'ಭ್ರೂಣ ಹತ್ಯೆ ತಡೆಯಲು ಹೆಣ್ಣಿನಿಂದ ಸಾಧ್ಯ'
ಕ.ಪ್ರ.ವಾರ್ತೆ ಹೊಸದುರ್ಗ ಮಾ.9
ಹೆಣ್ಣು ಭ್ರೂಣ ಹತ್ಯೆ ತೊಡೆದು ಹಾಕಲು ಹೆಣ್ಣಿನ ಸಹಕಾರ ತುಂಬ ಅವಶ್ಯವಾಗಿದೆ. ಅವರಿಂದ ಮಾತ್ರ ಇದನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ಡಿ. ವೇಣುಗೋಪಾಲ್ ಅಭಿಪ್ರಾಯಪಟ್ಟರು.
ಅವರು ತೋಟದ ರಾಮಯ್ಯ ಬಾಲಿಕಾ ಪ್ರೌಢಶಾಲಾ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತೋಟದ ರಾಮಯ್ಯ ಬಾಲಿಕಾ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದೆ. ಘಟನೆ ನಡೆಯುವ ಹಂತದಲ್ಲಿ ಜಾಗೃತಿವಹಿಸಿ ಸ್ವಪ್ರಯತ್ನ, ಸ್ವನಿರ್ಧಾರ ವಹಿಸಿದರೆ ಘಟನೆ ತಡೆಯಲು ಸಾಧ್ಯ ಎಂದರು.
ಹಿರಿಯ ವಕೀಲರಾದ ಷಡಾಕ್ಷರಪ್ಪ ಮಾತನಾಡಿ, ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂಗೆ ಮೊಬೈಲ್ ಫೋನ್ ಮೂಲ ಕಾರಣವಾಗಿದೆ ಎಂದರು.
ಕಾನೂನು ಮಾಹಿತಿ ಇರಲಿ: ವಕೀಲರಾದ ಕೆ.ಬಿ. ಕವಿತಾ ಮಾತನಾಡಿ, ಕಾರ್ಮಿಕರ ವಲಯದಲ್ಲಿ ಮಹಿಳೆ ಮೇಲಾಗುವ ದೌರ್ಜನ್ಯ, ವೇಶ್ಯಾವಾಟಿಕೆ ಕೂಟಗಳಿಂದ ತಪ್ಪಿಸಿಕೊಳ್ಳುವಂತಾಗಬೇಕು. ಇದರಿಂದ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ, ಕಾನೂನು ಮಾಹಿತಿ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ಎಲ್. ಬೊಮ್ಮಣ್ಣ, ಎಚ್. ಲಕ್ಷ್ಮಿನಾರಾಯಣ್, ಟಿ. ರಮೇಶ್, ಎ.ಟಿ. ರಮೇಶ್, ಎಚ್.ಎಸ್. ರುಕ್ಷ್ಮಿಣಿ ಮಾತನಾಡಿದರು. ವಕೀಲರಾದ ಮಹಮದ್ ರೆಹಮತ್ತುಲ್ಲಾ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

