ಧಾರವಾಡ

ಜೆಡಿಎಸ್ ಬೂತ್ ಮಟ್ಟದ ಸಮಾವೇಶ

Published On :

ಕಲಘಟಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೆ ಮಾಲೀಕರಾಗಿದ್ದು, ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಮತದಾನದ ಮೌಲ್ಯ ಅರಿತು ಮತದಾನ ಮಾಡಲು ಮುಂದಾದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಕಲಘಟಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪಿ.ಸಿ. ಸಿದ್ದನಗೌಡ್ರ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಜೆಡಿಎಸ್ ಕಾರ್ಯಕರ್ತರ ಬೂತ್.ಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ಜೆಡಿಎಸ್ ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ, ಅಧಿಕಾರಕ್ಕೆ ಬರುವ ಮುನ್ನ ರಾಜ್ಯ ಬಿಜೆಪಿ ಸರ್ಕಾರ ಮತದಾರರಿಗೆ ನೀಡಿದ ಭರವಸೆಗಳನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಜನಪರ ಯೋಜನೆಗಳನ್ನು ಮರೆತು ತಮ್ಮ ಸರ್ಕಾರದ ಅವಧಿಯಲ್ಲಿ 3 ಪಕ್ಷ, 3 ಮುಖ್ಯಮಂತ್ರಿಗಳನ್ನು ಮಾಡಿದ್ದು ಸಾಧನೆಯಾಗಿದೆ. ಪ್ರಸಕ್ತ ಚುನಾವಣೆಯಲ್ಲಿಯೂ ರಾಜ್ಯ ಮತದಾರರಿಗೆ ಮೂರು ನಾಮಗಳನ್ನು ಎಳೆದು ಮತ್ತೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಜಾಹಿದ್ ಕಾಂಟ್ರಾಕ್ಟರ್, ಅಲ್ತಾಫ್ ಕಿತ್ತೂರ, ವಕೀಲ ದೊಡ್ಡಮನಿ, ಮಹಾದೇವ ಟಗರಿ, ಅಶೋಕ ಗೋಕುಲ, ಮಹೇಶ ಜೋಶಿ, ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಮಲ್ಲಯ್ಯ ಗೋಡಿಮನಿ ಮಾತನಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಶಂಕರಗಿರಿ ಬಾವನವರ, ನಗರ ಘಟಕದ ವೃಷಬೇಂದ್ರ ಪಟ್ಟಣಶೆಟ್ಟಿ, ಎಸ್.ಎನ್. ರಾಯನಾಳ, ಇಸ್ಮಾಯಿಲ್ ತಮಟಗಾರ, ಪ್ರಕಾಶ ಹೂಲಿಕಟ್ಟಿ, ಗೀತಾ ಕಾಳಿದಾಸ ದೈವಜ್ಞ, ಡಿ.ಡಿ. ಬಾಬ್ರಿ, ಶಿವಕಲ್ಲ ಕೆಲಗೇರಿ, ಉಳವಪ್ಪ ಬಿದರಳ್ಳಿ, ಎಂ.ಎಂ. ಪಾಟೀಲ, ಗುರುಸಿದ್ದ ಟೊಂಗಳೆ, ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ ನಾಯಕ, ನೇತ್ರಾವತಿ ಕುರುಬರ ಪಾಲ್ಗೊಂಡಿದ್ದರು. ಕಾಡನಕೊಪ್ಪ, ಜಿ. ಬಸನಕೊಪ್ಪ, ದುಮ್ಮವಾಡ, ಬೀರವಳ್ಳಿ ಮುಂತಾದ ಗ್ರಾಮಗಳ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.