ಬಾಲಕೃಷ್ಣ ಸಾಹಿತ್ಯ ವೇದಿಕೆ ಕಾರ್ಯ ಶ್ಲಾಘನೀಯ: ಮದರಿ
ನರೇಗಲ್ಲ: ಗ್ರಾಮೀಣ ಭಾಗದಲ್ಲಿ ಹದಿನೈದು ವರ್ಷಗಳಿಂದ ಸಾಹಿತ್ಯಿಕ ಕಂಪನ್ನು ಪಸರಿಸುತ್ತ ಬಂದಿರುವ ಬಾಲಕೃಷ್ಣ ಸಾಹಿತ್ಯ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಸಾಹಿತಿ, ಗೊಂದಲಿಗ್ಯಾ ಕೃತಿಗಾರ ಎ.ಎಂ. ಮದರಿ ಹೇಳಿದರು.
ಸ್ಥಳೀಯ ಗಾಂಧಿ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಶನಿವಾರ ಸಂಜೆ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ಸಮಾಜದ ರೀತಿ ನೀತಿಗಳನ್ನು, ಜೀವನ ಕ್ರಮವನ್ನು, ಬಾಲ್ಯ ಮತ್ತು ಜೀವನದುದ್ದಕ್ಕೂ ಕಂಡುಂಡ ಸತ್ಯಗಳನ್ನು ಮಾತ್ರ ಗೊಂದಲಿಗ್ಯಾ ಕೃತಿಯಲ್ಲಿ ದಾಖಲಿಸಿದ್ದೇನೆ. ಅದನ್ನೆ ಮಹತ್ತರವಾದುದು ಎಂದು ಬಿತ್ತರಿಸಿ ನನಗೆ ಪುರಸ್ಕಾರವನ್ನು ನೀಡಲು ಮುಂದಾಗಿರುವ ಸಾಹಿತ್ಯಿಕ ಸಂಘಟನೆಗಳಿಗೆ ನಾನು ಚಿರಋಣಿಯಾಗಿರುವೆ ಎಂದರು. ಕೃತಿ ಮತ್ತು ಕೃತಿಗಾರ ಮದರಿ ಅವರನ್ನು ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿದರು. ಪ್ರಶಸ್ತಿ ಪ್ರದಾನ ಮಾಡಿದ ಅಲ್ಲಮಪ್ರಭು ಬೆಟದೂರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜ್ಞಾನದೇವ ದೊಡ್ಡಮೇಟಿ ಮಾತನಾಡಿದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಗಾಯಕ ಪಾಲಾಕ್ಷಯ್ಯ ಅರಳೆಲೆಮಠ, ಡಾ. ಎಂ.ವಿ. ಆಚಾರ, ಕೆ.ಎಂ.ಪಿ. ಸುರೇಶ, ಡಾ. ನಾರಾಯಣ ಬುರಬುರೆ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಸುಮತಿ ಗೌರಿ ಅವರನ್ನು ಸನ್ಮಾನಿಸಲಾಯಿತು. ಸಿ.ಚನ್ನಬಸವಣ್ಣ, ಎಚ್.ಎಸ್. ಪಾಟೀಲ, ಮಹಾಂತೇಶ ಮಲ್ಲನಗೌಡರ, ರವೀಂದ್ರನಾಥ ದೊಡ್ಡಮೇಟಿ, ಸಿ.ಜಿ. ಹುಡೇದಗಡ್ಡಿ, ಮೃತ್ಯುಂಜಯ ಧಡೇಸೂರಮಠ ಇದ್ದರು. ಅರುಣ ಕುಲಕರ್ಣಿ ಪ್ರಾರ್ಥಿಸಿದರು. ಡಾ. ರಾಮಚಂದ್ರ ಹಂಸನೂರ ನಿರೂಪಿಸಿದರು. ದತ್ತಾತ್ರೇಯ ಕುಲಕರ್ಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

