ನಿವಾಸಿಗಳಿಂದ ಪಾಲಿಕೆ ಉದ್ಯಾನ ಶುಚಿ
ಧಾರವಾಡ: ಪ್ರಸ್ತುತ ಮಾನವನ ದುರಾಸೆಗೆ ಪ್ರಕೃತಿ ಬಲಿಯಾಗುತ್ತಿದೆ. ಆದರೆ, ಇಂತಹ ಸಂದರ್ಭ ಅರ್ಥಪೂರ್ಣವಾಗಿ ವನಮಹೋತ್ಸವ ಆಚರಿಸಬೇಕೆಂದು ಬಡಾವಣೆಯ ಹಿರಿಯರಾದ ಸುರೇಶ ಕುಲಕರ್ಣಿ ಹೇಳಿದರು.
ಇಲ್ಲಿನ ಹಳೆ ಶ್ರೀನಗರದ ನಿಯೋಜಿತ ಶ್ರೀನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡಾವಣೆಯಲ್ಲಿ ಕಾಡಿನಂತಿದ್ದ ಪಾಲಿಕೆಯ ಉದ್ಯಾನವನವನ್ನು ಇಲ್ಲಿನ ನಿವಾಸಿಗಳೇ ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಿ ಸಸಿಗಳನ್ನು ನೆಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅಲ್ಲದೆ, ಇಂತಹ ಕಾರ್ಯಕ್ರಮಗಳ ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ನಿಯೋಜಿತ ಶ್ರೀನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಮರೇಶ ಅಮರಗೋಳ, ಉಪಾಧ್ಯಕ್ಷ ಬಸವರಾಜ ನಾಯಕನೂರ, ಪ್ರಧಾನ ಕಾರ್ಯದರ್ಶಿ ನಂದೀಶ ಕಡಕೋಳ, ಸಹ ಕಾರ್ಯದರ್ಶಿ ಪ್ರಭು ಕೊಂಗಿ, ಖಜಾಂಚಿಯಾಗಿ ಮಹೇಶ ತಲ್ಲೂರ, ಸದಸ್ಯರಾಗಿ ಗಿರೀಶ ಕೊಂಗಿ, ಚೇತನ ಅಗಸನಕೊಪ್ಪ ಇವರನ್ನು ನೇಮಕ ಮಾಡಲಾಯಿತು.
ಡಾ. ಎಸ್.ಜಿ. ಭಾರತಿ ಮಾತನಾಡಿದರು. ಕಸ್ತೂರಿ ಹಕಾರಿ, ಎಸ್.ಎ. ಕೊಂಗಿ, ಎಂ.ಎಲ್. ಕೆರೂರ, ಕೆ.ಬಿ. ಜೋಡಳ್ಳಿ, ಎಸ್.ಬಿ. ಕಡಕೋಳ, ಎಸ್.ಎಸ್. ಜೋಗರೆಡ್ಡಿ, ಬಿ.ಎನ್. ದೇವಗಿರಿ, ಅಶೋಕ ಮೂಟೆ, ಬಿ.ಕೆ. ಓಲೇಕಾರ, ಮಹಾಬಳೇಶ ಕಡಕೋಳ, ವೃಷಭ ಕುರಕುರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

