ಮತ್ತೆ ಶಾಸಕನಾದರೆ ಜನರ ಋಣ ತೀರಿಸುವೆ
ದಾವಣಗೆರೆ: ಹಳೆಬಾತಿ, ದೊಡ್ಡಬಾತಿ, ನೀಲಾನಹಳ್ಳಿ ಜನತೆ ಋಣ ನನ್ನ ಮೇಲೆ ಸಾಕಷ್ಟು ಇದ್ದು, ಮುಂದಿನ ದಿನಗಳಲ್ಲಿ ಶಾಸಕನಾದಲ್ಲಿ ಎಲ್ಲರ ಋಣ ತೀರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಶುಕ್ರವಾರ ಗ್ರಾಪಂ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳ ಅವದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಸ್ಪಂದಿಸಿದೆ. ಗ್ರಾಮೀಣ ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡ, ಕೊಠಡಿಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಿದ್ದು, ಇನ್ನೂ ಆಗಬೇಕಾದ ಕೆಲಸಗಳೂ ಸಾಕಷ್ಟಿವೆ ಎಂದು ಅವರು ತಿಳಿಸಿದರು.
ರೈತರ ಬಗ್ಗೆ ಕಳಕಳಿ: ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ರೈತರ ಮೇಲಿನ ಪ್ರೀತಿಯಿಂದಾಗಿ ಸಚಿವ ರವೀಂದ್ರನಾಥ ತಮಗೆ ಬೇರೆ ಬೇರೆ ಪ್ರಮುಖ ಖಾತೆಗಳು ಹುಡುಕಿಕೊಂಡು ಬಂದರೂ ಕೃಷಿ, ತೋಟಗಾರಿಕೆ ಖಾತೆಗೆ ಒತ್ತು ನೀಡಿದರು. ಇದು ಸಚಿವರು ರೈತರ ಬಗ್ಗೆ ಹೊಂದಿರುವ ಕಳಕಳಿಗೆ ಸಾಕ್ಷಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಲಕ್ಷ್ಮಣನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭಾನುವಳ್ಳಿ ವೀರಭದ್ರಪ್ಪ, ಬೇತೂರು ಬಿ. ಕರಿಬಸಪ್ಪ, ತಾಪಂ ಅಧ್ಯಕ್ಷ ದೊಗ್ಗಳ್ಳಿ ರೇವಣ ಸಿದ್ದಪ್ಪ, ಎ.ಎಸ್. ಶಿವಕುಮಾರ, ಎ.ಎಸ್. ಶಾಂತಪ್ಪ, ಗ್ರಾಪಂ ಸದಸ್ಯ ಡಿ.ಆರ್. ವೀರೇಶ, ರೈತ ಮುಖಂಡರಾದ ಕೊಂಡಜ್ಜಿ ಶಾನುಬೋಗರ ನಾಗರಾಜರಾವ್, ಶಾಬನೂರು ಎಚ್.ಆರ್. ಲಿಂಗರಾಜ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

