ದಾವಣಗೆರೆ

ರಾಜಕಾರಣದ ಮೌಲ್ಯ ಕುಸಿಯುತ್ತಿವೆ: ವಿಶ್ವನಾಥ್

Published On :

ಹರಪನಹಳ್ಳಿ: ರಾಜ್ಯ ರಾಜಕಾರಣವನ್ನು ನಕಾರಾತ್ಮಕವಾಗಿ ನೋಡಿದರೆ ಅಭಿವೃದ್ಧಿಗೆ ಅಪಾಯ ಎಂದು ಸಂಸದ ಎಚ್. ವಿಶ್ವನಾಥ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣ ಎಡಿಬಿ ಕಾಲೇಜು ಆವರಣದಲ್ಲಿ ಹರಪನಹಳ್ಳಿಯ ಕಲಾಭಾರತಿ, ಹಡಗಲಿಯ ರಂಗಭಾರತಿ, ಗದಗ ಜಿಲ್ಲೆಯ ಮ.ಮ. ಪಾಟೀಲ್ ಪ್ರತಿಷ್ಠಾನ, ಲಿಂಗಾಯತ ಅಧ್ಯಯನ ಸಂಸ್ಥೆ ಹಾಗೂ ಹಡಗಲಿಯ ಎಂ.ಪಿ. ಪ್ರಕಾಶ ಪ್ರತಿಷ್ಠಾನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ಎಂ.ಪಿ. ಪ್ರಕಾಶ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣದಲ್ಲಿ ಮಾನವೀಯತೆ ನೆಲೆಯ ಚಿಂತನೆ ಅಳವಡಿಸಿಕೊಳ್ಳುವವರ ಕೊರತೆ ಉಂಟಾಗಿದೆ. ಇಲ್ಲದವರ ಪರವಾಗಿ ಹೋರಾಟ ಮಾಡುವವರ ಕೊರತೆಯಿಂದಾಗಿ ರಾಜಕಾರಣದ ಮೌಲ್ಯಗಳು ಕುಸಿಯತೊಡಗಿದೆ. ಕೇವಲ ಮತಕ್ಕಾಗಿ ಮಾತ್ರ ಬೆಲೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಂ.ಪಿ. ಪ್ರಕಾಶರಂತಹ ಸಮಾಜವಾದಿ ನಾಯಕರು ಬೆರಳೆಣಿಕೆ ಮಾತ್ರ ಎಂದರು.  
ಒಡನಾಟದ ಮೆಲುಕು: ಪ್ರಸ್ತುತ ರಾಜಕಾರಣ ತುಲನೆ ಮಾಡಿದರೆ ಎಂ.ಪಿ. ಪ್ರಕಾಶರಂತಹ ವ್ಯಕ್ತಿತ್ವ ಸಂಭವನೀಯ ಮನುಷ್ಯರು ಸಿಗಲು ಸಾಧ್ಯವಿಲ್ಲ. ರಾಜಕಾರಣಿಗಳಿಗಿಂತ ಹೆಚ್ಚಾಗಿ ರಂಗಕರ್ಮಿ ಅವರಾಗಿದ್ದರು ಎಂದು ಅವರ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಚರಪೀಠಾಧಿಪತಿ ಸಿದ್ದಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು,
ಶಾಸಕರಾದ ಅಮರೇಗೌಡ ಬಯ್ಯಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸತೀಶ ಜಾರಕಿಹೊಳಿ, ಮಹಾದೇವ ಪ್ರಸಾದ, ಮಾಜಿ ಶಾಸಕ ನಂಜಯ್ಯನಮಠ, ತುಂಗಭದ್ರ ಕಾಡಾ ಮಾಜಿ ಅಧ್ಯಕ್ಷ ತಿಮ್ಮಪ್ಪ,  ದೀಪಕ್ ಕುಮಾರ ಸಿಂಗ್, ವಿಜಯಸಿಂಗ್, ಕೆಪಿಸಿಸಿ ಪಪಂ ರಾಜ್ಯಾಧ್ಯಕ್ಷ ಈಶ್ವರ, ಹಾಲೇಶ, ಚಿದಾನಂದ, ವಿರೂಪಾಕ್ಷಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.