ಸೆಂಟ್ರಲ್‌ಗೆ ಯಮಧರ್ಮನೂ ಅಭ್ಯರ್ಥಿ!
ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿ ಶೆಟ್ಟರ್ ಸ್ಪರ್ಧೆಗೆ ಇಳಿದಿರುವ ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವ ಹಲವಾರು ಅಭ್ಯರ್ಥಿಗಳು ವಿವಿಧ ವೇಷಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದರು.
ಯಮಧರ್ಮನ ವೇಷದಲ್ಲಿ: ಯಮಧರ್ಮನ ವೇಷದಲ್ಲಿ ಆಗಮಿಸಿದ್ದ ನಿವೃತ್ತ ಮಹಾನಗರ ಪಾಲಿಕೆ ನೌಕರ, ರಂಗಭೂಮಿ ಕಲಾವಿದ ಎಸ್.ಆರ್. ಕಂಪ್ಲಿ, ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದ್ದಿಷ್ಟು, ನನಗೆ ರಾಜಕಾರಣಿ ಆಗಬೇಕು ಎನ್ನುವ ಆಸೆ ಇಲ್ಲ. ಜನರಲ್ಲಿ ನನಗೆ ಮತ ಹಾಕಿ ಎಂದು ಕೇಳುವುದಿಲ್ಲ. ಒಳ್ಳೆಯವರು ಯಾರಿದ್ದಾರೋ ಅವರಿಗೆ ಮತ ಹಾಕಿ ಎಂದು ಕೇಳಿಕೊಳ್ಳುತ್ತೇನೆ ಎಂದರು. ಪಕ್ಷೇತರ ಅಭ್ಯರ್ಥಿಯಾಗಿ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕೆ ಹುಬ್ಬಳ್ಳಿ ಹೊಸೂರನ ಶಿವಾನಂದ ಬೆಲ್ಲದ ಅವರು ತಮ್ಮ ಬೆಂಬಲಿಗ ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಚನ್ನಬಸಪ್ಪ ಅಂಗಡಿ ಅವರಿಗೆ ಮಹಾತ್ಮಾ ಗಾಂಧಿ ವೇಷ ಹಾಕಿಸಿದ್ದರು. ಹೊಸೂರಿನ ನಿವೃತ್ತ ಪೊಲೀಸ್ ಹವಾಲ್ದಾರ್ ಬಸಪ್ಪ ಕುಗಾಟಿ ಅವರು ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್ ಅವರ ವೇಷ ಧರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

