ಬಳ್ಳಾರಿ

ಅಧಿಕಾರಿಗಳಿಂದ ರೈಲು ಮಾರ್ಗ ಕಾಮಗಾರಿ ವೀಕ್ಷಣೆ

Published On :

ಕೊಟ್ಟೂರು: ಕೊಟ್ಟೂರು-ಹರಿಹರ ನೂತನ ರೈಲು ಕಾಮಗಾರಿಯ ಕೊನೆ ಹಂತದ ಮಾರ್ಗದ ಪರಿವೀಕ್ಷಣೆಯನ್ನು ನೈರುತ್ಯ ರೇಲ್ವೆ ವಲಯದ ಮುಖ್ಯ ಆಡಳಿತಾಧಿಕಾರಿ (ಕಟ್ಟಡ) ಆದೇಶ ಶರ್ಮ ನೇತೃತ್ವದ ತಂಡ ಬುಧವಾರ ಕೈಗೊಂಡಿತು.
ಶರ್ಮರೊಂದಿಗೆ ರೇಲ್ವೆ ವಲಯದ ಮುಖ್ಯ ಎಂಜಿನಿಯರ್ ಪಿ.ಡಿ. ಶರ್ಮ, ಎಇಇ ಶಿವಕುಮಾರ್ ಮತ್ತಿತರ ಅಧಿಕಾರಿಗಳ ತಂಡದೊಂದಿಗೆ ಹಳಿ ಮಾರ್ಗದುದ್ದಕ್ಕೂ ರೇಲ್ವೆ ಟ್ರಾಲಿ ಮೂಲಕ ಹರಿಹರದವರೆಗೆ ಸಂಚರಿಸಲು ಅನುವಾದರು. ಈ ಹಂತದಲ್ಲಿ ರೇಲ್ವೆ ಓಡಾಟದ ದಿನಾಂಕ ನಿಗದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾರ್ಗದುದ್ದಕ್ಕೂ ಕಾಮಗಾರಿ ಮುಕ್ತಾಯಗೊಂಡ ನಂತರ ಭರದಿಂದ ಪೂರ್ವಭಾವಿ ಸಿದ್ಧತಾ ಕೆಲಸ ನಡೆದಿದೆ. ಸಿಗ್ನಲ್ ಅಳವಡಿಸುವ ಕಾರ್ಯ ಇದೀಗ ಆರಂಭಗೊಂಡಿದೆ. ಈ ಎಲ್ಲವುಗಳನ್ನು ತಾವು ಸಂಚರಿಸುವ ಅವಧಿಯಲ್ಲಿ ಪರಿಶೀಲಿಸಿ ರೇಲ್ವೆ ಮಂತ್ರಾಲಯದ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವೆ ಎಂದರು.
ಸಿಆರ್‌ಎಸ್ (ಕೇಂದ್ರೀಯ ರೇಲ್ವೆ ಸುರಕ್ಷತಾ) ತಂಡ ತಮ್ಮ ಈ ಭೇಟಿಯ ವರದಿಯನ್ನು ಎದುರು ನೋಡುತ್ತಿದ್ದು, ತಾವು ಸಲ್ಲಿಸಿದ ವರದಿ ನಂತರ ಸಿಆರ್‌ಎಸ್ ತಂಡ ಕೊಟ್ಟೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಮುಂದಿನ 10ರಿಂದ 15 ದಿನಗಳೊಳಗಾಗಿ ಈ ತಂಡ ಭೇಟಿ ನೀಡಲಿದೆ ಎಂದರು.
ಮಾರ್ಗ ಪರಿಶೀಲನೆಗೆ ಆಗಮಿಸಿದ್ದ ರೇಲ್ವೆ ಅಧಿಕಾರಿ ಆದೇಶ್ ಶರ್ಮಾ ಮತ್ತು ತಂಡವನ್ನು ಹರ್ಷವರ್ಧನ್, ಪಿ. ಶ್ರೀಧರಶೆಟ್ಟಿ, ಎ. ಶಾಂತಕುಮಾರ್, ಎಂ.ಜಿ. ರುದ್ರಯ್ಯ, ಬೂದಿ ಶಿವಕುಮಾರ್, ಅಶ್ವಿನ್, ಪಿ.ಜಿ. ಪಾಟೀಲ್, ಗೋಪಿ ಅವರು ರೇಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.