ಧಾರವಾಡ

ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ

Published On :

ಕಲಘಟಗಿ: ಸಾರ್ವಜನಿಕರು ಪೊಲೀಸರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸ್ಥಳೀಯ ಕುಂದು ಕೊರತೆಗಳನ್ನು ಸಹಕಾರ ಮನೋಭಾವನೆಯೊಂದಿಗೆ ಮಾಹಿತಿ ನೀಡಬೇಕೆಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ ಮನವಿ ಮಾಡಿದರು.
ಸೋಮವಾರ ಸಂಜೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಜರುಗಿದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಪಾಲ್ಗೊಂಡ ಜನರ ಅಹವಾಲುಗಳನ್ನು ಆಲಿಸಿದರಲ್ಲದೆ ಬಹುದಿನಗಳಿಂದ ಇಲ್ಲಿನ ಠಾಣೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸುವ ಕುರಿತು ಭರವಸೆ ನೀಡಿದರು.
ಪಪಂ ಮಾಜಿ ಅಧ್ಯಕ್ಷ ಶಿವಾಜಿ ವಾಗ್ಮೋಡೆ, ಗಣ್ಯರಾದ ಬಾಬಾಸಾಬ ಕಾಶೀಂನವರ, ಸಿಪಿಐ ಅಮರೇಶ ಬಾರಕೇರ, ಬ್ರಹ್ಮಕುಮಾರ ಅಳಗವಾಡಿ, ಶಂಕರಗಿರಿ ಬಾವಾನವರ, ತಾಪಂ ಸದಸ್ಯ ಶೇಖಪ್ಪ ಹುಲಗೂರ, ಪಪಂ ಸದಸ್ಯರಾದ ನಾಗರಾಜ ಉಡುಪಿ,  ದೈವಜ್ಞ, ಮಹ್ಮದಖಾನ ಜಹಗೀರದಾರ, ಅಬ್ದುಲ್ ಕರೀಂ, ಅಬ್ದುಲ್ ಸತ್ತಾರ ಮಿಶ್ರಿಕೋಟಿ, ವೃಷಭೇಂದ್ರ ಪಟ್ಟಣಶೆಟ್ಟಿ, ಶಂಕರಗಿರಿ ಬಾವಾನವರ, ಸದಾನಂದ ಚಿಂತಾಮಣಿ, ಮಹಾಂತೇಶ ತಹಸೀಲ್ದಾರ, ರಾಮಣ್ಣ ಬಾರಕೇರ, ದ್ಯಾಮಣ್ಣ ನಿಗದಿ, ಯಲ್ಲಪ್ಪ ಧರೇಣ್ಣವರ, ಹನುಮಂತ ಸಾರಾವರಿ, ಜಫರುಲ್ಲಾಖಾನ ಜಹಗೀರದಾರ, ಹಜರೇಸಾಬ ಶಿಗ್ಗಾಂವಿ, ಹನುಮಂತ ಚವರಗುಡ್ಡ, ದ್ಯಾಮಣ್ಣ ನಿಗದಿ ಪಾಲ್ಗೊಂಡಿದ್ದರು.
--
ಸಂತ್ರಸ್ತರಿಗೆ ಪರಿಹಾರ ನಿಧಿ
ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ನೌಕರರ ಸಹಕಾರಿ ಪತ್ತಿನ ಸಂಘದ ವತಿಯಿಂದ ಉತ್ತರಾಖಂಡದಲ್ಲಿ ಪ್ರಕೃತಿ ವಿಕೋಪ ಒಳಗಾದ ಸಂತ್ರಸ್ತರಿಗೆ ಪರಿಹಾರ ನಿಧಿಗೆ ನೆರವು ನೀಡಲಾಯಿತು. ಕವಿವಿ ನೌಕರರ ಸಹಕಾರಿ ಪತ್ತಿನ ಸಂಘದ ಚೇರ್‌ಮನ್ ಆರ್.ಎಸ್.  ಪಾಟೀಲ ಅವರು ರು. 11,111 ಡಿಡಿಯನ್ನು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಡಾ. ಸುನಿತಾ ಸಿದ್ರಾಮ ಅವರ ಮೂಲಕ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಎಸ್.ಬಿ. ಕುದರಿ, ನಿರ್ದೇಶಕ ವೈ.ಎಂ. ಸಮಗಾರ, ಆರ್.ಜಿ. ಹಿರೇಮಠ, ವಿ.ಎಚ್. ಕಾಂಬಳೆ ಹಾಗೂ ಕಾರ್ಯದರ್ಶಿ ಎಸ್.ಆರ್. ಹಿರೇಮಠ ಇದ್ದರು.
ಮುಂದುವರಿಕೆಗೆ ಆಗ್ರಹ
ಧಾರವಾಡ: ಕವಿವಿ ಕುಲಸಚಿವರನ್ನಾಗಿ ಪ್ರೊ. ಜಿ.ಬಿ. ನಂದನ ಅವರನ್ನೇ ಮುಂದುವರಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು. ಈ ಸಂದರ್ಭವೇದಿಕೆ ಗೌರವಾಧ್ಯಕ್ಷ ಇಸ್ಮಾಯಿಲ್ ತಮಟಗಾರ, ಅಧ್ಯಕ್ಷ ತೋಟೇಶ್ವರ ಗುಡದೂರ, ಅಶೋಕ ದೊಡಮನಿ, ವೆಂಕಟೇಶ ಸಗಬಾಲ, ಪಾಡುರಂಗ ಪಮ್ಮಾರ, ಬಿ.ಎಫ್. ಗೊರವನಕೊಳ್ಳ, ಹನುಮಂತ ಅಂಬಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.