ಚಿತ್ರದುರ್ಗ

ಸ್ವಾವಲಂಬಿ ಬದುಕು ಸಾಗಿಸಲು ಸಾಲ ನೀಡಿ

Published On :

ಹಿರಿಯೂರು: ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಹಿನ್ನೆಲೆಯಲ್ಲಿ ಹಣಕಾಸು ಹಾಗೂ ಔದ್ಯಮಿಕ ಸಂಸ್ಥೆಗಳು ಲಾಭಕ್ಕಾಗಿ ಬೇಟೆಯಾಡುತ್ತಿವೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಕರೂರು ವೈಶ್ಯ ಬ್ಯಾಂಕ್ ನೂತನ ಶಾಖೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಾಭಾಂಶದ ಬೇಟೆಯಲ್ಲಿ ಇವರಿಗೆ ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿರುವ ಶ್ರೇಣೀಕಣತ ವ್ಯವಸ್ಥೆ ಕಣ್ಣಿಗೆ ಕಾಣದಿರುವುದು ಅತ್ಯಂತ ವಿಷಾದನೀಯವೆಂದು ಹೇಳಿದರು.
ಬ್ಯಾಂಕುಗಳು ಬಬ್ಬನಿಗೆ ಒಂದು ಕೋಟಿ ಸಾಲ ನೀಡಿ ಒಂದು ಕುಟುಂಬವನ್ನು ಉದ್ಧಾರ ಮಾಡುವ ಬದಲು ಅದನ್ನು ಸಾವಿರ ಕುಟುಂಬಗಳಿಗೆ ಸಾಲ ನೀಡಿ ಆ ಕುಟುಂಬ ಮತ್ತು ಆ ಕುಟುಂಬವನ್ನು ಅವಲಂಬಿಸಿರುವ ಸಾವಿರಾರು ಜನರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಬದುಕನ್ನು ಸಾಗಿಸುವ ಅವಕಾಶಮಾಡಿಕೊಡಬೇಕು ಎಂದು ಹೇಳಿದರು.
ಸಾವಿರಾರು ಜನರಿಗೆ ಸ್ವಾವಲಂಬಿ ಬದುಕು ನೀಡುವ ಇಂತಹ ಸಾಮಾಜಿಕ ಬದ್ಧತೆಯ ಮೂಲಕ ಆ ಸಂಸ್ಥೆಗಳ ಮೌಲ್ಯ ಮಾಪನ ಮಾಡಬೇಕೆ ವಿನಾ ಅದು ಗಳಿಸಿದ ಲಾಭಾಂಶದಿಂದಲ್ಲ ಮತ್ತು ಅದು ಮಾಡಿದ ವ್ಯವಹಾರದಿಂದಲ್ಲ. ಇಂದು ಹಿರಿಯೂರಿನಲ್ಲಿ ಪ್ರಾರಂಭವಾದ ದಿ ಕರೂರು ವೈಶ್ಯ ಬ್ಯಾಂಕ್‌ನ ಮೂಲ ಉದ್ದೇಶವಾಗಿರಬೇಕೆಂಬುದು ಸಾರ್ವಜನಿಕರ ಆಶಯವಾಗಿದೆಯೆಂದು ಹೇಳಿದರು.
ಎಲ್ಲರ ಹಿತದೃಷ್ಟಿ: ಬ್ಯಾಂಕ್‌ನ ಡಿಜಿಎಂ ಎಸ್‌ಕೆವಿ ಪ್ರಸಾದ್ ಮಾತನಾಡಿ, ಎಲ್ಲ ವರ್ಗ ಮತ್ತು ಸಮುದಾಯಗಳ ಹಿತದೃಷ್ಟಿಯಿಂದ ಬ್ಯಾಂಕಿಂಗ್ ವ್ಯವಸ್ಥೆಯು ಕೆಲಸ ಮಾಡಬೇಕಿದ್ದು, ನಮ್ಮಲ್ಲಿನ ಹೊಸ ತಲೆಮಾರಿನ ಸಿಬ್ಬಂದಿಯು ಪರಿಸ್ಥಿತಿಯನ್ನು ಅರಿತು ಕಾರ್ಯನಿರ್ವಸುವ ಸೂಕ್ಷ್ಮತೆಯನ್ನು ಹೊಂದಿದ್ದಾರೆಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹಿರಿಯೂರಿನ ಶಾಖೆಯು ಎಲ್ಲ ರಂಗಗಳಲ್ಲಿ ತನ್ನ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಲು ಅವಕಾಶವಾಗುವ ರೀತಿಯಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ಬಸವರಾಜು ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.