ಧಾರವಾಡ

ಯುವ ಜನಾಂಗದಲ್ಲಿ ದೇಶಾಭಿಮಾನದ ಕೊರತೆ

Published On :

ಧಾರವಾಡ: ಈಗಿನ ಯುವ ಜನಾಂಗದಲ್ಲಿ ದೇಶಾಭಿಮಾನದ ಕೊರತೆ ಕಂಡುಬರುತ್ತಿದೆ ಎಂದು ಹೋಟೆಲ್ ಉದ್ಯಮಿ ಸಂತೋಷ ಶೆಟ್ಟಿ ಹೇಳಿದರು.
ಜಿ.ಇ.ಟಿ ಸಮೂಹ ಶಿಕ್ಷಣ ಸಂಸ್ಥೆ, ವೀರಭದ್ರೇಶ್ವರ ಮಾರ್ಕೆಟಿಂಗ್ ಮತ್ತು ಗ್ರೀನ್ ಆರ್ಮಿ ಜಂಟಿಯಾಗಿ 67ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗಾಗಿ ಭಾರತ ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳು ವಿಷಯದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ಮೂಡಿಬರಲಿ ಎಂದರು.
ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಎಂ. ದಾಟನಾಳ ಮಾತನಾಡಿ, ಚಿತ್ರಕಲೆಗೆ ಒಂದು ಅಮೋಘ ಶಕ್ತಿ ಇದ್ದು, ಮಕ್ಕಳಲ್ಲಿ ಪ್ರತಿಹಂತದಲ್ಲಿಯೂ ಅದರ ಬಳಕೆಯಿಂದ ಅನೇಕ ಅದ್ಭುತ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಈ ಚಿತ್ರಕಲಾ ಸ್ಪರ್ಧೆಯೇ ಸಾಕ್ಷಿ. ಈ ಸ್ಪರ್ಧೆ ರಾಷ್ಟ್ರಪ್ರೇಮದ ಜಾಗೃತಿ ಮೂಡಿಸಲು ಅದ್ಭುತ ಸಾಧನ ಎಂದರು.
ವೀರಭದ್ರೇಶ್ವರ ಮಾರ್ಕೆಟಿಂಗ್ ಸಮೂಹದ ಚಂದ್ರಶೇಖರ ಭೈರಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಅನಿಲ ಅಳ್ಳೊಳ್ಳಿ, ಪ್ರಕಾಶ ಗೌಡರ, ನಂದೀಶ ಕಡಕೋಳ ಇದ್ದರು. ವಿವಿಧ ಶಾಲೆ 350 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಹುಮಾನ ವಿತರಣೆ, ಚಿತ್ರಕಲೆಗಳ ಪ್ರದರ್ಶನ ಭಾನುವಾರ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.