ಆಡಳಿತ ವ್ಯವಸ್ಥೆಗೆ ನ್ಯಾಯಾಂಗದ ಲಗಾಮು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 6
ದೇಶದ ಆಡಳಿತ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವಲ್ಲಿ ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಧಾರವಾಡ ಸಂಚಾರಿ ಹೈಕೋರ್ಟ್ ಪೀಠದ ನ್ಯಾ. ಎನ್. ಕುಮಾರ್ ಹೇಳಿದರು.
ರಾಜ್ಯ ಕಾನೂನು ವಿವಿಯ ಮತ್ತು ಕಾನೂನು ವಿವಿಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನ್ಯಾಯಿಕ ಪರಾಮರ್ಶೆ ಅಧಿಕಾರ ಕುರಿತು ಅವರು ಉಪನ್ಯಾಸ ನೀಡಿದರು.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಧ್ಯ ಅಧಿಕಾರ ಹಂಚಿಕೆಯಾಗಿದ್ದು, ಈ ಅಧಿಕಾರ ಹಂಚಿಕೆ ಸ್ಪಷ್ಟವಾಗಿಲ್ಲದಂತಹ ಸಂದರ್ಭದಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗದ ಅಧಿಕಾರ ಚಲಾವಣೆ ವೇಳೆ ಸಮಸ್ಯೆ ಉದ್ಛವಿಸಿದ ಸಮಸ್ಯೆಗಳನ್ನು ನ್ಯಾಯಾಂಗ ಅರ್ಥಪೂರ್ಣವಾಗಿ ಪರಿಹರಿಸಿದೆ ಎಂದರು.
ನ್ಯಾಯಿಕ ಪರಾಮರ್ಶೆ ಆಯಾ ಕಾಲಮಾನದ ಅಗತ್ಯತೆ ಅನುಸರಿಸಿ ಬೆಳೆದ ನ್ಯಾಯಾಂಗ ಪರಂಪರೆಯಾಗಿದೆ. ಅಲಿಖಿತ ಸಂವಿಧಾನವಿರುವ ಬ್ರಿಟನ್ನಲ್ಲಿ, ಸಾಂಪ್ರದಾಯಿಕ ಕಾನೂನುಗಳ ನ್ಯಾಯಿಕ ಪರಾಮರ್ಶೆ ಅಂದರೆ, ಕಾನೂನಿನಲ್ಲಿನ ದೋಷಗಳನ್ನ್ನು ಸರಿಪಡಿಸುವ ಕಾರ್ಯ 1610ರಿಂದ ಆರಂಭವಾಗಿದ್ದು, ಅಲ್ಲಿನ ಕಾನೂನು ಸುಧಾರಣೆಗಳ ಬಗ್ಗೆ ಬ್ರಿಟನ್ನ ನ್ಯಾಯಾಲಯ ನೀಡಿದ ತೀರ್ಪುಗಳು ಕಾನೂನಿನ ರೂಪದಲ್ಲಿ ಇಂದಿಗೂ ಪ್ರಶ್ನ್ನಾತೀತವಾಗಿ ಮುಂದುವರಿದಿವೆ.
ಭಾರತದಲ್ಲೂ ಈ ಕಾನೂನಾತ್ಮಕ ಪರಂಪರೆ ಮುಂದುವರಿದಿದ್ದು, ಇಲ್ಲೂ ಸಂವಿಧಾನದ ಕಲಂಗಳಿಗೆ ಇಲ್ಲವೆ ಸಂಸತ್ತು ಜಾರಿಗೊಳಿಸಿದ ಕಾನೂನುಗಳ ಬಗ್ಗೆ ದೇಶದ ಅತ್ಯುನ್ನ್ನತ ನ್ಯಾಯಾಲಯ ನೀಡಿದ ತೀರ್ಪುಗಳನ್ನು ಪ್ರಶ್ನ್ನಿಸಿದ್ದಿಲ್ಲ. ಆದ್ದರಿಂದ, ನ್ಯಾಯಾಂಗ ತನ್ನ್ನ ನ್ಯಾಯಿಕ ಪರಾಮರ್ಶೆ ಕಾರ್ಯದಿಂದ ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಮಿಗಿಲಾದುದು ಎಂಬುದನ್ನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ವಿವಿ ಕುಲಪತಿ ಡಾ. ಟಿ.ಅರ್. ಸುಬ್ರಹ್ಮಣ್ಯ ಅವರು, ನಮ್ಮ ನ್ಯಾಯಾಂಗ ವ್ಯವಸ್ಥೆಯಿಂದಾಗಿ ದೇಶ ಪ್ರಗತಿ ಪಥದಲ್ಲಿ ಮುನ್ನ್ನಡೆಯುತ್ತಿದೆ. ನ್ಯಾಯದ ತಳಹದಿ ಮೇಲೆ ಎಂದೋ ನೀಡಲ್ಪಟ್ಟ ತೀರ್ಪು ಹಾಗೂ ರಚಿಸಿದ ಕಾನೂನುಗಳು ದೇಶದಲ್ಲಿ ಇಂದಿಗೂ ಪ್ರಸ್ತುತತೆ ಉಳಿಸಿಕೊಂಡಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೌಲ್ಯ್ನ ಹೆಚ್ಚಿಸಿವೆ ಎಂದರು.
ಕಾನೂನು ವಿ.ವಿ.ಯ ರಜಿಸ್ಟ್ರಾರ್ ಸುಭಾಷ ಮಳಖೇಡೆ ಸ್ವಾಗತಿಸಿದರು. ಸಮಾರಂಭದಲ್ಲಿ ರಜಿಸ್ಟ್ರಾರ್ (ಮೌಲ್ಯಮಾಪನ) ಡಾ. ಬಿ.ಎಸ್. ರೆಡ್ಡಿ, ಕಾನೂನು ಶಾಲೆ ನಿರ್ದೇಶಕ ಡಾ. ಸಿ.ಎಸ್. ಪಾಟೀಲ ಮತ್ತು ವಿವಿ ಹಿರಿಯ ಅಧಿಕಾರಿಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಕಾನೂನು ವಿವಿ ಕಾನೂನು ಶಾಲೆಯ ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

