ಬಳ್ಳಾರಿ

ವೀರಣ್ಣರದು ಬಹುಮುಖ ಪ್ರತಿಭೆ

Published On :

ಬಳ್ಳಾರಿ: ಜಾನಪದ, ರಂಗಭೂಮಿ, ತೊಗಲುಗೊಂಬೆ ಕಲಾವಿದರಾಗಿ, ಗಾಯಕರಾಗಿ, ಕಲಾ ಸಂಘಟಕರಾಗಿ ಸದ್ದಿಲ್ಲದೆ ಸಾಧನೆ ಮಾಡಿದ ಬೆಳಗಲ್ಲು ವೀರಣ್ಣನವರದು ವಿಶೇಷ ಬಹುಮುಖ ಪ್ರತಿಭೆ ಎಂದು ಸಾಹಿತಿ, ರಂಗಕರ್ಮಿ ರಂಗಾರೆಡ್ಡಿ ಕೋಡಿರಾಂಪುರ ಹೇಳಿದರು.
ರಂಗತೋರಣ ಸಂಸ್ಥೆಯು ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಅಮೃತ ರಂಗಧಾರೆ ಕಾರ್ಯಕ್ರಮದ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಬೆಳಗಲ್ಲು ವೀರಣ್ಣ-ಜಾನಪದ-ರಂಗನಾಯಕ ವಿಚಾರ ತೋರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೀರಣ್ಣ ಅವರ ಪೂರ್ವಜರು ತೊಗಲುಗೊಂಬೆ ಆಟಕ್ಕೆ ಸಮರ್ಪಿಸಿಕೊಂಡ ಕುಟುಂಬದವರಾದರೂ, ಬಾಲ್ಯದಿಂದಲೇ ಬಳ್ಳಾರಿಯ ರಾಘವ, ಜೋಳದರಾಶಿ ದೊಡ್ಡನಗೌಡರ ಪ್ರಭಾವಕ್ಕೆ ಒಳಗಾಗಿ, ನಾಟಕ ರಂಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ವೃತ್ತಿರಂಗ ಭೂಮಿಯಲ್ಲಿ ತೊಡಗಿಸಿಕೊಂಡಿದ್ದ ವಿವಿಧ ಕಂಪನಿಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ದೊಡ್ಡ ಕಲಾವಿದರಾದರು. ಜತೆ ಜತೆಗೆ ಗಾಯನ ಕಲೆಯನ್ನೂ ತಮ್ಮದಾಗಿಸಿಕೊಂಡು ಬೆಳೆದರು. ನಾಟಕ ರಂಗದಲ್ಲಿ ಸದ್ದಿಲ್ಲದೇ ಸಾಧನೆ ಮಾಡಿದ ಅವರು ಒಂದು ವಿಶಿಷ್ಠ ಸಂದರ್ಭದಲ್ಲಿ ರಂಗಭೂಮಿಯಿಂದ ತಮ್ಮ ಕುಲ ಕಶುಬಾದ ತೊಗಲುಗೊಂಬೆಯಾಟದತ್ತ ಮುಖ ಮಾಡಿದರು. ನಶಿಸಿಹೋಗುತ್ತಿದ್ದ ತೊಗಲುಬೊಂಬೆ ಆಟಕ್ಕೆ ಪುನಶ್ಚೇತನ ನೀಡಿದರು ಎಂದರು. ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡಿ, ಶಿಳ್ಳೆಕ್ಯಾತ ಜಾತಿಗೆ ಸೇರಿದ ಅದ್ಭುತ ಕಲಾ ಪ್ರತಿಭೆ ರಾಷ್ಟ್ರದ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಹೊರಹೊಮ್ಮಿದ ಮಹಾನ್ ಕಲಾ ಚೇತನ ಎಂದರು. ರಂಗಕರ್ಮಿ ಬಿ.ವಿ. ರಾಜಾರಾಮ್ ಉದ್ಘಾಟಿಸಿ, ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿದರು. ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ್ ಇದ್ದರು.
ವೈ. ರಾಘವೇಂದ್ರರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿದರು. ವಿಚಾರ ತೋರಣಕ್ಕೆ ಮೊದಲು ಅಮೃತ       ಜೀವನ ಸಂದರ್ಭದಲ್ಲಿರುವ ಕಲಾವಿದರಾದ ಬೆಳಗಲ್ಲು ವೀರಣ್ಣ ಹಾಗೂ ಸುಭದ್ರಮ್ಮ ಮನ್ಸೂ ರ್ ಅವರ ಬದುಕಿನ ವಿವಿಧ ಕಾಲಘಟ್ಟಗಳನ್ನು ಅಭಿವ್ಯಕ್ತಿಸುವ     ಛಾಯಾಚಿತ್ರಗಳ ಪ್ರದರ್ಶನ ಬೆಳಗಲ್ಲು ವೀರಣ್ಣ ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.