ಬೋಧನೆ ವಿಷಯ ಅಳವಡಿಸಿಕೊಳ್ಳಿ: ಶ್ರೀ
ಕಂಪ್ಲಿ: ವಿದ್ಯಾರ್ಥಿ ಹಂತದಲ್ಲಿ ಶಿಕ್ಷಕರ ಬೋಧನೆಯ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಲ್ಮಠ ಅಭಿನವ ಪ್ರಭು ಸ್ವಾಮೀಜಿ ತಿಳಿಸಿದರು.
ಇಲ್ಲಿನ ಕಲ್ಮಠದ ಪ್ರಭು ಸ್ವಾಮೀಜಿ ಅನುದಾನಿತ ಪ್ರೌಢಶಾಲೆಯ 2004ರ ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ವ್ಯಾಪಾರದ ಸರಕಾಗಿ ಪರಿಣಮಿಸಿದ್ದು, ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಕಲ್ಮಠ ಪ್ರಭು ಸ್ವಾಮೀಜಿ ಪ್ರೌಢಶಾಲೆಯ ಮಾಜಿ ಕಾರ್ಯದರ್ಶಿ ಪಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಪಡೆದು ಕೇವಲ ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ಶ್ರಮಿಸಬೇಕು. ವಿದ್ಯಾರ್ಥಿಗಳ ಸಾಧನೆ ಶಿಕ್ಷಕರಿಗೆ ಸಂತಸ ತರುತ್ತದೆ ಎಂದರು.
ಶಿಕ್ಷಕರಾದ ಜೆ. ಬಸವರಾಜ್, ಡಿ.ಜಿ.ಎಂ. ನಜೀರ್ ಅಹ್ಮದ್, ಎ.ಎಂ. ಬಸವರಾಜ್, ಎ. ನೂರ್ಸಾಬ್, ಆರ್. ನಾಗನಗೌಡ, ಭೀರಲಿಂಗೇಶ್ವರ, ಎಲ್. ಲೋಕೇಶ್, ಬಿ. ಮಹೇಶ್ಕುಮಾರ್, ಟಿ. ತಿಪ್ಪೆಸ್ವಾಮಿ ಮಾತನಾಡಿದರು.
ಎಸ್.ಎಂ. ಶೃತಿ, ಸಾವಿತ್ರಿ ಹಾಗೂ ಇತರರು ಮಾತನಾಡಿ, ನಮ್ಮೆಲ್ಲರ ಅಭಿವೃದ್ಧಿಗೆ ಶಿಕ್ಷಕರ ಮಾರ್ಗದರ್ಶನ ಕಾರಣ. ಶಿಕ್ಷಕರಿಂದ ಉತ್ತಮ ಸಂಸ್ಕಾರ, ನೀತಿಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿಕೊಂಡರು.
ಇದೇ ಸಂದಂರ್ಭದಲ್ಲಿ 2004ರಿಂದ 2007ರ ಸಾಲಿನ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರು. ಕಾರ್ತಿಕೇಶ್ವರ್, ಸುಬ್ಬಾರೆಡ್ಡಿ, ರಾಜೇಶ್, ಖಾಜಾವಲಿ, ವೈ. ಸಾವಿತ್ರಿ, ಇಂತಿಯಾಜ್, ದೀಪಾ, ಶ್ವೇತಾ, ಶ್ರುತಿ ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

