ಮಹಿಳಾ ದೌರ್ಜನ್ಯ ಕಾಯ್ದೆ ಸದ್ಬಳಕೆಯಾಗಲಿ
ಹೊಳಲ್ಕೆರೆ: ಮಹಿಳಾ ದೌರ್ಜನ್ಯ ಕಾಯ್ದೆಯಡಿ ಹೆಣ್ಣು ಮಕ್ಕಳಿಗೆ ಸೂಕ್ತ ಸ್ಥಾನಮಾನ, ರಕ್ಷಣೆ ಕೊಟ್ಟಿದ್ದು ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಕಾಯ್ದೆಗೆ ಗೌರವ ಸಿಗುತ್ತದೆ ಎಂದು ಸಿವಿಲ್ನ್ಯಾಯಾಧೀಶರಾದ ಟಿ. ಶಿವಣ್ಣ ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯನ್ನು ಹಿಂಸಿಸುವುದು, ಕಿರುಕುಳ ಕೊಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಸಮಾಜದಲ್ಲಿ ಮಹಿಳೆಯರ ದೌರ್ಜ್ಯನ್ಯ, ಶೋಷಣೆ ನಿಲ್ಲಬೇಕಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಮಹಿಳೆಯನ್ನು ಗೌರವ ಸ್ಥಾನದಿಂದ ನೋಡಬೇಕು. ಹೆಣ್ಣಲ್ಲವೇ ತಮ್ಮನೆಲ್ಲಾ ಹಡೆದ ತಾಯಿ ಹೆಣ್ಣಲ್ಲವೇ ನಮ್ಮನೆಲ್ಲಾ ಪೊರದತಾಯಿ ಎಂಬ ನಾಣ್ನುಡಿಯಂತೆ ಹೆಣ್ಣನ್ನು ಸಮಾನತೆ ದೃಷ್ಟಿಯಿಂದ ಗೌರವಿಸಬೇಕು ಎಂದರು.
ಪ್ರಬಾರೆ ತಹಸೀಲ್ದಾರ್ ಡಾ.ಎ. ಸೌಜನ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ವಿದ್ಯಾವಂತರಾಗಿ ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಮಹಾನ್ವ್ಯಕ್ತಿಗಳನ್ನಾಗಿ ಮಾಡಬೇಕು. ಮಹಿಳೆ ಸಮಾಜದಲ್ಲಿ ಪುರುಷರಷ್ಟೆ ಸಮಾನಳು ಎನ್ನುವ ಸ್ಥಾನ ನಮಗೆ ಲಬಿಸುತ್ತದೆ ಎಂದರು.
ವಕೀಲ ಜಿ. ಗೋವಿಂದರಾಜು, ಕೌಟುಂಬಿಕ ದೌರ್ಜನ್ಯ ಕಾಯ್ದೆ, ವಕೀಲ ಜಿ.ಎಸ್. ಹನುಮಂತೇಗೌಡ, ಮಹಿಳೆಯರ ಹಕ್ಕುಗಳು, ವಕೀಲ ಎಚ್. ಮಲ್ಲಿಕಾರ್ಜುನ ಜೀವನಾಂಶ ಬಗ್ಗೆ ಉಪನ್ಯಾಸ ನೀಡಿದರು. ವಕೀಲ ಎಸ್.ಎಂ. ಆನಂದಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಜಿ. ಮುನೀಶ್ವರಪ್ಪ, ಸಹಾಯಕ ಸಿಡಿಪಿಓ ಜಯ್ಯಣ್ಣ ಮಾತನಾಡಿದರು. ಸರ್ಕಾರಿ ಅಬಿಯೋಜಕ ಶಂಶೀರ್ ಅಲಿಖಾನ್, ಎಲ್.ಆರ್. ರಂಗಸ್ವಾಮಿ, ಕಾರ್ಯದರ್ಶಿ ಎಸ್. ವೇದಮೂರ್ತಿ, ತಾ.ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋದಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

