ವೈಯಕ್ತಿಕ ಶೌಚಾಲಯದಿಂದ ಗ್ರಾಮಗಳ ನೈರ್ಮಲ್ಯ
ಚಾಮರಾಜನಗರ: ಗ್ರಾಮಗಳ ನೈರ್ಮಲ್ಯ ಕಾಣಬೇಕಾದರೆ ವೈಯಕ್ತಿಕ ಶೌಚಾಲಯ ನಿರ್ಮಾಣ ಅಗತ್ಯ ಎಂದು ಜಿಪಂ ಸಿಇಓ ಎಂ.ಆರ್. ಸೋಮಶೇಖರಪ್ಪ ತಿಳಿಸಿದರು.
ಅವರು ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಗ್ರಾಪಂ ಹಾಗೂ ನಿರ್ಮಲ ಭಾರತ ಅಭಿಯಾನ ಇವರ ಸಹಯೋಗದೊಂದಿಗೆ ಗ್ರಾಮ ನೈರ್ಮಲ್ಯ ಸ್ವಚ್ಛತೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದಲ್ಲಿ ನಿರ್ಮಿಸಿರುವ ಅಡೆತಡೆರಹಿತ ಶೌಚಾಲಯಗಳು, ಚರಂಡಿ ನಿರ್ಮಾಣ, ತ್ಯಾಜ್ಯ ವಿಲೇವಾರಿ ಹಾಗೂ ರಸ್ತೆಗಳ ಪರಿಸ್ಥಿತಿಯನ್ನು ವೀಕ್ಷಿಸಿ ಮಾತನಾಡಿದರು.
ಬಯಲು ಮಲವಿಸರ್ಜನೆಯಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ. ಇದರಿಂದ ಪಾರಾಗಬೇಕಾದರೆ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿರ್ಮಿಸಿ ಬಳಸುವುದರೊಂದಿಗೆ ಇಡೀ ಗ್ರಾಮದ ನೈಮಲ್ಯ ಕಾಪಾಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯಗಳು ಸಿಗದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕರಿಸಿದರೆ ಮಾತ್ರ ಗ್ರಾಮದ ನೈರ್ಮಲ್ಯೀಕರಣದ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಾಧ್ಯ. ಇದಕ್ಕೆ ಸ್ಥಳೀಯ ಸಂಘಸಂಸ್ಥೆಗಳು ವಿಶೇಷವಾಗಿ ಮಹಿಳಾ ಹಾಗೂ ಯುವಕ ಸಂಘಗಳು ಕೈಜೋಡಿಸಬೇಕೆಂದು ಕರೆನೀಡಿದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯಿಂದ ಅಡೆತಡೆರಹಿತ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಛಾಯಪುತ್ರ, ಮಹದೇಶ್ವರ, ಗುಲಾಬಿ, ಸಿದ್ದಾರ್ಥ ಮತ್ತು ಉರ್ಕಾತಮ್ಮ ಅಂಗವಿಕಲರ ಸ್ವಸಹಾಯ ಸಂಘದ 30 ಮಂದಿ ಸದಸ್ಯರಿಗೆ 1.50 ಲಕ್ಷ ಚೆಕ್ ವಿತರಿಸಿದರು.
ಮಸಣಾಪುರ ಗ್ರಾಪಂ ಅಧ್ಯಕ್ಷೆ ವೀರಮ್ಮ ಮಾತನಾಡಿ, ಶೌಚಾಲಯ ನಿರ್ಮಿಸಿಕೊಳ್ಳಲು ತಮ್ಮ ಪಂಚಾಯಿತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ತಾ.ಪಂ ಸದಸ್ಯ ಜಡೇಸ್ವಾಮಿ, ಗ್ರಾಪಂ ಉಪಾಧ್ಯಕ್ಷ ಗಿಡ್ಡಯ್ಯ, ಪಿಡಿಓ ಚಂದ್ರು, ಮಾಜಿ ಅಧ್ಯಕ್ಷ ರೇವಣ್ಣ, ಸದಸ್ಯರು, ಕಾಗಲವಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಕುಮಾರ್, ಮತ್ತು ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಎನ್. ಆನಂದ್, ಜಾನ್ ಫರ್ನಾಂಡಿಸ್, ರಾಜಣ್ಣ, ಆನಂದ್, ಚಂದನ ಅಂಗವಿಕಲರ ಮಹಾಸಂಘದ ಅಧ್ಯಕ್ಷ ಮಹದೇವ್, ಮಹಿಳಾ ಮತ್ತು ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

