ಶೆಟ್ಟರದ್ದು ಹಗರಣಗಳಿಲ್ಲದ ಆಡಳಿತ
ಹುಬ್ಬಳ್ಳಿ: ಕಳೆದ ಎಂಟು ತಿಂಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಜಗದೀಶ ಶೆಟ್ಟರ್ ಅವರು ಇಲ್ಲಿಯವರೆಗೆ ಹಗರಣ, ವಿವಾದಗಳಿಲ್ಲದ ಆಡಳಿತ ನೀಡಿದ್ದು, ಮುಂದಿನ ಅವಧಿಯಲ್ಲೂ ಅವರು ಇದೇ ಮಾದರಿಯ ಆಡಳಿತ ನೀಡಲಿದ್ದಾರೆ ಎಂದು ಪೇಜಾವರಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಹೇಳಿದರು. ಹುಬ್ಬಳ್ಳಿಯಲ್ಲಿ ವಾದಿರಾಜ ಸೇವಾ ಪ್ರತಿಷ್ಠಾನದ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸುವರ್ಣಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದುತ್ವ ಮತ್ತು ಬ್ರಾಹ್ಮಣ್ಯದ ರಕ್ಷಣೆ ತಮ್ಮ ಜೀವನದ ಪ್ರಮುಖ ಗುರಿ ಎಂದು ಹೇಳಿದ ಶ್ರೀಗಳು, ಬ್ರಾಹ್ಮಣ ಸಮುದಾಯ ತನ್ನ ಪ್ರಾಚೀನ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಮತ್ತು ಕಾಲಕ್ಕೆ ತಕ್ಕಂತೆ ಆಧುನಿಕ ಶಿಕ್ಷಣ ಕೂಡ ಪಡೆಯಬೇಕು ಈ ನಿಟ್ಟಿನಲ್ಲಿ ಮಠದಿಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯಗಳನ್ನು ತೆರೆಯಲಾಗುತ್ತಿದೆ. ಹಿಂದು ಧರ್ಮದ ಇತರ ವರ್ಗಗಳಲ್ಲೂ ಶೈಕ್ಷಣಿಕ ಪ್ರಗತಿಯಾಗಬೇಕು ಎನ್ನುವ ಉದ್ದೇಶದಿಂದ ಈ ವರ್ಗಗಳಿಗೂ ಕೂಡ ವಿದ್ಯಾರ್ಥಿ ವಸತಿ ನಿಲಯಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

