ಸ್ವಾತಂತ್ರ್ಯೋತ್ಸವ
ಜಿಮಖಾನಾ ಮೈದಾನ: ತೀವ್ರಗೊಂಡ ಹೋರಾಟ
ಹುಬ್ಬಳ್ಳಿ: ಜಿಮಖಾನಾ ಮೈದಾನವನ್ನು ಕಬಳಿಸುವ ಷಡ್ಯಂತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಭಾಗಿಯಾಗಿದ್ದು, ಅವರಿಂದ ಕುಂಭಕೋಣಂ ಬಡಾವಣೆ ನಿವಾಸಿಗಳಿಗೆ ದ್ರೋಹವಾಗಿದೆ ಎಂದು ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ ಆಪಾದಿಸಿದರು. ರಿಕ್ರಿಯೆಷನ್ ಕ್ಲಬ್ ಅಧ್ಯಕ್ಷ ಡಾ. ಸುಭಾಷ್ ಜೋಶಿ ಅವರ ಮನೆ ಎದುರು ಶನಿವಾರ ಗ್ರೌಂಡ್ ಬಚಾವೋ ಸಮಿತಿ ಮತ್ತಿತರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದರು. ಹುಬ್ಬಳ್ಳಿಯಲ್ಲಿ ಜೋಶಿ ಮನೆತನ ಸಭ್ಯತೆಗೆ ಹೆಸರು ವಾಸಿ. ಆದರೆ, ಡಾ. ಸುಭಾಷ ಜೋಶಿ ದಾರಿ ತಪ್ಪಿದ ಮಗನಂತಾಗಿದ್ದಾರೆ. ಹೋರಾಟದ ಸ್ವರೂಪ ನೋಡಿದ ನಂತರ ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಡಾ. ಸುಭಾಷ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಹೋರಾಟಕ್ಕೆ ಮೊದಲು ಗೌರವಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಇದ್ದರು ಎಂದು ದೂರಿದರು. ಡಾ. ಸುಭಾಷ ಜೋಶಿ ಮೈದಾನ ಕಬಳಿಸಿ ಹುಬ್ಬಳ್ಳಿ ನಾಗರಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕೇವಲ 3 ಮೈದಾನಗಳಿವೆ. ಜಿಮಖಾನಾ ಮೈದಾನ ನುಂಗಿರುವವರು ಮುಂದೊಂದು ದಿನ ರೇಲ್ವೆ ಮತ್ತು ನೆಹರು ಮೈದಾನವನ್ನೂ ತಮ್ಮದಾಗಿಸಿಕೊಳ್ಳಲಿದ್ದಾರೆ ಎಂದರು. ಗ್ರೌಂಡ್ ಬಚಾವೋ ಸಮಿತಿ ವೆಂಕಟೇಶ ಸವದತ್ತಿ, ಶರದ್ ಭಗತ್, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕ ಶೈಲೇಂದ್ರಕುಮಾರ್ ಪಾಟೀಲ, ಅಭಿಮನ್ಯು ಮಡಿವಾಳರ, ನ್ಯಾಯವಾದಿ ಶೀಲಾ ಮಿರ್ಜಿ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿದ್ದರು.
ಶೆಟ್ಟರೇ ನೇತೃತ್ವ ವಹಿಸಲಿ: ಜಿಮಖಾನಾ ಮೈದಾನದ ಹಸ್ತಾಂತರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಕುಮ್ಮಕ್ಕು ಇದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮಾಜಿ ಸಿಎಂ ಶೆಟ್ಟರ್ ಈ ಮೈದಾನಕ್ಕಾಗಿ ನಡೆಯುತ್ತಿರುವ ಹೋರಾಟದ ನೇತೃತ್ವ ವಹಿಸಿ ಆರೋಪ ನಿರಾಕರಿಸಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಶನಿವಾರ ಜಿಮಖಾನಾ ಮೈದಾನದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕಮಿಟಿ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಹೋರಾಟ ಬೆಂಬಲಿಸಿದರು. ಸಿಬಿಎಲ್ ಹೆಗ್ಡೆ, ಕರವೇ ಅಧ್ಯಕ್ಷ ಅಮೃತ ಇಜಾರಿ, ಮನೋಜ ಹಾನಗಲ್, ಶರದ್ ಭಗತ್, ಶೈಲೇಂದ್ರಕುಮಾರ್ ಪಾಟೀಲ ಇನ್ನಿತರರಿದ್ದರು.
ನಾಳೆ ಛಾಯಾಗ್ರಾಹಕರ ದಿನ
ನವಲಗುಂದ: ಪಟ್ಟಣದ ಆನಂದ ಪೋಟೋ ಸ್ಟುಡಿಯೋದಲ್ಲಿ ತಾಲೂ ಕು ಪೋಟೋ ಮತ್ತು ವಿಡಿಯೋ ಗ್ರಾಫರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಆ.19ರಂದು ಬೆಳಿಗ್ಗೆ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಚರಿಸಲಾಗುತ್ತಿದೆಂದು ಸಂಘದ ಅಧ್ಯಕ್ಷ ಗಂಗಪ್ಪ ಚಿಕ್ಕಣ್ಣವರ ತಿಳಿಸಿದ್ದಾರೆ.
ನಾಳೆ ವೀರಭದ್ರೇಶ್ವರ ಜಾತ್ರೆ
ನವಲಗುಂದ: ತಾಲೂಕಿನ ಯಮನೂರಿನಲ್ಲಿ ಆ.19ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

