ಮಹಿಳೆಯರು ಹಕ್ಕು ಪಡೆದುಕೊಳ್ಳಿ: ಕವಿತಾ
ಹೊಸಪೇಟೆ: ಮಹಿಳೆಯರು ತಮ್ಮ ಹಕ್ಕನ್ನು ತಾವೇ ಪಡೆದುಕೊಳ್ಳಬೇಕು ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಹೇಳಿದರು.
ನಗರದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯ ಮಹಿಳಾ ಘಟಕ ಏರ್ಪಡಿಸಿದ್ದ ಶೋಷಿತ ಮಹಿಳೆಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಹಕ್ಕು ಯಾರೂ ಕೊಡುವಂತದಲ್ಲ. ನಮ್ಮ ಮೇಲೆ ಆಗುವಂತ ದೌರ್ಜನ್ಯವನ್ನು ನಾವೇ ಎದುರಿಸಬೇಕು. ಮಹಿಳೆಯರು ಧೈರ್ಯವಾಗಿರಬೇಕು. ಮನೆಯಿಂದ ಹೊರಗಡೆ ಬಂದು ಜಗತ್ತನ್ನು ನೋಡಬೇಕು ಎಂದು ಹೇಳಿದರು.
ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷೆ ಅನ್ನಪೂರ್ಣಾ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರಿಗೂ ಒಂದಲ್ಲ ಒಂದು ಸಮಸ್ಯೆಗಳು ಇರುತ್ತವೆ, ಅದರಿಂದ ನಾವು ಹೊರಗೆ ಬರಬೇಕು. ಸಂಘಟನೆ ಜತೆಗೆ ನಾವು ಇರಬೇಕು. ಏಕೆಂದರೆ ಸಂಘಟನೆಯಲ್ಲಿ ಅದಮ್ಯ ಶಕ್ತಿ ಇದೆ. ಎಂಥ ಕಠಿಣ ಕೆಲಸ ಆದರೂ ಮಾಡಬಹುದು ಎಂದು ತಿಳಿಸಿದರು.
ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸರಿ ಸಮನಾದ ಸ್ಥಾನ ಇಲ್ಲದಾಗಿದೆ. ಆದ್ರೆ ಮಹಿಳೆಯರು ಪುರುಷರಷ್ಟೇ ಸಮಾನರು ಎಂದು ಭಾವಿಸಬೇಕು. ಮಹಿಳೆಯರಗಾಗಿ ಇರುವಂಥ ಸೌಲಭ್ಯಗಳು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ. ಮಹಿಳೆಯರ ಮೇಲೆ ಆಗುತ್ತಿರುವಂಥ ದೌರ್ಜನ್ಯ, ಅತ್ಯಾಚಾರಗಳ ವಿರುದ್ಧ ಧ್ವನಿ ಎತ್ತಬೇಕು ಎಂದರು.
ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ, ರೋಟರಿ ಕ್ಲಬ್ ಇನ್ನರ್ವೀಲ್ ಸಂಸ್ಥೆ ಕಾರ್ಯದರ್ಶಿ ಮೇಘನಾ, ಸ್ಲಂ ಸಮಿತಿ ಸಲಹೆಗಾರರು, ವಕೀಲರಾದ ಸುನಂದಾ, ಮಹಿಳಾ ಘಟಕ ಅಧ್ಯಕ್ಷೆ ಮೈಮುನಾಬಿ, ಪ್ರದೇಶ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ, ಯುವ ಘಟಕದ ಹನುಮಂತರಾಯ, ಸಮಾನ ಮಕ್ಕಳ ಮಂಟಪದ ಕೆ. ವೆಂಕಟೇಶುಲು ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ವಿಜೇತ ಬಹುಮಾನಗಳನ್ನು ವಿತರಿಸಲಾಯಿತು.
ಎನ್ನೆಸ್ಸೆಸ್ ಸಮಾರೋಪ
ಹೊಸಪೇಟೆ: ಮಾನವ ಕ್ಷಮತೆ ಬಹಳ ದೊಡ್ಡದು. ಅದನ್ನು ಸಕರಾತ್ಮಕವಾಗಿ ಬಳಸಿಕೊಳ್ಳಬೇಕೆಂದು ವಿನೋಬಾಭಾವೆ ಶಾಲೆಯ ಮುಖ್ಯ ಶಿಕ್ಷಕಿ ಶುಭಾ ಹೇಳಿದರು.
ನಗರದ ಚಿತ್ತವಾಡ್ಗಿ ಶಾಲೆಯಲ್ಲಿ ಥಿಯೋಸಾಫಿಕಲ್ ಸೊಸೈಟಿಯ ಜಿ. ಸುಧಾ ಶಂಕರಗೌಡ ಮೆಮೋರಿಯಲ್ ಥಿಯೋಸಾಫಿಕಲ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಥಿಯೋಸಾಫಿಕಲ್ ಮಹಿಳಾ ಕಾಲೇಜ್ ಅಧ್ಯಕ್ಷ ಬಾಬುಲಾಲ್ ಜೈನ್ ಮಾತನಾಡಿ, ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಮಾಜಪರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯ ಡಾ. ಮಂಜುಳಾ ಮಾತನಾಡಿದರು. ಕಾಲೇಜಿನ ಉಪಾಧ್ಯಕ್ಷ ಜಿ. ಭರಮಲಿಂಗನಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಭೂಪಾಳ್ ರಾಘವೇಂದ್ರ ಶೆಟ್ಟಿ ಮಾತನಾಡಿದರು. ಸಮಾರಂಭದಲ್ಲಿ ಥಿಯೋಸಾಫಿಕಲ್ ಪಿಯು ಕಾಲೇಜ್ ಪ್ರಾಚಾರ್ಯ ಜಗದೀಶ ಪಿ.ಎಂ., ಪ್ರಾಧ್ಯಾಪಕಿ ಅಂಜಲಿ ದೇಸಾಯಿ, ಎನ್ಎಸ್ಎಸ್ ಅಧಿಕಾರಿ ಭುವನೇಶ್ವರಿ, ಪ್ರಾಚಾರ್ಯ ರಘೂತ್ತಮ ಆರ್ಣಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

