ಅಭ್ಯರ್ಥಿಯಿಂದ ಬೆದರಿಕೆ, ರಕ್ಷಣೆಗೆ ನಿವಾಸಿಗಳ ಒತ್ತಾಯ
ಕ.ಪ್ರ.ವಾರ್ತೆ, ದಾವಣಗೆರೆ, ಮಾ.8
ನಾನು ಚುನಾವಣೆಯಲ್ಲಿ ಸೋತರೆ, ನೀವು ಮನೆಗಳನ್ನು ಖಾಲಿ ಮಾಡಬೇಕು ಎಂಬುದಾಗಿ ಪ್ರಮುಖ ಪಕ್ಷಮೊಂದರ ಅಭ್ಯರ್ಥಿ ಬೆದರಿಕೆ ಹಾಕಿದ್ದು, ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಪಾಲಿಕೆ 1ನೇ ವಾರ್ಡ್‌ನ ನಿವಾಸಿಗಳು ಇಲ್ಲಿನ ಗಾಂಧಿ ನಗರ ಪೊಲೀಸ್ ಠಾಣೆ ಬಳಿ ಶುಕ್ರವಾರ ಸಂಜೆ ಜಮಾಯಿಸಿದ್ದರು.
ಪಾಲಿಕೆ 1ನೇ ವಾರ್ಡ್‌ನ ಪ್ರಮುಖ ರಾಜಕೀಯ ಅಭ್ಯರ್ಥಿಯು ಇಲ್ಲಿನ ಎಸ್ಸೆಸ್ಸೆಂ ನಗರದಲ್ಲಿ ನಾವಿರುವ ಜಾಗಕ್ಕೆ ಬಂದು, ಆಕಸ್ಮಾತ್ ನಾನು ಚುನಾವಣೆಯಲ್ಲಿ ಸೋತರೆ ನೀವು ಇಲ್ಲಿಂದ ಮನೆ ಖಾಲಿ ಮಾಡಿಕೊಂಡು ಹೋಗಬೇಕು. ಇಲ್ಲದಿದ್ದರೆ, ಮತ್ತೆ ಇಲ್ಲಿ ಘರ್ಷಣೆ, ಗಲಭೆಗಳನ್ನು ಉಂಟು ಮಾಡುವುದಾಗಿ ಭಯದ ವಾತಾವರಣ ನಿರ್ಮಿಸಿ ಹೋಗಿದ್ದಾರೆ ಎಂದು ಜನತೆ ದೂರಿದರು.
ಪ್ರಮುಖ ಪಕ್ಷವೊಂದರ ಅಭ್ಯರ್ಥಿ ಹೀಗೆ ರಾಜಾರೋಷವಾಗಿ ಬಂದು, ಆ ಭಾಗದಲ್ಲಿ ವಾಸಿಸುವ ನಮಗೆಲ್ಲಾ ಬೆದರಿಕೆಯನ್ನು ಹಾಕಿರುವುದರಿಂದ ನೆಮ್ಮದಿಯಾಗಿ ಅಲ್ಲಿರುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾವು ಅಲ್ಲಿರಲು ಯಾವುದೇ ತೊಂದರೆಯಾಗದಂತೆ ಇಲಾಖೆ ರಕ್ಷಣೆ ಕೊಡಬೇಕು. ಹೀಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಅಭ್ಯರ್ಥಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈಗಾಗಲೇ ಅಭ್ಯರ್ಥಿಯ ಬೆದರಿಕೆಯಿಂದಾಗಿ ಎಸ್ಸೆಸ್ಸೆಂ ನಗರದಲ್ಲಿ ವಾಸಿಸುತ್ತಿರುವ ಜನತೆಯು ತೀವ್ರವಾಗಿ ಆತಂಕಗೊಂಡಿದ್ದಾರೆ. ಬೆದರಿಕೆಯಿಂದಾಗಿ ಅಲ್ಲಿ ಭಯದ ವಾತಾವರಣ ಸೃಷ್ಟಿ ಆಗಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಅಲ್ಲಿ ವಾಸಿಸುವ ಎಲ್ಲಾ ಜನರಿಗೂ ಸೂಕ್ತ ರಕ್ಷಣೆ, ಭದ್ರತೆಯನ್ನು ಒದಗಿಸಬೇಕು ಎಂಬುದಾಗಿ ಅಲ್ಲಿ
ವಾಸಿಸುವ ಮುಖಂಡರು, ಜನತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ಸ್ಥಳಕ್ಕೆ ಧಾವಿಸಿದ ವೃತ್ತ ನಿರೀಕ್ಷಕ ಎಚ್.ಕೆ. ರೇವಣ್ಣ ಎಸ್ಸೆಸ್ಸೆಂ ನಗರ ನಿವಾಸಿಗಳ ಅಹವಾಲು ಆಲಿಸಿದರು. ಕೆಲವರು ಈ ವಿಚಾರವನ್ನು ಎಸ್ಪಿ ಲಾಭೂ ರಾಮ್ ಗಮನಕ್ಕೂ ತಂದಿದ್ದು, ಯಾವುದೇ ಭಯಪಡುವಂತಹ ಅಗತ್ಯವಿಲ್ಲ. ಯಾವುದೇ ಅಹಿತಕರ ಘಟನೆಗೂ ಇಲಾಖೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

