ಗುತ್ತಿಗೆದಾರನನ್ನು ಕರೆಸಿ
ದಾವಣಗೆರೆ: ಇಲ್ಲಿನ ಪಾಲಿಕೆ ಸದಸ್ಯರಿಗೆ ಸುಮಾರು ರು. 18 ಲಕ್ಷ ನೀಡಿರುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾದ ಗುತ್ತಿಗೆದಾರನನ್ನು ಕರೆಸಿ ಆತ ಆರೋಪ ಸಾಬೀತುಪಡಿಸಬೇಕು ಇಲ್ಲವೇ, ಸರ್ವ ಸದಸ್ಯರ ಬಳಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ವಿಪಕ್ಷ ಸದಸ್ಯ ಡಿ.ಎನ್. ಜಗದೀಶ ಒತ್ತಾಯಿಸಿದರು.
ನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ಸುಧಾ ಜಯರುದ್ರೇಶ್ ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯುಐಡಿಎಸ್‌ಎಸ್‌ಎಂಟಿ ಯೋಜನೆಯಡಿ ಕಾಮಗಾರಿ ಕೈಗೊಂಡ ಗುತ್ತಿಗೆದಾರ ನಗರಪಾಲಿಕೆ ಸದಸ್ಯರಿಗೆ ಹಣ ಕೊಟ್ಟಿದ್ದಾಗಿ ಹೇಳಿಕೊಂಡ ಬಗ್ಗೆ ಪತ್ರಿಕೆಗಳಲ್ಲೇ ವರದಿಯಾಗಿದ್ದರ ಸತ್ಯಾಸತ್ಯತೆಯು ಜನತೆಗೂ ಗೊತ್ತಾಗಲಿ ಎಂದರು.
ಸತ್ಯಾಸತ್ಯತೆ ಪರಿಶೀಲನೆ: ಆಡಳಿತ ಪಕ್ಷದ ಸದಸ್ಯೆ ಜ್ಯೋತಿ ಸಿದ್ದೇಶ ಮಾತನಾಡಿ, ಯುಐಡಿಎಸ್‌ಎಸ್‌ಎಂಟಿ ಕಾಮಗಾರಿ ಕೈಗೊಂಡ ಗುತ್ತಿಗೆದಾರನಿಗೆ ಬಜೆಟ್ ಸಭೆಗೆ ಮುನ್ನ ಕರೆಸಿ, ಸತ್ಯಾಸತ್ಯತೆ ಎಂಬುದು ನಮಗೂ ಗೊತ್ತಾಗಲಿ. ಆತನನ್ನು ಬಜೆಟ್ ಸಭೆಗೆ ತಪ್ಪದೇ ಕರೆಸುವಂತೆ ಒತ್ತಾಯಿಸಿದಾಗ ಸದಸ್ಯ ಎಂ.ಪಿ. ಕೃಷ್ಣಮೂರ್ತಿ ಪವಾರ್ ಮಾತನಾಡಿ, ಆತನನ್ನು ಕರೆಸಿ, ಸರ್ವ ಸದಸ್ಯರ ಸಮ್ಮುಖದಲ್ಲೇ ಸತ್ಯ ಬಿಚ್ಚಿಡುವಂತೆ ಮಾಡಿ ಎಂದು ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಲೋಕೇಶ ಮಾತನಾಡಿ, ಭ್ರಷ್ಟಾಚಾರವೆಂಬುದು ಆತ್ಮಸಾಕ್ಷಿಗೆ ಬಿಟ್ಟ ಸಂಗತಿ. ಗುತ್ತಿಗೆದಾರ ಒಂದು ವೇಳೆ ಹಣ ಕೊಟ್ಟಿದ್ದಾಗಿ ಆರೋಪಿಸಿದ್ದರೆ ಅದು ಇಡೀ ಸದನಕ್ಕೆ ಮಾಡಿದ ಅವಮಾನ. ಅದೊಂದು ಬಾಲಿಶ ಹೇಳಿಕೆ ಆಗಿರಲೂಬಹುದು. ಆತನದ್ದು ಹಾರಿಕೆ ಉತ್ತರವಾಗಿದ್ದರೆ, ಬಿಟ್ಟು ಬಿಡಿ ಎಂಬುದಾಗಿ ಹೇಳಿದರು. ಇದರೊಂದಿಗೆ ಗುತ್ತಿಗೆದಾರನ ಆರೋಪದ ಸಂಗತಿಯು ಮುಕ್ತಾಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

