ಜೆಡಿಎಸ್ ರವೀಂದ್ರಕುಮಾರ್ ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 26
ಬಳ್ಳಾರಿ ಲೋಕಸಭೆ ಜೆಡಿಎಸ್ ಅಭ್ಯರ್ಥಿಯಾಗಿ ಮೈಸೂರಿನ ಆರ್. ರವೀಂದ್ರಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಆಗಮಿಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬುಧವಾರ ಮಧ್ಯಾಹ್ನ 2ಕ್ಕೆ ನಾಮಪತ್ರ ಸಲ್ಲಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕುಡಿತಿನಿ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ಗೆ ಉತ್ತಮ ಜನಸ್ಪಂದನೆ ಇದೆ. ಪಕ್ಷ ಕಾಂಗ್ರೆಸ್, ಬಿಜೆಪಿಗೆ ಪೈಪೋಟಿ ನೀಡಲಿದೆ. ಹಗರಿಬೊಮ್ಮನಹಳ್ಳಿ ಶಾಸಕರು ಬೆಂಗಳೂರಿಗೆ ಹೋಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿಲ್ಲ ಎಂದರು. ಅಭ್ಯರ್ಥಿ ರವಿನಾಯ್ಕ ಮಾತನಾಡಿದರು.
ಮಾಜಿ ಶಾಸಕ ರವೀಂದ್ರನಾಥ ಬಾಬು, ಮುಖಂಡರಾದ ಮುಂಡಗ್ರಿ ನಾಗರಾಜ್, ಸೋಮಲಿಂಗನಗೌಡ, ತಾಯಣ್ಣ, ಹೇಮಯ್ಯ ಸ್ವಾಮಿ, ಮಿಂಚು ಶ್ರೀನಿವಾಸ್, ಅಧ್ಯಕ್ಷ ಕಗ್ಗಲ್ ವೀರೇಶಪ್ಪ, ಮಂಜುನಾಥ್ಗೌಡ, ಶಿವಶಂಕರಗೌಡ, ಶಿವಪ್ಪ, ಮಲ್ಲಿಕಾರ್ಜುನ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ಆರ್. ರವೀಂದ್ರಕುಮಾರ ಆಸ್ತಿ ರು. 90,30, 903
ಬಳ್ಳಾರಿ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ರವೀಂದ್ರಕುಮಾರ್ (ರವಿ ನಾಯ್ಕ) ರು. 90,30, 903 ಮೌಲ್ಯದ ಸ್ಥಿರ, ಚರಾಸ್ತಿ ( 27,45,903 ಚರಾಸ್ತಿ, ರು. 62.85 ಸಾವಿರ ಮೌಲ್ಯದ ಸ್ಥಿರಾಸ್ತಿ) ಹೊಂದಿದ್ದಾರೆ. ಮೈಸೂರಿನ ಕಾರ್ಪೋರೇಷನ್ ಬ್ಯಾಂಕಿನಲ್ಲಿ ರು. 15,898, ಎಸ್ಬಿಐ ಬ್ಯಾಂಕಿನಲ್ಲಿ ರು. 6,734 ನಗದು, ವಿವಿಧ ಕಂಪನಿಯಲ್ಲಿ ರು. 5,600 ಷೇರು ತೊಡಗಿಸಿದ್ದಾರೆ. ಐಎನ್ಜಿ ವೈಶ್ಯ ಬ್ಯಾಂಕಿನ ತಮ್ಮ ಖಾತೆಯಲ್ಲಿ ರು. 59,409, ಪತ್ನಿ ಹೇಮಾವತಿ ಹೆಸರಲ್ಲಿ ರು. 40,633 ಹೂಡಿದ್ದಾರೆ. ರು. 5.75 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು, 4 ಕೆಜಿ ಚಿನ್ನ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

