ಚಿತ್ರದುರ್ಗ

ಲೆಕ್ಕ ನೀಡಲು ಅಭ್ಯರ್ಥಿಗಳಿಗೆ ಸೂಚನೆ

Published On :

ಕನ್ನಡಪ್ರಭ ವಾರ್ತೆ, ಚಳ್ಳಕೆರೆ, ಮಾ.8
ಪುರಸಭೆ ಚುನಾವಣೆಗಳ ಮತ ಎಣಿಕೆ ಕಾರ್ಯ ಇಲ್ಲಿನ ತಾಲೂಕು ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಪ್ರಾರಂಭವಾಗಲಿದೆ. ಮತ ಎಣಿಕೆ ಕಾರ್ಯ ಹಾಗೂ ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಸುದೀರ್ಘ ಮಾಹಿತಿಯನ್ನು ನೀಡಿದರು.  
ಪುರಸಭೆ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಬಹುತೇಕ ಎಲ್ಲಾ ಅಭ್ಯರ್ಥಿಗಳ ಹಾಗೂ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಮುಖ್ಯಾಧಿಕಾರಿ ಐ. ಬಸವರಾಜ್ ಎಲ್ಲರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಸಭೆಯ ಉದ್ದೇಶ ತಿಳಿಸಿದರು.  
ಪ್ರಾರಂಭದಲ್ಲಿ ಮಾತನಾಡಿದ ಲೆಕ್ಕಾಧಿಕಾರಿ ಮೈಲಾರಪ್ಪ, ಎಲ್ಲಾ ಅಭ್ಯರ್ಥಿಗಳು ತಾವು ಮಾಡಿರುವ ವೆಚ್ಚಗಳ ಬಗ್ಗೆ ನಿಗಧಿತ ಅರ್ಜಿಯಲ್ಲಿ ವಿವರವನ್ನು ನೀಡಬೇಕು. ಎಲ್ಲಾ ಲೆಕ್ಕಗಳಿಗೂ ರಶೀದಿ ಲಗತ್ತಿಸಿರಬೇಕು. ಮಾ.12ರ ಒಳಗೆ ಎಲ್ಲಾ ಅಭ್ಯರ್ಥಿಗಳು ಕಚೇರಿಗೆ ಲೆಕ್ಕಪತ್ರಗಳನ್ನು ತಂದು ಒಪ್ಪಿಸಬೇಕೆಂದು ಸೂಚನೆ ನೀಡಿದರು. ಅಭ್ಯರ್ಥಿಗಳಿಗೆ ಯಾವ ರೀತಿಯಲ್ಲಿ ಲೆಕ್ಕಗಳನ್ನು ನೀಡಬೇಕೆಂಬುದರ ಬಗ್ಗೆ ಸ್ವಷ್ಟ ಮಾಹಿತಿ ತಿಳಿಸಿದರು.
ಒಟ್ಟು 7 ಬಾರಿ ಎಣಿಕೆ: ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಮಾತನಾಡಿ, ಚುನಾವಣೆಗಳನ್ನು ಎಲ್ಲರೂ ಸಹಕಾರ ಮನೋಭಾವನೆಯಿಂದ ನಡೆಸಿದ್ದೀರಿ. ಎಲ್ಲರಿಗೂ ಗೆಲುವು ಸಾಧಿಸಬೇಕೆಂಬ ಆಸೆ ಸಹಜ. ಆದರೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 27 ಜನರು ಮಾತ್ರ ಜನರಿಂದ ಆಯ್ಕೆಯಾಗುವರು. ತಾಲೂಕು ಕಚೇರಿಯಲ್ಲಿ ನಡೆಯುವ ಮತ ಎಣಿಕೆ ಕಾರ್ಯದಲ್ಲಿ ಆರು ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಬಾರಿಗೆ ಆರು ಮತಗಟ್ಟೆಗಳ ಎಣಿಕೆ ಕಾರ್ಯ ನಡೆಯುವುದು. ಒಟ್ಟು ಏಳು ಬಾರಿ ಎಣಿಕೆಯಾಗಲಿದೆ. ಪ್ರತಿ ಟೇಬಲ್‌ಗೆ ಆಯಾ ವಾರ್ರ್‌ನ ಅಭ್ಯರ್ಥಿಗೆ ಮಾತ್ರ ಅವಕಾಶವಿದೆ. ಅಭ್ಯರ್ಥಿ ಬರಲಾಗದಿದ್ದಲ್ಲಿ ಅವರ ಏಜೆಂಟರನ್ನು ಕಳುಹಿಸುವ ಮುನ್ನ ಸಂಬಂಧಪಟ್ಟ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಉದ್ವೇಗಕ್ಕೆ ಒಳಗಾಗಬೇಡಿ: ಶೇ.78 ಮತದಾನವಾಗಿದ್ದು, ಎಣಿಕೆ ಕಾರ್ಯದಲ್ಲೂ ಸಿಬ್ಬಂದಿಯೊಂದಿಗೆ ಸೌಹಾರ್ಧತೆಯಿಂದ ಸಹಕರಿಸಬೇಕು ಎಂದರು. ಕೇವಲ ಎರಡು ಮೂರು ಗಂಟೆಗಳಲ್ಲಿ 27 ವಾರ್ಡ್‌ಗಳ ವಿಜೇತರನ್ನು ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಸೋಲು ಗೆಲುವುಗಳನ್ನು ಸಮಾಧಾನದಿಂದಲೇ ಸ್ವೀಕರಿಸಬೇಕು. ಯಾವುದೇ ಹಂತದಲ್ಲೂ ಉದ್ವೇಗಕ್ಕೆ ಒಳಗಾಗಿ ಅನಗತ್ಯ ಸಮಸ್ಯೆಗಳನ್ನು ಹುಟ್ಟು ಹಾಕದಂತೆ ಎಚ್ಚರಿಕೆ ವಹಿಸಬೇಕೆಂದರು.  
ಚುನಾವಣಾಧಿಕಾರಿಗಳಾದ ಡಾ. ತಿಪ್ಪೇಸ್ವಾಮಿ, ಡಿ.ಜೆ. ತಿಮ್ಮಣ್ಣ, ರವಿಕುಮಾರ್, ಉಪನಿರೀಕ್ಷಕ ರೇವಪ್ಪ, ಚುನಾವಣಾ ಸಿಬ್ಬಂದಿಯವರಾದ ಶ್ರೀರಾಮು, ಮಂಜಣ್ಣ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.