ಕೆಜೆಪಿಗೆ ಭವಿಷ್ಯವಿಲ್ಲ: ಜೋಶಿ
ಧಾರವಾಡ: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಕೆಜೆಪಿಯಿಂದ ಹೊರ ಬಂದ ಸುನೀಲ್ ಸರೂರ ಸೋಮವಾರ ಮತ್ತೇ ಬಿಜೆಪಿ ಪಕ್ಷ ಸೇರಿದ್ದಾರೆ. ಈ ಮುಂಚೆ ಬಿಜೆಪಿಯಿಂದ ಕೆಜೆಪಿಗೆ ಪಾದಾರ್ಪಣೆ ಮಾಡಿದ್ದ ಸುನೀಲ ಸರೂರ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಹು-ಧಾ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದ, ಪಕ್ಷದ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಬಿಜೆಪಿಯನ್ನು ಸೇರಿಕೊಂಡರು.
ಈ ಸಂದರ್ಭ ಮಾತನಾಡಿದ ಪ್ರಹ್ಲಾದ ಜೋಶಿ, ಇದೀಗ ತಾನೇ ಅಸ್ಥಿತ್ವಕ್ಕೆ ಬಂದತಹ ಕೆಜೆಪಿಗೆ ಭವಿಷ್ಯ ಇಲ್ಲದ ಕಾರಣ ಅದರ ಪ್ರಮುಖ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕೆಜೆಪಿಯಿಂದ ರಾಜೀನಾಮೆ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಪಕ್ಷದ ವರ್ಚಸ್ಸು ಇನ್ನಷ್ಟು ಹೆಚ್ಚಾಗಿದೆ.
ಹೀಗೆ ಎಲ್ಲ ಪಕ್ಷಗಳ ಕಾರ್ಯಕರ್ತರು ಬಿಜೆಪಿಯತ್ತ ವಾಲುತ್ತಿರುವುದು ಬಿಜೆಪಿ ಬರುವ ದಿನಗಳಲ್ಲಿ ಅಧಿಕಾರಕ್ಕೆ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಕೆಜಿಪಿ ಜಿಲ್ಲಾಧ್ಯಕ್ಷರಾಗಿದ್ದ ಸುನೀಲ ಸರೂರ ಸೇರಿದಂತೆ ಸುಜಾತಾ ಕಳ್ಳಿಮನಿ, ಚಂದ್ರಕಲಾ ಬೆಳ್ಳಕ್ಕಿ, ಬಸವರಾಜ ಬೆಳ್ಳಕ್ಕಿ, ವಿಶ್ವನಾಥ ಪಾಟೀಲ, ನಾಸೀರ ನವಲಗುಂದ, ಮಹಾಲಕ್ಷ್ಮೀ ಕುಲಕರ್ಣಿ, ಪಾರ್ವತಿ ಮಿರ್ಚಿ, ತಿರುಕಪ್ಪ ಬಿಗದಕೈ, ನಿರ್ಮಲಾ ಬಿದರಿ, ರೂಪಾ ಚೌದರಿ, ಪ್ರೀಯಾ ಕುಂದನಪೂರ, ನಿರ್ಮಲಾ ಬೆಳ್ಳಕ್ಕಿ, ಸರ್ವಮಂಗಳಾ ಕಂಬಾವಿ, ದೀಪಾ ನಿಗಳೂರ, ರತ್ನಾ ಕುರಿ, ರಾಜೇಶ್ವರಿ ಕೊಂಗಿ, ಶಾರದಾ ಬಿಗದಕೈ, ರೇಣುಕಾ ಸೀರಗಂಬಿ, ದ್ರಾಕ್ಷಾಯಣಿ ಮರಲಿಂಗಂಣ್ಣವರ, ಭಾಗ್ಯಶ್ರೀ ಬಿ.ಎಂ. ಬಿಜೆಪಿಗೆ ಸೇರ್ಪಡೆಗೊಂಡರು. ಸುರೇಶ ಬೇದರೆ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ಪ್ರಕಾಶ ಗೊಡಬೊಲೆ, ಹೇಮರಾಜ ಭಂಡಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

