ಸುದೀಪ್ ಜತೆ ಭಿನ್ನಾಭಿಪ್ರಾಯಇಲ್ಲ: ಶಿವರಾಜ್ಕುಮಾರ್
ಬಳ್ಳಾರಿ: ನಮ್ಮ ಮತ್ತು ಸುದೀಪ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಕೂಡಿಕೊಂಡು ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ದುಡಿಯುತ್ತಿದ್ದೇವೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಕನ್ನಡ ನಾಡಿನ ಜನರಿಗೆ ಉತ್ತಮ ಚಿತ್ರಗಳನ್ನು ನೀಡಬೇಕೆಂಬ ಉದ್ದೇಶ ಎಲ್ಲರದ್ದಾಗಿದೆ. ಯಶ್, ಸುದೀಪ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ತಿಳಿಸಿದರು. ನಮ್ಮ ತಂದೆಯವರಿಗೆ 1974ರಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿತ್ತು. ಇದೀಗ ಬಳ್ಳಾರಿಯ ಕೃಷ್ಣದೇವರಾಯ ವಿವಿ ನನಗೆ ಗೌರವ ಡಾಕ್ಟರೇಟ್ ನೀಡಿದ್ದು ಸಂತಸ ತಂದಿದೆ. ಅಪ್ಪಾಜಿ ಅವರು ಶ್ರೀಕೃಷ್ಣದೇವರಾಯ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಕೃಷ್ಣದೇವರಾಯ ಎಂದಾಕ್ಷಣ ಅಪ್ಪಾಜಿ ನೆನಪಾಗುತ್ತದೆ, ಇದು ಇದೀಗ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್ ನೀಡುತ್ತಿರುವ ಸಂತೋಷ ತಂದಿದೆ. ಈ ಗೌರವವನ್ನು ನಾಡಿನ ಕಲಾವಿದರು, ಪ್ರೇಕ್ಷಕರು, ನಾಡಿನ ಜನರ ಹಾರೈಕೆ ಎಂದು ತಿಳಿದಿದ್ದೇನೆ, ಗೌರವ ಪದವಿ ಸ್ವೀಕರಿಸಲು ಕುಟುಂಬ ಸಮೇತ ಬಂದಿದ್ದೇನೆ ಎಂದರು. ಚಿತ್ರನಟ ಚಂದ್ರಶೇಖರ್, ಅಣ್ಣಾ ಹಜಾರೆ ಅಭಿಮಾನ ಬಳಗದ ರಾಜಶೇಖರ್, ಕರುನಾಡ ಸೇನೆಯ ಜಿಲ್ಲಾಧ್ಯಕ್ಷ ವಿ.ಕೆ. ಬಸಪ್ಪ ಇದ್ದರು.
ಜೂಜು ಅಡ್ಡೆ ಮೇಲೆ ದಾಳಿ
ಬಳ್ಳಾರಿ: ಮಟಕಾ ಜೂಜು ಅಡ್ಡೆ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ, ಒಬ್ಬ ಆರೋಪಿಯನ್ನು ಬಂಧಿಸಿ, ಆತನಿಂದ ರು. 28,500 ವಶಪಡಿಸಿಕೊಂಡಿರುವ ಘಟನೆ ಕುಡಿತಿನಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸಿಪಿಐ ಲಕ್ಷ್ಮೀಕಾಂತಯ್ಯ ಮಾರ್ಗದರ್ಶನದಲ್ಲಿ ಕುಡಿತಿನಿ ಪಿಎಸ್ಐ ವಾಸುಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಬಸವರಾಜ ಸ್ವಾಮಿ ಎನ್ನುವನನ್ನು ಬಂಧಿಸಿ, ಆತನಿಂದ ರು. 28,500, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಹೊಸ ದರೋಜಿಯಲ್ಲಿ ಮಟಕಾ ಜೂಜು ಅಡ್ಡೆ ಮೇಲೆ ಪಿಎಸ್ಐ ವಾಸುಕುಮಾರ್ ದಾಳಿ ಮಾಡಿ, ಕರಿಯಪ್ಪ, ತಿಪ್ಪಯ್ಯ ಎಂಬವರನ್ನು ಬಂಧಿಸಿ, ರು. 1,600 ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

