ಸ್ವಾತಂತ್ರ್ಯೋತ್ಸವ
ವಿಶ್ವ ಸೊಳ್ಳೆ ದಿನಾಚರಣೆ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ವಿಶ್ವ ಸೊಳ್ಳೆ ದಿನ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಘಂಟಿಕೇರಿ ಓಣಿಯ ಬಸವಣ್ಣ ದೇವರ ದೇವಸ್ಥಾನದ ಬಳಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪಿ.ಎನ್. ಬಿರಾದಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಫಾಗಿಂಗ್ ಹಾಗೂ ಕ್ರಿಮಿನಾಶಕ ಔಷಧಿ ಸಿಂಪಡಿಸಲಾಯಿತು. ಸುತ್ತಲಿನ ರಹವಾಸಿಗಳಿಗೆ ಕರಪತ್ರ ವಿತರಿಸಲಾಯಿತು. ಸೊಳ್ಳೆಗಳಿಂದ ಬರುವ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಪೈಲೇರಿಯಾ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರು ಸೊಳ್ಳೆ ಕಚ್ಚದ ಹಾಗೆ ಸೊಳ್ಳೆ ಪರದೆ ಬಳಸಬೇಕು. ಓಡೋಮಸ್ ಕ್ರೀಮ್ ಬಳಸಬೇಕು. ಮನೆಯ ಸುತ್ತ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಮನೆಯಲ್ಲಿ ನೀರು ತುಂಬಿದ ಟ್ಯಾಂಕರ್, ತೊಟ್ಟಿಗಳನ್ನು ಮುಚ್ಚಬೇಕು ಹಾಗೂ ಸೊಳ್ಳೆಗಳು ತತ್ತಿ ಹಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಪಾಲಿಕೆ ಆರೋಗ್ಯ ಕಾರ್ಯಕರ್ತರು ನಾಗರಿಕರಿಗೆ ತಿಳಿವಳಿಕೆ ನೀಡಿದರು. ಪಾಲಿಕೆ ಸದಸ್ಯ ನಾರಾಯಣ ಜರತಾರಘರ, ಡಾ. ನೀಲಾ ಹೂಲಿ, ವಲಯ ಸಹಾಯಕ ಆಯುಕ್ತ ಶೆಟ್ಟರ್ ಮತ್ತಿತರರು ಹಾಜರಿದ್ದರು.
ರೈಲಿಗೆ ಹೆಚ್ಚುವರಿ ಬೋಗಿ
ಹುಬ್ಬಳ್ಳಿ: ಕಾಕಿನಾಡಾ ಬೆಂಗಳೂರು ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಹೆಚ್ಚುವರಿಯಾಗಿ ಒಂದು ಎಸಿ 3 ಟೈರ್ ಕೋಚ್ ಅಳವಡಿಸಲಾಗಿದೆ ಎಂದು ನೈಋತ್ಯ ರೇಲ್ವೆ ತಿಳಿಸಿದೆ. ಕಾಕಿನಾಡಾ ಎಕ್ಸ್‌ಪ್ರೆಸ್ ರೈಲು ಈಗ ಎರಡು ಎಸಿ ಟೈರ್ ಕೋಚ್‌ಗಳು, ಮೂರು ಎಸಿ ಟೈರ್ ಕೋಚ್‌ಗಳು, 9 ಸ್ಲೀಪರ್ ಕ್ಲಾಸ್ ಕೋಚ್‌ಗಳು ಮೂರು ಜನರಲ್ ಕ್ಲಾಸ್ ಬೋಗಿಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ರೀಡಾಕೂಟಕ್ಕೆ ಚಾಲನೆ
ನವಲಗುಂದ: ಮಕ್ಕಳು ವಿದ್ಯಾಬ್ಯಾಸದ ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಕಿವಿಮಾತು ಹೇಳಿದರು. ಇಲ್ಲಿಯ ಬಸವೇಶ್ವರ ನಗರದ ಸ.ಹಿ.ಪ್ರಾ. ಶಾಲೆ ನಂ. 6ರಲ್ಲಿ ಸಿಆರ್‌ಸಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಜಿ. ನಾರಪುರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಏಕನಾಥ ಜಾಧವ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಸುವರ್ಣಾ ಅರಕೇರಿ, ದೈಹಿಕ ಶಿಕ್ಷಣಾಧಿಕಾರಿ ಬಿ.ಜಿ. ತೋಗರಿ, ಮುಖ್ಯಾಧ್ಯಾಪಕಿ ಜಿ.ಎನ್. ಜೋಶಿ ಮಾತನಾಡಿದರು. ನಾಗಪ್ಪ ಸುರೇಬಾನ, ರುದ್ರಪ್ಪ ಬೆಂಡಿಗೇರಿ, ಅಬ್ದುಲ್ ನದಾಫ್, ರೇಣುಕಾ ಸಂಭಣ್ಣವರ, ಮಂಜುಳಾ ಮುತ್ತಳಗೇರಿ, ನೀಲವ್ವ ಕುಂದಗೋಳ ಉಪಸ್ಥಿತರಿದ್ದರು. ಎ.ಬಿ. ಕೊಪ್ಪದ ಸ್ವಾಗತಿಸಿದರು. ಎಸ್.ಎಫ್. ಈರಡ್ಡಿ ನಿರೂಪಿಸಿದರು. ಮಹೇಶ ಸಂಗನಪ್ಯಾಟ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

