ಗುಂಪು ಘರ್ಷಣೆ: 8 ಜನರಿಗೆ ಗಂಭೀರ ಗಾಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 16
ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹಳೇಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದ ಗುಂಪು ಘರ್ಷಣೆ ಮತ್ತು ಕಲ್ಲು ತೂರಾಟದಲ್ಲಿ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿಕ್ಕಲಿಗಾರ ಸಮಾಜದವರು ಹೆಚ್ಚಾಗಿ ವಾಸಿಸುತ್ತಿರುವ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾದ ಸುರೇಶ ಶಟವಾ ಮತ್ತು ಅವರ ಪತ್ನಿ ಲಕ್ಷ್ಮಿ ಶಟವಾ ಇನ್ನಿತರ ಸಂಗಡಿಗರು ಸೇರಿಕೊಂಡು ಶಿವಶಂಕರ ಕಾಲೋನಿಯ ಬಾಬು ಪೂಜಾರ ಎಂಬುವವರ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗುಂಪು ಘರ್ಷಣೆ ಮತ್ತು ಕಲ್ಲು ತೂರಾಟದಲ್ಲಿ ಪರಶುರಾಮ ಪೂಜಾರ, ಮಂಜು ರಾಮಪ್ಪ ಪೂಜಾರ, ಯಲ್ಲಪ್ಪ ರಾಮಪ್ಪ ಪೂಜಾರ, ನಬಿಯಪ್ಪ ಗುಳಪ್ಪ ಪೂಜಾರ, ಅಡಿವೆಪ್ಪ ನಾರಾಯಣ ಪೂಜಾರ, ಧನರಾಜ ಗುಳಪ್ಪ ಪೂಜಾರ ಅವರ ಮೇಲೆ ಹಲ್ಲೆ ನಡೆದಿದ್ದು ಆರು ಜನರನ್ನು ಕಿಮ್ಸ್ಗೆ ದಾಖಲಿಸಿದ್ದರೆ ಇನ್ನಿಬ್ಬರು ಸಿಟಿ ಕ್ಲಿನಿಕ್ಗೆ ದಾಖಲಿಸಲಾಗಿದೆ.
ಸುರೇಶ ಶಟವಾ ಮತ್ತು ಲಕ್ಷ್ಮಿ ಶಟವಾ ಅವರು ಕಳೆದ ಹಲವಾರು ದಿನಗಳಿಂದ ಶಿಕ್ಕಲಿಗಾರ ಸಮಾಜದವರು ಹೆಚ್ಚಾಗಿ ವಾಸಿಸುತ್ತಿರುವ ಶಿವಶಂಕರ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಪೊಲೀಸರು ಕೂಡ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಕಿದ್ದರು. ಶಿವಶಂಕರ ಕಾಲೋನಿ ನಿವಾಸಿ ಬಾಬು ಪೂಜಾರ ಅವರು ಪೊಲೀಸ್ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಶಂಕೆಯಿಂದ ಸುರೇಶ ಮತ್ತು ಲಕ್ಷ್ಮಿ ಶಟವಾ ಸೇರಿಕೊಂಡು ಪೂಜಾರ ಗುಂಪಿನ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿ ಖಾರದಪುಡಿ, ಬಡಿಗೆ ಹಾಗೂ ಕಲ್ಲಿನ ರಾಶಿಗಳು ದೊರೆತಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಏಕಾಏಕಿ ಸಂಭವಿಸಿದ ಕಲ್ಲುತೂರಾಟದಿಂದ ಶಿವಶಂಕರ ಕಾಲೋನಿಯ 2ನೇ ಕ್ರಾಸ್ನಲ್ಲಿ ಕೆಲವು ಗಂಟೆಗಳ ಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ದಾಳಿಗೆ ಕಾರಣ...
ಸುರೇಶ ಶಟವಾ- ಲಕ್ಷ್ಮಿ ಶಟವಾ ಹಲವಾರು ದಿನಗಳಿಂದ ಶಿಕ್ಕಲಿಗಾರ ಸಮಾಜದವರು ಹೆಚ್ಚಾಗಿ ವಾಸಿಸುತ್ತಿರುವ ಶಿವಶಂಕರ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಪೊಲೀಸರು ಕೂಡ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಕಿದ್ದರು. ಶಿವಶಂಕರ ಕಾಲೋನಿ ನಿವಾಸಿ ಬಾಬು ಪೂಜಾರ ಅವರು ಪೊಲೀಸ್ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಶಂಕೆಯಿಂದ ಸುರೇಶ ಮತ್ತು ಲಕ್ಷ್ಮಿ ಶಟವಾ ಸೇರಿಕೊಂಡು ಪೂಜಾರ ಗುಂಪಿನ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

