ಧಾರವಾಡ

ನಾಳೆ ಅರ್ಪಿತಾ ಭರತನಾಟ್ಯ ರಂಗ ಪ್ರವೇಶ

Published On :

 ಧಾರವಾಡ:  ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏ. 21ರಂದು ಸಂಜೆ 5ರಿಂದ ಅರ್ಪಿತಾ ಜೋಶಿ ಅವರ ಭರತನಾಟ್ಯ ರಂಗ ಪ್ರವೇಶ ನಡೆಯಲಿದೆ.
ಬೆಳಗಾವಿಯ ನೃತ್ಯ ಗುರುಗಳಾದ ವಿದ್ವಾನ್ ರವೀಂದ್ರ ಶರ್ಮ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆವಿಜಿ ಬ್ಯಾಂಕ್ನ ಮಹಾಪ್ರಬಂಧಕ ಮುರಳಿನಾಥ ಗುಪ್ತ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸ್ತ್ರೀ ರೋಗ ತಜ್ಞ ಡಾ. ಸಂಜೀವ ಕುಲಕರ್ಣಿ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಆಗಮಿಸುವರು. ಆರ್.ಎಸ್. ಕುಲಕರ್ಣಿ ಭಾಗವಹಿಸುತ್ತಾರೆ.
ಮಹಾಬಳೇಶ್ವರ ಜೋಶಿ ಹಾಗೂ ಅನಿತಾ ಜೋಶಿ ಇವರ ಪುತ್ರಿ ಅರ್ಪಿತಾ ಕಳೆದ 11 ವರ್ಷಗಳಿಂದ ಉಪಾಧ್ಯೆ ನೃತ್ಯ ವಿಹಾರದ ನಿರ್ದೇಶಕಿ ವಿದೂಷಿ ಪ್ರಮೋದಾ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಸಿಸುತ್ತಿದ್ದಾರೆ. ಸದ್ಯ ಧಾರವಾಡದ ಸಿಎಸ್ಐ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾಳೆ. ಸೀತಾ ಛಪ್ಪರ ಅವರ ಮಾರ್ಗದರ್ಶನದ ಅಭಿವ್ಯಕ್ತಿ ಕಲಾತಂಡದಿಂದ ರಾಜ್ಯ, ಹೊರ ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾಳೆ. ಬೆಂಗಳೂರು, ಮೈಸೂರು, ಹಂಪಿ, ದಾವಣಗೆರೆ, ಹೊಸರಿತ್ತಿ, ಬನಶಂಕರಿ, ಸೂರತ್, ಪುಣೆ, ಬರೋಡಾ, ಮುಂಬೈ ನಗರ ಸೇರಿದಂತೆ ಹಂಪಿ ಉತ್ಸವ, ಕಿತ್ತೂರ ಉತ್ಸವ, ಬೆಳಗಾವಿಯಲ್ಲಿ ನಡೆದ ವಿಶ್ವ ಸಾಹಿತ್ಯ ಕನ್ನಡ ಸಾಹಿತ್ಯ ಸಮಮ್ಮೇಳನದಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮ ನೀಡಿದ್ದಾಳೆ. ಧರ್ಮ ಸಂಸ್ಕೃತಿ ಪ್ರತಿಷ್ಠಾನದವರಿಂದ ಸಂಸ್ಕೃತ ಪೋಷಕಿ -2013 ಪ್ರಶಸ್ತಿ, ಉಪಾಧ್ಯೆ ನೃತ್ಯ ವಿಹಾರದವರಿಂದ ನಾಟ್ಯಶ್ರೀ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಭರತನಾಟ್ಯದ ಸಿನೀಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ, ಮುಂಬೈನ ಗಂಧರ್ವ ಮಹಾವಿದ್ಯಾಲಯ ಇವರ ಭರತನಾಟ್ಯ ವಿಶಾರದ ಪರೀಕ್ಷೆಯನ್ನು ಪೂರೈಸಿದ್ದಾಳೆ.
ಏ. 21ರಂದು ನಡೆಯುವ ಸಮಾರಂಭದಲ್ಲಿ ಅರ್ಪಿತಾ ತೊಡೆಯಂ, ಅಲರಿಪು, ಜತಿಶ್ವರ, ಶಬ್ದಂ, ವರ್ಣ, ದೇವರನಾಮ, ಜಾವಳಿ, ತಿಲ್ಲಾನ ಮತ್ತು ಮಂಗಳಂ ನೃತ್ಯಬಂಧಗಳನ್ನು ಪ್ರಸ್ತುತಪಡಿಸಲಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.