ಚಿತ್ರದುರ್ಗ

ಮಹಿಳಾ ಹಕ್ಕು ರಕ್ಷಣೆ ಸಮಾಜದ ಹೊಣೆ

Published On :

ಕಪ್ರ ವಾರ್ತೆ, ಹಿರಿಯೂರು, ಮಾ8
ಕಾನೂನು ಅನುಷ್ಠಾನವಾಗತ್ತಿದ್ದರೂ ಮಹಿಳೆಯರಿಗೆ ಸಮಾನತೆ, ಹಕ್ಕು ಅಧಿಕಾರಗಳು ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗಿಲ್ಲವೆಂದು ಹಿರಿಯ ಜೆಎಂಎಫ್‌ಸಿ ಮತ್ತು ಸಿವಿಲ್‌ನ್ಯಾಯಾಧೀಶ ಎಂ.ಬಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
 ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬಾಪೂಜಿ ವಿದ್ಯಾಸಂಸ್ಥೆಯ ಆಶ್ರದಲ್ಲಿ ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಾಗರಿಕ ಸಮಾಜದಲ್ಲಿ ಮಹತ್ತರ ಬದಲಾವಣೆ ನಡೆಯುತ್ತಿದ್ದರೂ ಹೆಣ್ಣುಮಕ್ಕಳ ಶೋಷಣೆ ತಪ್ಪಿಸಲಾಗಿಲ್ಲವೆಂದು ಹೇಳಿದರು. ಬಲವಾದ ಕಾನೂನುಗಳ ನೆರವಿದ್ದರೂ ಪ್ರಸ್ತುತ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲವೆಂದರು. ಈ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳು ಮತ್ತು ಅಧಿಕಾರಗಳ ರಕ್ಷಣೆಯನ್ನು ಮಾಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆಯೆಂದು ಹೇಳಿದರು.
 ಹಿರಿಯ ಸಿವಿಲ್‌ನ್ಯಾಯಾಧೀಶ ಎಚ್. ದೇವರಾಜು ಮಾತನಾಡಿ, ಪುರಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕು ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಮಹಿಳಾ ಸಮೂಹ ಎಚ್ಚೆತ್ತು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುವ ಅವಶ್ಯಕತೆಯಿದೆಯೆಂದು ಹೇಳಿದರು. ಕೌಟುಂಬಿಕ ವ್ಯವಸ್ಥೆಯಲ್ಲಿ ಬದಲಾದ ಕಾಲಕ್ಕನುಗುಣವಾಗಿ ದಾಂಪತ್ಯದ ಪರಿಕಲ್ಪನೆಗಳಲ್ಲಿ ವ್ಯತ್ಯಾಸಗಳಾಗುತ್ತಿದ್ದು ಕೌಟುಂಬಿಕ ಸಾಮರಸ್ಯಕ್ಕೆ ಇವು ಅಡ್ಡಿಯಾಗಿವೆಯೆಂದು ಹೇಳಿದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಪ್ರಸ್ತುತ ಪೀಳಿಗೆಯ ಮಹಿಳೆಯರು ಮೈಗೂಡಿಸಿಕೊಂಡಿರುವುದರಿಂದ ಪುರುಷರು ಸೂಕ್ಷ್ಮತೆಗಳನ್ನು ಅರಿಯದಿದ್ದಾಗ ಕೌಟುಂಬಿಕ ವಿಘಟನೆ, ವಿಚ್ಚೇದನಗಳಿಗೆ ಕಾರಣವಾಗುತ್ತದೆಯೆಂದು ಹೇಳಿದರು.
 ಬಾಪೂಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಮುತ್ತುಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಕೆ. ಮಹಂತೇಶ್, ಕಾರ್ಯದರ್ಶಿ ಎಂ.ಆರ್. ಪ್ರಭಾಕರ್, ಡಿ. ಗೌಡ, ಬಿ. ಕಾಂತರಾಜ್, ಅಸ್ಗರ್ ಉನ್ನೀಸಾ, ರಂಗನಾಥ್, ಆರೀಫ್ ಉಲ್ಲಾ ಖಾನ್, ಮಹಾಹಬಲೇಶ್, ಎಂ. ಮೀನಾಕ್ಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.