ಉಚಿತ ಹೊಲಿಗೆ ತರಬೇತಿ ಕಾರ್ಯಗಾರ
ಚಳ್ಳಕೆರೆ: ಪಟ್ಟಣದ ಸೃಜನ ಸೇವಾ ಸಂಸ್ದೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ನಿರುದ್ಯೋಗಿ ಯುವತಿಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲಾಗುವುದು ಎಂದು ಸಂಸ್ಧೆಯ ಕಾರ್ಯದರ್ಶಿ ಈ. ತಮ್ಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತಿ ಪ್ರಮಾಣ ಪತ್ರ, ಇತ್ತಿಚಿನ ನಾಲ್ಕು ಭಾವಚಿತ್ರಗಳನ್ನು ಸೃಜನ ಸೇವಾ ಸಂಸ್ಧೆ ಎಸ್ಬಿಐ ಹಿಂಭಾಗದ ರಸ್ತೆ ಇಲ್ಲಿ ಸಂಪರ್ಕಿಸಲು ಕೋರಿದೆ. ಮಾಹಿತಿಗಾಗಿ 77950 -77334,80957-55730 ಸಂಪರ್ಕಿಸಿ.
ಸಿಬ್ಬಂದಿ ಮೇಲೆ ಹಲ್ಲೆ: ಕೊಲೆ ಬೆದರಿಕೆ
ಚಳ್ಳಕೆರೆ: ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ಜಿಂದಾಲ್ ಕಂಪನಿ ಉದ್ಯೋಗಿಗಳಿಗೆ ಗ್ರಾಮದ ಕೆಲವರು ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ. ಜಿಂದಾಲ್ ಕಂಪನಿಯ ಅಧಿಕಾರಿಯಾದ ಅಪ್ಪ ಸಾಹೇಬ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಕಂಪನಿಯ ಪರವಾಗಿ ಜಮೀನಿನಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿಗಳನ್ನು ತೋಡುವಾಗ ಗ್ರಾಮದ ಇಬ್ಬರು ತಮ್ಮನ್ನು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಸಿದ್ದೇಶ್ ಮತ್ತು ರಾಮಕೃಷ್ಣ ಎಂಬುವರು ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿದ್ದಾರೆಂದು ತಿಳಿಸಿದ್ದಾರೆ. ಉಪ ನಿರೀಕ್ಷಕ ಡಿ.ಜಿ. ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆರಿಗೆ ಉತ್ತಮ ಸಾಮಾಜಿಕ ಸ್ಥಾನ ದೊರೆಯಬೇಕು
ಚಳ್ಳಕೆರೆ: ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಧಾನಮಾನ ನೀಡಲಾಗಿದೆ ಅವನ್ನು ಮಹಿಳೆಯರು ಸದುಪಯೋಗ ಮಾಡಿಕೊಳ್ಳಿ ಎಂದು ಎಚ್ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಶಾಂತ ವೀರಮ್ಮ ತಿಳಿಸಿದರು.
ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮಹಿಳೆ ಉತ್ತಮ ಸಾಧನೆ ಮಡಲು ಕಾರಣ ಪುರುಷರದು ಇದೆ ಎಂದು ತಿಳಿಯಬೇಕು ಎಂದರು. ಪ್ರಾಧ್ಯಪಕ ಎಚ್. ಅಜ್ಜಯ್ಯ, ಮಹಿಳೆಯರ ಮೇಲೆ ಹಿಂಸೆಗಳು ನಡೆಯುತ್ತಿವೆ ಇದಕ್ಕೆ ಪುರುಷ ಮಾತ್ರವಲ್ಲ ಮಹಿಳೆಯರ ಪಾತ್ರವು ಇರುವುದನ್ನು ಗಮನಿಸಬೇಕು ಎಂದರು. ಉಪನ್ಯಾಸಕಿ ಅಶ್ವಿನಿ ಮತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

