ದಾವಣಗೆರೆ

ಬೀಳ್ಕೊಡುಗೆ ಕ.ಪ್ರ.ದಾವಣಗೆರೆ, ಮಾ.9

Published On :

ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆಯನ್ನು 12ನೇ ಶತಮಾನದಲ್ಲಿ ಮಹಾನ್ ಮಾನವತಾವಾದಿ ಬಸವಣ್ಣ ಕೊಡಿಸಿದ್ದರೂ, ಇಂದಿಗೂ ಅವು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ವಿಷಾದ ವ್ಯಕ್ತಪಡಿಸಿದರು.
 ನಗರದ ಬಕ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಕುರುವತ್ತಿ ಕ್ಷೇತ್ರದ ಕುರುವತ್ತಿ ಬಸವೇಶ್ವರ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ದಾವಣಗೆರೆಯಿಂದ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿರುವ ಭಕ್ತರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ಸಂಕೋಲೆ ಕಿತ್ತೊಗೆದರು: ಬಸವಣ್ಣ 12ನೇ ಶತಮಾನದಲ್ಲೇ ಜಾತಿ ಸಂಕೋಲೆ ಕಿತ್ತೊಗೆಯುವ ಕೆಲಸಕ್ಕೆ ಮುಂದಾಗಿದ್ದರು. ಮಹಿಳೆಗೆ ಪುರುಷನಷ್ಟೇ ಸಮಾನ ಸ್ಥಾನಮಾನ, ಅವಕಾಶ ನೀಡಿ, ಮುಖ್ಯವಾಹಿನಿಗೆ ಬರಲು ಕಾರಣರಾದರು. ಅಕ್ಕಮಹಾದೇವಿ ಸೇರಿದಂತೆ ಹಲವಾರು ಶರಣೆಯರು ಅಂದಿನ ಅನುಭವ ಮಂಟಪದಲ್ಲಿ ವಚನ ಸಾಹಿತ್ಯದ ಮೂಲಕ ಪ್ರತಿಯೊಬ್ಬರಿಗೂ ಸನ್ಮಾರ್ಗ ತೋರಿದ್ದನ್ನು ನಾವು ಕಾಣಬಹುದು ಎಂದು ಅವರು ತಿಳಿಸಿದರು.
ಪಾದಯಾತ್ರೆ ಸಮಿತಿ ಗೌರವಾಧ್ಯಕ್ಷ ಬಿ. ಲೋಕೇಶ್ ಮಾತನಾಡಿದರು. ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಬಕ್ಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ, ವಕೀಲ ಮಾಗಾನಹಳ್ಳಿ ಶಿವಾನಂದಪ್ಪ, ಹಿರಿಯ ಉದ್ಯಮಿ ಅಥಣಿ ಎಸ್. ವೀರಣ್ಣ, ಜಿ.ಎಂ. ವೀರಯ್ಯ, ಎಂ.ಜಿ. ಬಸವರಾಜಪ್ಪ, ಸಮಿತಿಯ ಕೆ. ಬಸವರಾಜ, ಬಿ. ಮಲ್ಲಿಕಾರ್ಜುನ, ಲೋಕೇಶ, ಮೇಗಳಗೆರೆ ಬಸವ ರಾಜಪ್ಪ, ಹುಲ್ಲತ್ತಿ ಚನ್ನಬಸಪ್ಪ ಮೊದಲಾದವರು ಇದ್ದರು. ಡಾ. ಶಾಮನೂರು ಶಿವಶಂಕರಪ್ಪ, ದೊಗ್ಗಳ್ಳಿ  ಜಯಣ್ಣನವರಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.
 ನಂತರ ರಾತ್ರಿ 9ಕ್ಕೆ ಗುರು ಬಕ್ಕೇಶ್ವರರಿಗೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ಪಾದಯಾತ್ರೆ ಆರಂಭಗೊಂಡಿತು.
ಪೇದೆ ಆತ್ಮಹತ್ಯೆ
ದಾವಣಗೆರೆ: ಪೊಲೀಸ್ ಪೇದೆಯೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರ ವಲಯದ ಕುಂದುವಾಡ ರಸ್ತೆಯ ರಶ್ಮಿ ವಸತಿಯುತ ಶಾಲೆಯ ಹಿಂಭಾಗದಲ್ಲಿ ಶನಿವಾರ ನಡೆದಿದೆ.  ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆ ಪೇದೆ ಹರವಿ ಹನುಮಂತಪ್ಪ (33 ವರ್ಷ) ಆತ್ಮಹತ್ಯೆ ಮಾಡಿಕೊಂಡವನು. ಪೇದೆ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಮರದ ಬಳಿ ವಿಷದ ಬಾಟಲಿಯೂ ಪತ್ತೆಯಾಗಿದೆ ಎಂದು ಗೊತ್ತಾಗಿದೆ.   ಆತ್ಮಹತ್ಯೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.