಂದ ಹಿಡಿದು, ಪಠ್ಯೇತರ ಚಟುವಟಿಕೆ, ಕ್ರೀಡೆಯಲ್ಲು ಗಣನೀಯ ಸಾಧನೆ ಮಾಡಿದ ಕೀರ್ತಿ ಈ ಶಾಲೆಯದ್ದು. ಇಂತಹ ಕಾರ್ಯಕ್ರಮ ಆಯೋಜನೆಗಳಿಂದ ಶಾಲೆಗೆ ಮಕ್ಕಳನ್ನು ಕಳುಹಿಸಬೇಕೆಂಬ ಪ್ರಜ್ಞೆ ಅನಕ್ಷರಸ್ಥರಲ್ಲೂ ಮೂಡಿತು. ಕಾರ್ಯಕ್ರಮವನ್ನು ಮಂಡಲ ಪಂಚಾಯಿತಿ ಮಾಜಿ ಪ್ರಧಾನರಾದ ಕೆ.ಜಿ. ಸಿದ್ಧನಗೌಡ ಉದ್ಘಾಟಿಸಿದರು. ಬಿಇಒ ಕಚೇರಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಶಿಕ್ಷಣ ಪ್ರೇಮಿಗಳು, ಸಿಆರ್‌ಪಿಗಳು, ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ಮಂಗಳಗೌರಿ ವರದಿ ವಾಚಿಸಿದರು. ಗೀತಾ ಶ್ರೀಧರ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸಂಗೀತಾ ಕಾರ್ಯಕ್ರಮಗಳನ್ನು ನಿರ್ವಹಿಸಿದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.