ಬಳ್ಳಾರಿ

ಪರ್ಯಾಯ ವ್ಯವಸ್ಥೆಗೆ ಜನತೆ ಒತ್ತು: ಮಾಳಗಿ

Published On :

ಬಳ್ಳಾರಿ: ಬಳ್ಳಾರಿ ಜನತೆ ಪರ್ಯಾಯ ವ್ಯವಸ್ಥೆಗಾಗಿ ಚಿಂತನೆ ನಡೆಸಿದ್ದು, ಈ ಬಾರಿ ಚುನಾವಣೆಯಲ್ಲಿ ಆಮ್ ಆದ್ಮಿಗೆ ಉತ್ತಮ ಬೆಂಬಲ ಲಭಿಸಲಿದೆ ಎಂದು ಎಎಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶಿವಕುಮಾರ ಮಾಳಗಿ ತಿಳಿಸಿದರು. ನಾಮಪತ್ರ ಸಲ್ಲಿಕೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಅಪಖ್ಯಾತಿಗೆ ಜಿಲ್ಲೆಯ ಜನತೆ ಕಾರಣವಲ್ಲ. ಹಿಂದೆ ಆಡಳಿತ ನಡೆಸಿದ ಮುಖಂಡರು ಅಪಖ್ಯಾತಿಗೆ ಕಾರಣರಾಗಿದ್ದಾರೆ. ಅಂಥ ಅಪಖ್ಯಾತಿಗೆ ಇಂದು ಕೊನೆ ಹಾಡಬೇಕಿದೆ. ಬಳ್ಳಾರಿ ಜನರ ಸದ್ಗುಣ, ಭಾವನೆಗಳನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ. ಇಲ್ಲಿ ಯಾರ ಗೆಲವು ಯಾರ ಸೋಲು ಮುಖ್ಯವಲ್ಲ. ಬಳ್ಳಾರಿಯಲ್ಲಿ ಆಮ್ ಆದ್ಮಿ ಪರಿಶುದ್ಧ ಕಾರ್ಯ ನಡೆಸಿದೆ ಎಂದರು.ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ, ಮುಖಂಡರಾದ ಟಿ.ಎಂ. ಶಿವಕುಮಾರ್, ಸುರೇಂದ್ರ ಛೋಪ್ರ, ಮುಖಂಡರು, ಕಾರ್ಯಕರ್ತರು ಇದ್ದರು.
ಮೆರವಣಿಗೆ: ಆಮ್ ಆದ್ಮಿ ಕಾರ್ಯಕರ್ತರು, ಮುಖಂಡರು ನಗರದ ಆಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಡೊಳ್ಳುಕುಣಿತ ಮತ್ತು ಕಹಳೆ ಊದುವ ಮೂಲಕ ಭ್ರಷ್ಟಾಚಾರ ವಿರುದ್ಧ ಸಮರ ಘೋಷಿಸಿದರು. ಮುಖಂಡ ರಾಘವೇಂದ್ರ ಕುಷ್ಟಗಿ ತಾಳ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಗಡಿಗಿ ಚೆನ್ನಪ್ಪ ವೃತ್ತ, ಸಂಗಮ ವೃತ್ತ, ಸತ್ಯನಾರಾಯಣ ಪೇಟೆಯಿಂದ ಬಸವೇಶ್ವರ ನಗರದಲ್ಲಿ ಆಮ್ ಆದ್ಮಿ ಅಭ್ಯರ್ಥಿ ಶಿವಕುಮಾರ್ ಮಾಳಗಿ ಸ್ವಗೃಹದವರೆಗೆ ಮೆರವಣಿಗೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.