ಧಾರವಾಡ

ಬೇರುಮಟ್ಟದಲ್ಲಿ ಸಂಶೋಧನಾ ಕ್ಷೇತ್ರ

Published On :

ಹುಬ್ಬಳ್ಳಿ: ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂಶೋಧನಾ ಕ್ಷೇತ್ರ ಇಂದಿಗೂ ಬೇರುಮಟ್ಟದಲ್ಲಿದೆ ಎಂದು ಡಿಸ್ನಿ-ಯುಟಿವಿ ವ್ಯವಸ್ಥಾಪಕ ನಿರ್ದೇಶಕ ರೋನ್ನಿ ಸ್ಕ್ರ್ಯೂವಾಲಾ ಹೇಳಿದರು.
ಭಾನುವಾರ ದೇಶಪಾಂಡೆ ಫೌಂಡೇಷನ್ ಮತ್ತು ದಿ ಇಂಡಸ್ ಎಂಟರಪ್ರನರ್ (ಟೈ) ಆಯೋಜಿಸಿದ್ದ ಮೈಸ್ಟೋರಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಲತಃ ಭಾರತ ಉದ್ಯಮಶೀಲ ರಾಷ್ಟ್ರವಾಗಿದ್ದರೂ ಮತ್ತು ದೇಶದ ಅಭಿವೃದ್ಧಿಗೆ ಉದ್ಯಮಶೀಲತೆ ಅಗತ್ಯವಾಗಿದ್ದರೂ ಕೂಡ ಸಂಶೋಧನೆ ಅತ್ಯಂತ ಕಡಿಮೆ ಇದ್ದು, 69 ಉದ್ಯಮಶೀಲ ರಾಷ್ಟ್ರಗಳ ಸಾಲಿನಲ್ಲಿ ಭಾರತ 65ನೇ ಸ್ಥಾನದಲ್ಲಿದೆ.
ಬಹುತೇಕ ಉದ್ಯಮಿಗಳು ಇಂದು ವ್ಯವಹಾರ ಕೇಂದ್ರೀಕರಿಸುತ್ತಿದ್ದು, ಇದಕ್ಕೆ ಬದಲಿಗೆ ಉದ್ಯಮಿ ಗ್ರಾಹಕ ತನ್ನ ಅಂತಿಮ ಗುರಿ ಎಂದು ತಿಳಿದುಕೊಂಡರೆ ಉದ್ಯಮದಲ್ಲಿ ಯಶಸ್ಸು ಸಾಧ್ಯ. ಅತ್ಯಧಿಕ ಜನಸಂಖ್ಯೆ ಇರುವ ಭಾರತದಲ್ಲಿ ಉದ್ಯಮಿಗಳು ನೇರವಾಗಿ ಗ್ರಾಹಕರನ್ನು ತಲುಪುವ ಯತ್ನ ಮಾಡಿದಲ್ಲಿ ಖಂಡಿತವಾಗಿ ಭವಿಷ್ಯದಲ್ಲಿ ಉದ್ಯಮಶೀಲತೆ ಅಭಿವೃದ್ಧಿಯಾಗುತ್ತದೆ. ಈ ಮೂಲಕ ಉದ್ಯಮದ ಶೇರುದಾರರು ಮತ್ತು ಪಾಲುದಾರರಿಗೂ ಲಾಭ ದೊರೆಯುವಂತೆ ಮಾಡಬೇಕು ಎಂದರು.
ಉದ್ಯಮದಲ್ಲಿ ಯಶಸ್ಸು ಮುಖ್ಯವಾಗಿದ್ದು, ಶೇರುದಾರರಿಗೆ ಮತ್ತು ಸಂಸ್ಥೆಗೆ ಮೌಲ್ಯ ಬರುವಂತೆ ಉದ್ಯಮಿಗಳು ತಮ್ಮ ಕಾರ್ಯಶೈಲಿ ರೂಢಿಸಿಕೊಳ್ಳಬೇಕು. ಆರಂಭಿಸಲಿರುವ ಉದ್ಯಮದಿಂದ ಉಂಟಾಗುವ ಪರಿಣಾಮದ ಕುರಿತು ನವೋದ್ಯಮಿ ಚಿಂತನೆ ಮಾಡಬೇಕು. ಉದ್ಯಮದಿಂದ ಜನರ ಜೀವನ ಶೈಲಿ ಸ್ಥಿತಿಗತಿ ಬದಲಾಗುವಂತೆ ಉದ್ಯಮ ಕಾರ್ಯನಿರ್ವಹಿಸಬೇಕು. ಸಾಮಾನ್ಯವಾಗಿ ಉದ್ಯಮಿಗಳಿಗೆ ಕಾಡುವ ಭಯ ಮತ್ತು ಅಸುರಕ್ಷತೆ ಭಾವನೆಯನ್ನು ಗಂಭೀರವಾಗಿ ತೆಗೆದುಕೊಂಡು ಎದುರಿಸಿರುವ ಕೆಟ್ಟ ಪರಿಸ್ಥಿತಿಗಳಿಂದ ಸ್ಪಷ್ಟ ಮತ್ತು ವಿಭಿನ್ನ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಸ್ವದೇಸ್ ಫೌಂಡೇಷನ್ ಮುಖಾಂತರ ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ ತರುವುದಕ್ಕೆ ಕೆಲಸ ಮಾಡಲಾಗುತ್ತಿದೆ. ಇದರ ಜತೆಗೆ ಧರ್ಮಾರ್ಥ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಸ್ವದೇಸ್ ಫೌಂಡೇಷನ್‌ನ ಝರೀನಾ ಮೆಹ್ತಾ, ಉದ್ಯಮಶೀಲತೆ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು. ಉದ್ಯಮಶೀಲತಾ ಮನೋಭಾವ ರಕ್ತಗತವಾಗಬೇಕು. ಸೋಲುಗಳು ಉದ್ಯಮಶೀಲತೆಯ ಭಾಗವಾಗಿದ್ದರೂ ಅವುಗಳಿಂದ ಕಲಿಯಬೇಕು. ಸೋಲನ್ನು ಸೋಲಾಗಿ ತೆಗೆದುಕೊಳ್ಳದೇ ಉತ್ಪನ್ನದ ತಯಾರಿಕೆಯಲ್ಲಿ ಕಲಿಕಾ ಪ್ರವೃತ್ತಿ ಎಂದು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ದೇಶಪಾಂಡೆ ಫೌಂಡೇಷನ್‌ನ ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಮುಖ್ಯಾಧಿಕಾರಿ ನವೀನ ಝಾ ಮತ್ತು ನೀಲಂ ಮಹೇಶ್ವರಿ ಸೇರಿದಂತೆ ದಿ ಇಂಡಸ್ ಎಂಟರಪ್ರನರ್ಸ್‌ನ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.