ಚಿತ್ರದುರ್ಗ

ಮಕ್ಕಳ ಮನಸ್ಸು ಅರಿತು ಶೈಕ್ಷಣಿಕ ಕಾರ್ಯಕ್ರಮ ರೂಪಿಸಬೇಕು

Published On :

ಕಪ್ರ ವಾರ್ತೆ, ಹಿರಿಯೂರು, ಮಾ.9
ದೇಶದಾಂದ್ಯಂತ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಕೊಡುವುದರಲ್ಲಿ ಪೋದಾರ್ ಜಂಬೋ ಕಿಡ್ಸ್‌ಗೆ 89 ವರ್ಷಗಳ ಇತಿಹಾಸವಿದೆಯೆಂದು ಫ್ರಾಂಚೈಸಿ ಶಶಿಕಲಾ ರವಿಶಂಕರ್ ತಿಳಿಸಿದರು.
 ಪಟ್ಟಣದ ನೆಹರೂ ಮೈದಾನದಲ್ಲಿರುವ ಪೋದಾರ್ ಜಂಬೋ ಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಮಕ್ಕಳ ಮನಸ್ಸನ್ನು ಅರಿತು ಅವರಿಗೆ ಕೊಡಮಾಡುವ ಆವಶ್ಯಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯ ಬಹುದಾಗಿದೆಯೆಂದು ಹೇಳಿದರು.
 ರೆಡ್‌ಕ್ರಾಸ್ ಉಪಾಧ್ಯಕ್ಷ ಸುಂದರ್‌ರಾಜ್ ಮಾತನಾಡಿ, ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ದುಬಾರಿ ಹಣ ತೆತ್ತು ಮಕ್ಕಳಿಗೆ ಶಿಕ್ಷಣವನ್ನು ಕಲ್ಪಿಸುವ ಪರಿಸ್ಥಿತಿಯಿರುವಾಗ ಈ ಶಾಲೆಯು ಹೆಚ್ಚಿನ ಆರ್ಥಿಕ ಹೊರೆ ನೀಡದೆ ಗುಣಮಟ್ಟದ ಶಿಕ್ಷಣ ಕಲ್ಪಿಸುವುದಕ್ಕೆ ಮುಂದಾಗಿರುವುದು ಶ್ಲಾಘನೀಯವೆಂದರು.
  ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಜಿ.ರವಿಶಂಕರ್, ದೇವರಾಜ್‌ಮೂರ್ತಿ, ಪರಮೇಶ್ವರ ಭಟ್, ಸಂಗೀತಾ ರಾಜನ್, ಮಂಗಳ ಗೌರಿ, ಶಿಕ್ಷಕಿ ರೂಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.