ವಿವಿಧ ಚಟುವಟಿಕೆಯಿಂದ ನಿಜವಾದ ಶಿಕ್ಷಣ: ಅಲ್ಲಂ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 24
ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಪಡೆಯುವುದು ನಿಜವಾದ ಶಿಕ್ಷಣವಲ್ಲ. ಕಾಲೇಜುಗಳಲ್ಲಿ ಆಯೋಜಿಸುವ ವಸ್ತುಪ್ರದರ್ಶನ, ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ಸೇರಿದಂತೆ ಇತರೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ನಿಜವಾದ ಶಿಕ್ಷಣ ಪಡೆಯಬೇಕು ಎಂದು ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ತಿಳಿಸಿದರು.
ವೀವಿ ಸಂಘದ ಹಾನಗಲ್ಲ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಶುಕ್ರವಾರದಿಂದ ಆಯೋಜಿಸಿರುವ ಎರಡು ದಿನಗಳ ಪ್ರವೇಗ ಟೆಕ್ ಫೆಸ್ಟ್ 2014 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀವಿ ಸಂಘದ ಮಾಜಿ ಕಾರ್ಯದರ್ಶಿ ಟಿ.ಎಚ್.ಎಂ. ಗುರುಮೂರ್ತಿ ಕೃತಜ್ಞ ಬ್ಲಾಕ್ ವಿದ್ಯಾರ್ಥಿಗಳಿಂದ ತಯಾರಿಸಿದ ಪ್ರವೇಗ 2014 ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ವ್ಯಾಸಂಗಕ್ಕೆಂದು ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳು, ಇತರೆಡೆ ಗಮನ ಹರಿಸದೆ ಕಾಲೇಜಿಗೆ ಬರುವ ಉದ್ದೇಶ ಹಾಗೂ ನಿಮ್ಮ ಮೇಲಿರುವ ಪೋಷಕರ ಆಸೆಗಳನ್ನು ಈಡೇರಿಸಬೇಕು. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ದೇಶದಿಂದ ಯಾವುದೆ ಪ್ರತಿ ಫಲಾಪೇಕ್ಷಿಸದೆ, ದೇಶಕ್ಕೆ ನನ್ನ ಸೇವೆ ಏನು ಎಂದು ತಮ್ಮನ್ನು ತಾವೆ ಪ್ರಶ್ನಿಸಿಕೊಂಡು ಮಾದರಿಯಾಗಿ ಜೀವಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಡಾ. ಅರವಿಂದ ಪಟೇಲ್, ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಕ್ಯಾಡ್ ಸೆಂಟರ್ನ ಮುಖ್ಯಸ್ಥ ಬಾಲಮುರಳಿಕೃಷ್ಣ ಮಾತನಾಡಿದರು. ಕಾಲೇಜಿನ ಉತ್ತಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಹಾಗೂ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಕಾಲೇಜು ಆಡಳಿತ ಮಂಡಳಿಯ ಜಿ. ಮಹಾಲಿಂಗಯ್ಯ (ರಾಜಣ್ಣ) ಅವರನ್ನು ಸನ್ಮಾನಿಸಲಾಯಿತು.
ಪ್ರವೇಗ- 2014 ಟೆಕ್ನಿಕಲ್ ಫೆಸ್ಟ್ ನಿಮಿತ್ತ ಕಾಲೇಜು ಆವರಣದಲ್ಲಿ ಒಟ್ಟು 15 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಹಾನಗಲ್ಲ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ವಿವಿಧ ವಿಭಾಗಗಳಿಂದ ಹಾಗೂ ಬೆಂಗಳೂರಿನ ಆಚಾರ್ಯ ಪಾಲಿಟೆಕ್ನಿಕ್ ಕಾಲೇಜಿನಿಂದ ಪ್ರಾಜೆಕ್ಟ್ಗಳ ಪ್ರದರ್ಶನ, ವಿವಿಧ ಬಗೆಯ ಉಡುಪುಗಳು, ಅಲಂಕಾರಿಕ ವಸ್ತುಗಳು, ಚಿತ್ರಕಲೆಗಳು ಹೀಗೆ ಹಲವು ಬಗೆಗಳಲ್ಲಿ ಮಳಿಗೆಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ.
ವೀವಿ ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ ಸಂಗನಕಲ್ಲು ಹಿಮಂತರಾಜ್, ಕಣ್ಣಿ ರಾಜಶೇಖರ್, ಕೆ.ಎಂ. ವಿಶ್ವನಾಥ್, ಎಸ್. ಮಲ್ಲನಗೌಡ, ಎಎಸ್ಎಂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವಯ್ಯ, ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣಬಸವರಾಜ್, ಸತೀಶ್, ಉಮಾಶಂಕರ್, ಕೆ. ಶ್ರೀನಿವಾಸ್ ಉಪನ್ಯಾಸಕರು, ಅತಿಥಿಗಳು, ವಿದ್ಯಾರ್ಥಿಗಳು ಇದ್ದರು.
ವ್ಯಾಸಂಗಕ್ಕೆಂದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಇತರೆಡೆ ಗಮನ ಹರಿಸದೆ ಕಾಲೇಜಿಗೆ ಬರುವ ಉದ್ದೇಶ ಹಾಗೂ ಪೋಷಕರ ಆಸೆಗಳನ್ನು ಈಡೇರಿಸಬೇಕು, ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ದೇಶದಿಂದ ಯಾವುದೆ ಪ್ರತಿ ಫಲಾಪೇಕ್ಷಿಸದೆ, ದೇಶಕ್ಕೆ ನನ್ನ ಸೇವೆ ಏನು ಎಂದು ತಮ್ಮನ್ನು ತಾವೆ ಪ್ರಶ್ನಿಸಿಕೊಂಡು ಮಾದರಿಯಾಗಿ ಜೀವಿಸಬೇಕು.
- ಟಿ.ಎಚ್.ಎಂ. ಗುರುಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

