ವಚನಕಾರರು ಎಲ್ಲ ಕಾಲಕ್ಕೂ ಸಮಕಾಲೀನರು
ಕ.ಪ್ರ ವಾರ್ತೆ, ಸಾಣೇಹಳ್ಳಿ, ಮಾ.9
ಪ್ರಸ್ತುತ ಜಗತ್ತಿನ ಎಲ್ಲ ಬಿಕ್ಕಟ್ಟುಗಳಿಗೂ ವಚನಕಾರರ ಬದುಕು - ಬರಹವೇ ಪರಿಹಾರ ಎಂದು ಖ್ಯಾತ ಲೇಖಕ ಡಾ.ರಾಜೇಂದ್ರ ಚೆನ್ನಿ ಹೇಳಿದರು.
ಶ್ರೀ ಶಿವಕುಮಾರ ಕಲಾಸಂಘ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಂಜೆ ಪ್ರಾರಂಭಗೊಂಡ ಎರಡು ದಿನಗಳ ವಚನಕಾರರ ಜಯಂತಿ ಉದ್ಘಾಟನೆಯಲ್ಲಿ ಮಾತನಾಡಿದ ಚೆನ್ನಿ, ಪರಸ್ಪರ ಮನುಷ್ಯರೆಲ್ಲ ಎದುರು ಬದುರು ಕೂತು ಮುಕ್ತವಾಗಿ ಸತ್ಯವನ್ನು ನಿರ್ಭಿಡೆಯಿಂದ ಮಾತನಾಡುವ ಸ್ಥಳವೇ ಅನುಭವ ಮಂಟಪ ಎಂದರು.
ಬಿಕ್ಕಟ್ಟಿಗೆ ಪರಿಹಾರ: ವಚನಕಾರರು ಎಲ್ಲ ಕಾಲಕ್ಕೂ ಸಮಕಾಲೀನರೇ. ವಚನಕಾರರು ತಮಗೆದುರಾದ ಬಿಕ್ಕಟ್ಟಗಳನ್ನು ಒಮ್ಮನದಿಂದ ಎದುರಿಸಿದಂತೆ ಮತ್ತಾವ ಕಾಲಘಟ್ಟದಲ್ಲೂ ಎದುರಿಸಿಲ್ಲ. ಹೀಗಾಗಿ ಜಗತ್ತಿನ ಪ್ರಸ್ತುತ ಬಿಕ್ಕಟ್ಟುಗಳಿಗೂ ಪರಿಹಾರ ವಚನಕಾರರ ಬದುಕು-ಬರಹ ಎಂದು ಅವರು ತಿಳಿಸಿದರು. ದಲಿತರು, ಅಸ್ಪೃಶ್ಯರು ವಚನಕಾರರ ಯುಗದಲ್ಲಿ ಮಾತನಾಡಿದಂತೆ ಇಂದಿನ ಪ್ರಜಾಪ್ರಭುತ್ವದಲ್ಲೂ ಮಾತನಾಡಲಾಗುತ್ತಿಲ್ಲ ಎಂದರು.
ಸಾನ್ನಿಧ್ಯವಹಿಸಿ ಮಾತನಾಡಿದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾತುಗಳನ್ನೇ ಬಂಡವಾಳ ಮಾಡಿಕೊಂಡು ತಮ್ಮ ಏಳ್ಗೆಯನ್ನು ಮಾತ್ರ ಕಾಯ್ದುಕೊಂಡು ಬರುವ ವರ್ಗ ಇರುವಂತೆ, ಮಾತನಾಡದೆ ಮತ್ತೊಬ್ಬರ ಏಳಿಗಾಗಿ ದುಡಿಯುವ ವರ್ಗ ಎಲ್ಲ ಕಾಲಕ್ಕೂ ಇದ್ದೇ ಇದೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ, ಲಿಂಗಾಯಿತ ಧರ್ಮ ಜಾತಿವಾಚಕಗಳಲ್ಲ. ಅವು ಗುಣವಾಚಕ. ವಚನಸಾಹಿತ್ಯ ಕೇವಲ ವಿರಕ್ತರ ಸ್ವತ್ತಲ್ಲ. ಅವು ಮಾನವೀಯ ಮೌಲ್ಯಗಳು ಮನುಷ್ಯ ಮಾತ್ರರೆಲ್ಲರಿಗೂ ಸೇರಿದಂಥವು. ಬಸವಣ್ಣ ಸೇರಿದಂತೆ ಮುಂತಾದ ವಚನಕಾರರು ನುಡಿದಂತೆ ನಡೆದವರು. ಹಾಗಾಗಿಯೇ ವಚನಕಾರರು ಇವತ್ತೂ ಪ್ರಸ್ತುತರಾಗಿದ್ದಾರೆ ಎಂದರು.
ಚಿತ್ರದುರ್ಗ ಜಿಪಂ ಸಿಇಓ ಕೆ.ಎಂ. ನಾರಾಯಣಸ್ವಾಮಿ ಮಾತನಾಡಿದರು. ಬೆಂಗಳೂರಿನ ಶ್ರೀ ಶ್ವಾಸಗುರು ವಚನಾನಂದ ಸ್ವಾಮಿಗಳು ಯೋಗದ ಜೊತೆ ವಚನಗಳನ್ನು ನೆರೆದ ಪ್ರೇಕ್ಷಕರಿಗೆ ಹೇಳಿಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕಿ ಬಿ. ನೀಲಮ್ಮ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಣೇಹಳ್ಳಿಯ ಶಿವಸಂಚಾರ ತಂಡದ ದಾಕ್ಷಾಯಣಿ, ಜ್ಯೋತಿ ಹಾಗೂ ಚಿತ್ರದುರ್ಗದ ಜಿ.ಎನ್. ವಿರೂಪಾಕ್ಷಪ್ಪ, ಮೀನಾಕ್ಷಿ ಭಟ್ ಮತ್ತು ಡಿ.ಓ. ಮುರಾರ್ಜಿ ಹಾಗೂ ಸಂಗಡಿಗರು ವಚನಗೀತೆಗಳನ್ನು ಹಾಡಿದರು. ಓ. ಶಿವಕುಮಾರ್ ನಿರೂಪಿಸಿ ವಂದಿಸಿದರು. ನಟಿ, ವೈಜಯಂತಿ ಕಾಶಿ ಮತ್ತವರ ತಂಡದಿಂದ ವಿಶೇಷ ನೃತ್ಯ ರೂಪಕ ವಚನ ತರಂಗ ಮೂಡಿಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

