ಬಳ್ಳಾರಿ

31ರಂದು ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ

Published On :

ಬಳ್ಳಾರಿ: ಜಿಲ್ಲಾ ಕುರುಬರ ಸಂಘದ (2014-17ನೇ ಸಾಲಿಗೆ) ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜ. 31ರಂದು ನಡೆಯಲಿದೆ. ಈಗಾಗಲೆ ಚುನಾವಣೆ ಮೂಲಕ 41 ನಿರ್ದೇಶಕರು ಆಯ್ಕೆಯಾಗಿದ್ದು, ಇದೀಗ ನಿರ್ದೇಶಕರಲ್ಲೆ ಬಹುಮತದಡಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಸಂಘದ ಕಚೇರಿಯಲ್ಲಿ ಅಂದು ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಬೆಳಗ್ಗೆ 11ರಿಂದ 12ರ ವರೆಗೆ ನಾಮಪತ್ರ ಪರಿಶೀಲನೆ, ಮಧ್ಯಾಹ್ನ 12ರಿಂದ 1ರ ವರೆಗೆ ನಾಮಪತ್ರ ಹಿಂಪಡೆಯುವಿಕೆ, ನಂತರ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಸಂಜೆ 6ಕ್ಕೆ ಚುನಾವಣೆ ನಡೆಸಲಾಗುವುದು ಎಂದು ಸಂಘದ ಮುಖ್ಯ ಚುನಾವಣಾಧಿಕಾರಿ ಕೆ. ಎರ್ರಿಗೌಡ ತಿಳಿಸಿದ್ದಾರೆ.

ಬೈಕ್‌ಗಳ ಮಧ್ಯೆ ಡಿಕ್ಕಿ: ಎಸ್‌ಐ ಅನ್ವರ್ ಬಾಷಾ ಸಾವು
ಬಳ್ಳಾರಿ: ಎರಡು ಬೈಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಕರ್ತವ್ಯ ನಿರತ ಎಎಸ್‌ಐ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಪರಮದೇವನಹಳ್ಳಿ ಠಾಣೆಯ ಎಎಸ್‌ಐ ಅನ್ವರ್ ಬಾಷಾ (57) ಮೃತಪಟ್ಟಿದ್ದಾರೆ. ಇವರು ತಮ್ಮ ಪೊಲೀಸ್ ಠಾಣೆಗೆ ಬಳ್ಳಾರಿ ಕಡೆಯಿಂದ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದರಿಗೆ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಬೈಕ್ ಸವಾರ ಚೇತನ್(17)ಗೆ ಗಾಯಗಳಾಗಿದ್ದು ವಿಮ್ಸ್ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅನ್ವರ್‌ಬಾಷಾ ನಿಧನಕ್ಕೆ ಎಸ್ಪಿ ಚೇತನ್‌ಸಿಂಗ್ ರಾಥೋಡ್, ಎಎಸ್ಪಿ ಸಿ.ಕೆ. ಬಾಬು, ಡಿವೈಎಸ್ಪಿ ರುದ್ರಮುನಿ, ಮುರುಗಣ್ಣನವರ್, ಅಧಿಕಾರಿಗಳಾದ ಉಮೇಶ್ವರ ಈಶ್ವರ ನಾಯಕ್, ಲಿಂಗರಾಜ್, ಸಂದೀಪ್, ಹೊಸಕೇರಪ್ಪ ಹಾಗೂ ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ಮಕ್ಕಳಲ್ಲಿ ಸ್ಕೌಟ್ಸ್, ಗೈಡ್ಸ್ ತರಬೇತಿಯಿಂದ ದೇಶಭಕ್ತಿ
ಹೊಸಪೇಟೆ: ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ದೇಶಭಕ್ತಿ ಮೂಡಲು ಸ್ಕೌಟ್ಸ್- ಗೈಡ್ಸ್ ತರಬೇತಿ ಮುಖ್ಯ ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್‌ಸಿಂಗ್ ಹೇಳಿದರು. ನಗರದಲ್ಲಿ ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಬಿಇಒ ಪಿ. ಸುನಂದಾ ಅಧ್ಯಕ್ಷತೆ ವಹಿಸಿದ್ದರು. ಕಿಶೋರ್ ಪತ್ತಿಕೊಂಡ, ಕಮಲಾಕ್ಷ ಶಾನಭಾಗ, ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥ ಮಂಜುನಾಥ, ರಾಜಶೇಖರ್, ಇತರೆ ಅಧಿಕಾರಿಗಳು, ಶಿಕ್ಷಕರು, ಸಂಘದ ಲಲಿತಾ, ಶಕ್ತಿ, ಜ್ಯೋತಿ, ನಾಗಲಕ್ಷ್ಮಿ, ಕ್ಷಮಾ, ಸುಜಾತಾ ಇದ್ದರು. ವಿದ್ಯಾರ್ಥಿಗಳಿಗೆ ಹಣ್ಣು, ಪ್ರಶಸ್ತಿ ಪತ್ರಗಳನ್ನು ಕವಿತಾ ವಿತರಿಸಿದರು.

ಪ್ರಾಣಿ, ಪಕ್ಷಿ ರಕ್ಷಣೆ ನಮ್ಮ ಕರ್ತವ್ಯ: ನೆಗಳೂರುಮಠ್
ಬಳ್ಳಾರಿ: ಪ್ರಾಣಿ, ಪಕ್ಷಿ, ಗಿಡಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯಎಂದು ಉರಗ ತಜ್ಞ ಕೆ.ಎನ್. ನೆಗಳೂರುಮಠ್ ಹೇಳಿದರು. ಸಂಡೂರು ತಾಲೂಕು ಹೊಸ ದರೋಜಿಯಲ್ಲಿ ಸ್ವಾಮಿ ವಿವೇಕಾನಂದ ಶಿಶುವಿಹಾರ, ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಮಾತನಾಡಿ, ಅರಣ್ಯಗಳಲ್ಲಿ ಆಹಾರ ಕೊರತೆ ಎದುರಿಸುವ ಪ್ರಾಣಿಗಳು, ನಗರಗಳಿಗೆ ನುಗ್ಗುತ್ತಿವೆ. ನಾವೆಲ್ಲ ಅರಣ್ಯ ಉಳಿಸಬೇಕಿದೆ. ಪ್ರಾತ್ಯಕ್ಷಿತೆ ಮೂಲಕ ವಿವಿಧ ಉರಗಗಳ ಕುರಿತು ವಿವರಿಸಿದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಿ.ಎಂ. ಸಿದ್ಧಲಿಂಗಸ್ವಾಮಿ ಪ್ರಾಸ್ತವಿಕ ಮಾತನಾಡಿದರು. ನಾಗರಾಜ, ರೇಣುಕಾ, ಶಾಲಾ ಶಿಕ್ಷಕರು, ಸಿಬ್ಬಂದಿ ಇದ್ದರು.

ಸಮಾಜದ ಅಭ್ಯುದಯಕ್ಕೆ ಸಂಘಟನೆ ಅವಶ್ಯ: ಪಾಟೀಲ್
ಕೂಡ್ಲಿಗಿ: ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ಪ್ರದೇಶ ಯುವ ಕುರುಬರ ಸಂಘದ ಗ್ರಾಮ ಘಟಕವನ್ನು ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ಜಿಪಂ ಸದಸ್ಯ ಕೆ.ಎಂ. ಶಶಿಧರ ಮಾತನಾಡಿದರು. ದಾ.ಮ. ಐಮಡಿ ಶರಣಾರ್ಯರು ಸಾನ್ನಿಧ್ಯ ವಹಿಸಿ ನಾಮಫಲಕ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸೂಲದಹಳ್ಳಿ ಕೆ.ಎಂ. ಭೀಮೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಹದೇವಮ್ಮ ಹೊನ್ನಪ್ಪ, ಉಪಾಧ್ಯಕ್ಷ ಚನ್ನಪ್ಪ, ಜಿ. ಬಸವರಾಜ, ಎಂ. ಶೇಖರಪ್ಪ, ಎಚ್. ಬಸವರಾಜ, ಸಂಘದ ಜಿಲ್ಲಾಧ್ಯಕ್ಷ ಕೆ. ಕೆಂಚಪ್ಪಗೌಡ, ಕೆ. ರಾಘವೇಂದ್ರ, ಮಲ್ಲಪ್ಪ ಗೂಡ್ಲನೂರು, ಕೆ.ಜಿ. ನಾಗರಾಜ, ಹರಾಳು ಜನಾರ್ದನ, ಕೆ.ಎನ್. ಮಂಜಮ್ಮ, ಎಂ. ಮಂಗಳಾ, ಡಾ.ಬಿ.ಕೆ. ಅನಂತಕುಮಾರ್, ಬಸವರಾಜ, ಎಂ. ರಮೇಶ್, ಜಂಭುನಾಥ, ನಾಗೇಂದ್ರಪ್ಪ, ಎಚ್. ಅಜ್ಜಪ್ಪ, ಗಂಗಪ್ಪ, ಎಚ್. ರೇವಣ್ಣ, ತಿಮ್ಮಣ್ಣ, ಗುಡುದಪ್ಪ, ಕೆ. ಸುಚೇತಾ, ಕೆ. ನಿಂಗಪ್ಪ, ಎಸ್. ಶಂಕ್ರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.