ಚಾಮರಾಜನಗರ

ಎತ್ತುಗಟ್ಟಿಯಲ್ಲಿ ಗಂಡಾನೆ ಸಾವು

Published On :

ಚಾಮರಾಜನಗರ: 6 ವರ್ಷದ ಗಂಡಾನೆಯೊಂದು ತಾಲೂಕಿನ ಯಾನಗಹಳ್ಳಿ ಸಮೀಪದ ಎತ್ತುಗಟ್ಟಿ ಅರಣ್ಯದಲ್ಲಿ ಶನಿವಾರ ಮೃತಪಟ್ಟಿದೆ.
ಈ ಆನೆ ಕಾಡಿನಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ದೊಡ್ಡ ಪದಾರ್ಥ ತಿಂದು ಬಾಯಿಯಲ್ಲಿ ಗಾಯವಾಗಿತ್ತು. ಇದರಿಂದ ಈ ಆನೆ ಸಣ್ಣ ಪುಟ್ಟ ಪದಾರ್ಥಗಳನ್ನು ಅರಸಿ, ಜಮೀನುಗಳಿಗೆ ದಾಳಿಯಿಡುತ್ತಿತ್ತು.
ಮೊನ್ನೆ ಯಣಗುಂಬ ಗ್ರಾಮದ ತೋಟದ ಮನೆಯ ಜಮೀನೊಂದರಲ್ಲಿ ಮಹದೇವಮ್ಮ ಎಂಬವರನ್ನು ಈ ಪುಂಡಾನೆಯೇ ಕೊಂದಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಈ ಆನೆಯನ್ನು ಸೆರೆ ಹಿಡಿಯಲು ಬಲೆ ಬೀಸಿದ್ದರು.ಸ್ಥಳಕ್ಕೆ ಅರಣ್ಯಾಧಿಕಾರಿ ಸಿಎಫ್ ಲಿಂಗರಾಜು, ಎಸಿಎಫ್ ಶ್ರೀಧರ್, ಆರ್‌ಎಫ್‌ಒ ಸುರೇಂದ್ರ, ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿ ಚಿಕಿತ್ಸೆ ನೀಡಿದರೂ ಬದುಕಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.