'ಕನ್ನಡಪ್ರಭ'ದ ಪ್ರಭಾಕರ್ಗೆ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರದಾನ
ಚಿತ್ರದುರ್ಗ: 'ಕನ್ನಡಪ್ರಭ' ಪತ್ರಿಕೆಯ ಎರಡು ಪ್ರತಿಭೆಗಳಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತು. 'ಕನ್ನಡಪ್ರಭ'ದ ಮುಖ್ಯ ವರದಿಗಾರ ಕೆ.ವಿ. ಪ್ರಭಾಕರ್ ಮತ್ತು ಪತ್ರಿಕೆಯ ನಿವೃತ್ತ ಹಿರಿಯ ಉಪ ಸಂಪಾದಕ ಕಾಸರವಳ್ಳಿ ಸುಬ್ಬಣ್ಣ ಅವರಿಗೆ 'ವಿಡಂಬನಾತ್ಮಕ ಹಾಗೂ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ' ಪ್ರಶಸ್ತಿ ನೀಡಲಾಯಿತು. 2009ರ ಸಾಲಿನ ಪ್ರಶಸ್ತಿ ಪ್ರಭಾಕರ್ ಅವರಿಗೆ, 2010 ಸಾಲಿನ ಪ್ರಶಸ್ತಿ ಸುಬ್ಬಣ್ಣ ಅವರಿಗೆ ನೀಡಲಾಗಿದೆ. ಸಂಘದ ವಿಶೇಷ ಪ್ರಶಸ್ತಿಗಳನ್ನು ಆರು ಮಂದಿಗೆ, ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಯನ್ನು 15 ಜನರಿಗೆ ನೀಡಲಾಯಿತು. ಚಿತ್ರದುರ್ಗದ ಮುರುಗೇಶ್ ಅವರಿಗೆ 2009ರ ಸಾಲಿನ 'ಪಿ. ರಾಮಯ್ಯ' ಪ್ರಶಸ್ತಿ, 2009ರ ಸಾಲಿನ 'ಡಿವಿಜಿ' ಪ್ರಶಸ್ತಿಗೆ ಮೇಘಾ ಗಂಗಾಧರನಾಯಕ್, 2009ಕ 'ಬದರಿನಾಥ ಹೊಂಬಾಳೆ' ಪ್ರಶಸ್ತಿಯನ್ನು 'ಲಕ್ಷ್ಮಣ ವಾಯ್ಸ್' ಸಂಪಾದಕ ಲಕ್ಷ್ಮಣ್ ಅವರಿಗೆ ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

